ಯುಗಪುರುಷದಲ್ಲಿ ಕನ್ನಡ ರಾಜ್ಯೋತ್ಸವ

ಕಿನ್ನಿಗೋಳಿ : ಕನ್ನಡ ರಾಜ್ಯೋತ್ಸವದ ಸುಸಂದರ್ಭ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ, 71ನೇ ವರ್ಷದ ಸಂಭ್ರಮದಲ್ಲಿರುವ ದಿ.ಕೊ.ಅ.ಉಡುಪರಿಂದ ಸಂಸ್ಥಾಪಿಸಲ್ಪಟ್ಟ ಯುಗಪುರುಷ ಸಂಸ್ಥೆಯ ನೇತೃತ್ವದಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನವೆಂಬರ್ 1 ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿದೆ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರುರವರು ವಹಿಸಲಿದ್ದಾರೆ. ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಹಾಗೂ ಕವಯತ್ರಿ ಆಗಿರುವ ಕಸ್ತೂರಿ ಪಂಜ ಉದ್ಘಾಟಿಸಲಿರುವರು. ಅತಿಥಿಗಳಾಗಿ ಸಾಹಿತಿ ಗಣೇಶ್ ಮಲ್ಯ, ತೋಕೂರು ಐಟಿಐನ ಪ್ರಾಂಶುಪಾಲರಾದ ವೈ.ಎನ್.ಸಾಲ್ಯಾನ್, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಶಿಮಂತೂರು ಶ್ರೀ ಶಾರದಾ ಮೋಡೆಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್.ಎಂ. ಭಾಗವಹಿಸಲಿರುವರು.
ಈ ಸಂದರ್ಭ ವಿಶೇಷ ಸೇವೆ ಸಲ್ಲಿಸಿದ ಪತ್ರಿಕಾ ಸಂಗ್ರಾಹಕ ಉಮೇಶ್ ರಾವ್ ಎಕ್ಕಾರು, ಸಾಹಿತಿ ಅಜಾರು ನಾಗರಾಜ ರಾಯ, ಧಾರ್ಮಿಕ ಚಿಂತಕ, ಸಾಹಿತಿ ಮೋಹನದಾಸ ಸುರತ್ಕಲ್, ಪತ್ರಕರ್ತ, ಕಲಾವಿದ ನರೇಶ್ ಸಸಿಹಿತ್ಲು, ಸಾಹಸಿ ಪ್ರಕಾಶ್ ಮರಾಠೆ ನಂದಾವರ, ಯೋಗ ಶಿಕ್ಷಕ, ಯಕ್ಷಗಾನ ಕಲಾವಿದ ಹರಿರಾಜ್ ಶೆಟ್ಟಿಗಾರ್ ಕುಜಿಂಗಿರಿ, ಕೆರೆಕಾಡು ಮಕ್ಕಳ ಮೇಳದ ವ್ಯವಸ್ಥಾಪಕ ಜಯಂತ ಕೆರೆಕಾಡು, ಅಂತಾರಾಪ್ಟ್ರೀಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಾಷ್ಟ್ರ ಮಟ್ಟದ ಯೋಗಪಟು ಶ್ರೇಯಾ, ಬಹುಮುಖ ಪ್ರತಿಭೆ ಆಶ್ವೀಜ ಉಡುಪ, ರಾಷ್ಟ್ರಮಟ್ಟದ ಕರಾಟೆಪಟು ಸಂಯುಕ್ತ ನಾಯರ್, ರಾಜ್ಯಮಟ್ಟದ ಕರಾಟೆಪಟು ಮನೀಷ್, ಬಹುಮುಖ ಪ್ರತಿಭೆ ಧೃತಿ ಕುಲಾಲ್ ಅವರನ್ನು ಸನ್ಮಾನಿಸಲಾಗುವುದು. ನಂತರ ಶಶಿಕಲಾ ಕೆಮ್ಮಡೆ ಇವರಿಂದ ನಾಡಹಬ್ಬದ ಗೀತಗಾಯನ ಹಾಗೂ ವಿದ್ಯಾರ್ಥಿಗಳಿಂದ ನೃತ್ಯ ಜರಗಲಿದೆಯೆಂದು ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Comments

comments

Comments are closed.

Read previous post:
Mulki-28101702
ಗೀತಾ ಜಿ.ರಾವ್

ಮೂಲ್ಕಿ: ಕೆನರಾ ಬ್ಯಾಂಕ್ ನಿವೃತ್ತ ಮಹಾ ಪ್ರಭಂದಕ ಕೆ.ಪಿ.ಜಿ.ರಾವ್ ರವರ ಪತ್ನಿ ಗೀತಾ ಜಿ.ರಾವ್ (76)ರವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಬೆಂಗಳೂರಿನ ಸ್ವಗ್ರಹದಲ್ಲಿ ನಿಧನಹೊಂದಿದರು. ಮೂಲ್ಕಿ...

Close