ಮುಲ್ಕಿ ನ.ಪಂನಿಂದ ಮದ್ಯದಂಗಡಿಗಳಿಗೆ ಪರವಾನಗಿ ಆರೋಪ

ಹಳೆಯಂಗಡಿ : ಬಿಜೆಪಿ ಆಡಳಿತದ ಮುಲ್ಕಿ ನಗರ ಪಂಚಾಯತಿ ಕೆಎಸ್‌ರಾವ್ ನಗರದಲ್ಲಿ ಅಕ್ರಮವಾಗಿ ಮದ್ಯದಂಗಡಿಗೆ ಪರವಾನಿಗೆ ನೀಡಿದ್ದಾರೆ ಎಂದು ಮುಲ್ಕಿ ನಗರಪಂಚಾಯಿತಿ ವಿಪಕ್ಷ ನಾಯಕಿ ವಿಮಲಾ ಪೂಜಾರಿ ಆರೋಪಿಸಿದ್ದಾರೆ. ಹಳೆಯಂಗಡಿಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಕಛೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುಲ್ಕಿ ನಗರ ಪಂಚಾಯತಿ ಆಡಳಿತ ಹೊಂದಿದ ಬಿಜೆಪಿ ಕಾನೂನು ಬಾಹೀರ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದೆ. ಮುಲ್ಕಿ ನ.ಪಂ. ವ್ಯಾಪ್ತಿಯ ಕಾರ್ನಾಡು (ಕೋಲ್ನಾಡು) ಕೈಗಾರಿಕಾ ಪ್ರದೇಶದ ನಿವೇಶನ ಸಂಖ್ಯೆ 19-102ಸಿ 9ರಲ್ಲಿ ವೈನ್ ಶಾಪ್ ಗ್ರೇಡ್-1 ಉದ್ಯಮಕ್ಕೆ ಅನುಮತಿ ನೀಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಗೆ ಸೇರಿದ ರಂಗನಾಥ ಶೆಟ್ಟಿ ಮಾಲಿಕತ್ವದ ಕಟ್ಟಡ ಸಂಖ್ಯೆ 19-102ಸಿ(9ರಲ್ಲಿ ವೈನ್ ಶಾಪ್‌ಗ್ರೇಡ್-1ಉದ್ದಿಮೆಯನ್ನು ಪ್ರಾರಂಬಿಸಲು ಅರ್ಜಿ ನೀಡಿದಾಗಲೂ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋದ ವ್ಯಕ್ತಪಡಿಸಿದ್ದರೂ ಲೆಕ್ಕಿಸದೆ ಪರವಾನಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮುಲ್ಕಿ ನಗರ ಪಂಚಾಯತಿ ವಿಶೇಷ ಸಭೆ ನಡೆಸಿದ್ದು ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಕತ್ತಲಲ್ಲಿಟ್ಟು ಕಟ್ಟಡಕ್ಕೆ ಪರವಾನಿಗೆ ನೀಡಲಾಗಿದೆ. ಇದರಿಂದಾಗಿ ಸ್ಥಳೀಯ ಜನರಿಗೆ ನಡೆದಾಡಲು ಮುಜುಗರವಾಗುತ್ತಿದ್ದು ಸುರಕ್ಷತೆ ಇಲ್ಲದಂತೆ ಆಗಿದೆ ಎಂದು ವಿಮಲಾ ಪೂಜಾರಿ ಆರೋಪಿಸಿದ್ದಾರೆ.
ಇಷ್ಟೆಲ್ಲಾ ಆದರೂ ದಿನಾಂಕ 24.07.2017ರ ವಿಶೇಷ ಸಭೆಯ ಕಾರ್ಯಸೂಚಿಯಲ್ಲಿ ವೈನ್ ಶಾಪ್‌ನ ವಿಷಯವನ್ನು ನಮೂದಿಸದೆ, ಕೆಐಡಿಬಿ ಪರವಾನಿಗೆ ಪಡೆಯದೆ ಕೇವಲ ಕಾರ್ನಾಡು ಸಣ್ಣ ಕೈಗಾರಿಕಾ ಎಸೋಸಿಯೇಶನ್ ಎಂಬ ಸಂಘದ ನಿರಾಪೇಕ್ಷಣಾ ಪತ್ರವನ್ನು ಪಡೆದು ನಿಯಮ ಬಾಹೀರವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಬಗ್ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅನುಮತಿ ನಿರಾಕರಣೆಯ ಆದೇಶ ನೀಡಿದರೂ ಮುಖ್ಯಾಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಿಮಲಾ ಪೂಜಾರಿ ಹೇಳಿದರು.
ಮುಂದಿನ ಮುಲ್ಕಿ ನ.ಪಂ. ಸಭೆಯಲ್ಲಿ ಧ್ವನಿ ಎತ್ತಲಾಗುವುದು ಅಲ್ಲದೆ ಸ್ಥಳೀಯ ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ವಿಮಲಾ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮುಲ್ಕಿ ನ.ಪಂ,ನ ಕಾಂಗ್ರೆಸ್ಸ್ ಸದಸ್ಯರಾದ ಬಿ ಎಂ ಆಸೀಫ್, ಪುತ್ತು ಬಾವ, ಯೋಗೀಶ್ ಕೋಟ್ಯಾನ್, ಹಸನ್ ಬಷೀರ್ ಕುಳಾಯಿ, ಜಬೀನಾ ಇಬ್ರಾಹಿಂ, ಕಲಾವತಿ, ಸಂದೀಪ್ ಚಿತ್ರಾಪು, ಅಶೋಕ್ ಪೂಜಾರ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-29101701
ತುಳುನಾಡಿನ ಆಚಾರ ವಿಚಾರಗಳಲ್ಲಿ ವೈಜ್ಞಾನಿಕ ಪಾತ್ರವಿದೆ.

ಕಿನ್ನಿಗೋಳಿ: ತುಳುನಾಡಿನ ಹಬ್ಬಗಳು, ಸಂಸ್ಕ್ರತಿ, ಆಚಾರ ವಿಚಾರಗಳು ಹಾಗೂ ಪ್ರಕೃತಿಯ ಆರಾಧನೆಗಳು ವೈಜ್ಞಾನಿಕತೆಯ ನೆಲೆಗಟ್ಟುಗಳನ್ನು ಒಳಗೊಂಡಿದೆ ಎಂದು ನಾಟಕಕಾರ ಪತ್ರಕರ್ತ ನರೇಶ್ ಸಸಿಹಿತ್ಲು ಹೇಳಿದರು. ಕಿನ್ನಿಗೋಳಿ ರೋಟರಿ ಕ್ಲಬ್,...

Close