ಧಾರ್ಮಿಕ ಕೇಂದ್ರ ಸಮಾಜದ ಅಭಿವೃದ್ಧಿಯ ಕೇಂದ್ರ

ಹಳೆಯಂಗಡಿ : ಸಾಮಾಜಿಕ ಸಂಸ್ಕಾರ ಧಾರ್ಮಿಕ ಪ್ರಜ್ಞೆ ಮೂಡಲು ಧಾರ್ಮಿಕ ಕೇಂದ್ರ ಕಾಲಕ್ಕೆ ಸರಿಯಾಗಿ ಅಭಿವೃದ್ಧಿಗೊಳ್ಳುವುದು ಬಹಳ ಅಗತ್ಯ. ಹಿರಿಯರು ಸಂಘಟನಾತ್ಮಕ ಕಾರ್ಯಗಳಿಗೆ ಕಿರಿಯರನ್ನು ಸೇರಿಸಿಕೊಂಡು ಸಂಘಟಿತ ಯುವ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಮುಂಬಯಿಯ ಉದ್ಯಮಿ ದೀಪಕ್ ಶೆಣೈ ಹೇಳಿದರು.
ಹಳೆಯಂಗಡಿಯ ವಿಠೋಭ ಭಜನಾ ಮಂಡಳಿಯ ಮಂದಿರದ ಮೇಲ್ಛಾವಣಿ ಮತ್ತು ಅವರಣ ಗೋಡೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಣ್ಣಪ್ಪ ಯಾನೆ ಚರ್ಡಪ್ಪ ಶೆಣೈ ಟ್ರಸ್ಟಿ ಶಿವರಾಯ ಶೆಣೈ ಉದ್ಘಾಟಿಸಿದರು. ಭಜನಾ ಮಂಡಳಿ ಅಧ್ಯಕ್ಷ ಬಿ. ಗಣೇಶ್ ಕುಡ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೇಲ್ಛಾವಣಿಯನ್ನು ಪುಷ್ಪಾವತಿ ಭಟ್ ಅವರು ಹಾಗೂ ಅವರಣ ಗೋಡೆಯನ್ನು ಜಿಎಸ್‌ಬಿ ಮಹಿಳಾ ವಿಭಾಗದ ಅಧ್ಯಕ್ಷೆ ಗಾಯಿತ್ರಿ ಶಿವರಾಯ ಶೆಣೈ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಶ್ರೀನಿವಾಸ ಪ್ರಭು ಬ್ರಹ್ಮಾವರ, ಸೀತಾರಾಮ ಪ್ರಭು ಬ್ರಹ್ಮಾವರ, ಜ್ಯೋತಿಷ್ಯರಾದ ಶಿವರಾಯ ಭಟ್ ಪಾವಂಜೆ, ಅಣ್ಣಪ್ಪ ಯಾನೆ ಚರ್ಡಪ್ಪ ಶೆಣೈ ಟ್ರಸ್ಟಿಗಳಾದ ರಾಘವೇಂದ್ರ ಶೆಣೈ ಮಂಗಳೂರು, ವಾಸುದೇವ ಶೆಣೈ, ಭಜನಾ ಮಂಡಳಿಯ ಕೋಶಾಕಾರಿ ಎಚ್. ರಾಮಚಂದ್ರ ಪಿ. ಕಾಮತ್, ಉಪಾಧ್ಯಕ್ಷ ಕೆ. ಮಂಜುನಾಥ ಪ್ರಭು, ಸಹ ಕಾರ್ಯದರ್ಶಿಗಳಾದ ನರಸಿಂಹ ಮಾಧವ ಕಾಮತ್, ಗುರುದತ್ತ ಪಾಂಡುರಂಗ ಕಾಮತ್, ಉಪ ಕೋಶಾಕಾರಿ ಎಚ್.ವಿಠಲ ಕೇಶವ ಕಾಮತ್, ವಿಶ್ವನಾಥ ಪ್ರಭು ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಕಾರ್ಯದರ್ಶಿ ಡಾ.ಎಚ್. ಶಿವಾನಂದ ಪ್ರಭು ಸ್ವಾಗತಿಸಿದರು, ಶ್ರಿಕಾಂತ್ ಶೆಣೈ ವಂದಿಸಿದರು.
Haleyangadi-28101701

Comments

comments

Comments are closed.

Read previous post:
ಎಸ್. ನಾರಾಯಣ ರಾವ್

ಸಸಿಹಿತ್ಲು : ಸಸಿಹಿತ್ಲು ಹಳೆಯ ಶಾಲೆಯ ಬಳಿಯ ಎಸ್. ನಾರಾಯಣ ರಾವ್ (58ವ. ) ಶುಕ್ರವಾರ ಮಣಿಪಾಲದ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಕಾರ್ಪೋರೇಷನ್ ಬ್ಯಾಂಕ್ ಸುರತ್ಕಲ್ ಬ್ರಾಂಚಿನಲ್ಲಿ...

Close