ಬಪ್ಪನಾಡು ದೇವಳದಲ್ಲಿ ಮುಷ್ಠಿ ಕಾಣಿಕೆ

ಮೂಲ್ಕಿ: ಬ್ರಹ್ಮಕಲಶ ಸಂಭ್ರಮದ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಅ.29 ಭಾನುವಾರ ಮುಷ್ಠಿ ಕಾಣಿಕೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಕೊಲ್ನಾಡುಗುತ್ತು ಪಾದೆಮನೆ ಜಯಂತ ರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾರ್ನಾಡು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎನ್.ಜಯ ಶೆಟ್ಟಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿರುವರು.
ಮೂಕ್ಯ ಅತಿಥಿಗಳಾಗಿ ಪಣಿಕೆರೆ ಜಯಂತ ಪ್ರಭು,ತ್ರಾಸಿ ಸುಧಾಕರ ಆಚಾರ್ಯ,ಒಡೇರಬೆಟ್ಟು ಕೇತು ಮರಕಾಲ ಮನೆಯ ಪ್ರೇಮಲತಾ ರಾಜೀವ ಬಂಗೇರ,ಜಗನ್ನಾಥ ವಿ.ಕೋಟ್ಯಾನ್ ಮುಂಬೈ ಮುಖ್ಯ ಅತಿಥಿಗಳಾಗಿರುವರು.
ಮುಷ್ಠಿ ಕಾಣಿಕೆಯ ಅಂಗವಾಗಿ ಸೀಮೆಯ ಪ್ರತಿಯೊಂದು ಮನೆಯಿಂದ ಶ್ರೀದೇವಿಗೆ ಮುಷ್ಠಿ ಕಾಣಿಕೆ ಮತ್ತು ತೆಂಗಿನಕಾಯಿ ಸಮರ್ಪಿಸುವಂತೆ ದೇವಳದ ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ,ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ.,ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Mulki-28101701
ಮೂಲ್ಕಿ ಹೊಸ ಅಂಗಣ ಮಾಸ ಪತ್ರಿಕೆ ಸನ್ಮಾನ

ಮೂಲ್ಕಿ: ಸಮಾಜ ಸೇವೆಯಲ್ಲಿ ಹೊಗಳಿಕೆ ಮತ್ತು ತೆಗಳಿಕೆ ಸಾಮಾನ್ಯವಾಗಿದ್ದು ಅದನ್ನು ಕಡೆಗಣಿಸಿ ನಿಸ್ವಾರ್ಥವಾದ ಸೇವೆಯನ್ನು ಮಾಡಿದಲ್ಲಿ ಮನಸ್ಸಿಗೆ ತೃಪ್ತಿ ಸಿಗಲು ಸಾಧ್ಯ, ಸಮಾಜದಲ್ಲಿ ಶ್ರಮ ಜೀವನ ಮಾಡುವವರನ್ನು...

Close