ತುಳುನಾಡಿನ ಆಚಾರ ವಿಚಾರಗಳಲ್ಲಿ ವೈಜ್ಞಾನಿಕ ಪಾತ್ರವಿದೆ.

ಕಿನ್ನಿಗೋಳಿ: ತುಳುನಾಡಿನ ಹಬ್ಬಗಳು, ಸಂಸ್ಕ್ರತಿ, ಆಚಾರ ವಿಚಾರಗಳು ಹಾಗೂ ಪ್ರಕೃತಿಯ ಆರಾಧನೆಗಳು ವೈಜ್ಞಾನಿಕತೆಯ ನೆಲೆಗಟ್ಟುಗಳನ್ನು ಒಳಗೊಂಡಿದೆ ಎಂದು ನಾಟಕಕಾರ ಪತ್ರಕರ್ತ ನರೇಶ್ ಸಸಿಹಿತ್ಲು ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್, ಇನ್ನರ್‌ವೀಲ್ ಕ್ಲಬ್ ಹಾಗೂ ರೋಟರ‍್ಯಾಕ್ಟ್ ಕ್ಲಬ್‌ಗಳ ಆಶ್ರಯದಲ್ಲಿ ಭಾನುವಾರ ಕಿನ್ನಿಗೋಳಿ ರೋಟರಿ ರಜತಭವನದಲ್ಲಿ ನಡೆದ ದೀಪಾವಳಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ರಾಷ್ಟ್ರ ಮಟ್ಟದ ಸ್ವಚ್ಚ ವಿದ್ಯಾಲಯ ಪುರಸ್ಕ್ರತ ನಡುಗೋಡು ಶಾಲಾ ಮುಖ್ಯ ಶಿಕ್ಷಕಿ ಶೋಭಾ ಎನ್., ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕ್ರತ ಮದ್ಯ ಶಾಲಾ ಮುಖ್ಯ ಶಿಕ್ಷಕ ಶಂಕರ್, ಜೇಸೀಸ್ ಕಮಲಪತ್ರ ಪುರಸ್ಕ್ರತ ಶಿಕ್ಷಕ ಸಾಯಿನಾಥ ಶೆಟ್ಟಿ, ಜೇಸೀಸ್ ಕಲಾ ಸೌರಭ ಪುರಸ್ಕ್ರತ ಪತ್ರಕರ್ತ ಕಲಾವಿದ ಶರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಯತೀಶ್ ಕಟೀಲು ಅವರನ್ನು ರೋಟರಿ ಕ್ಲಬ್‌ಗೆ ನೂತನ ಸದಸ್ಯರನ್ನಾಗಿ ಸೇರ್ಪಡೆ ಗೊಳಿಸಲಾಯಿತು.
ಕಿನ್ನಿಗೋಳಿ ಇನ್ನರ್ ವೀಲ್ ಅಧ್ಯಕ್ಷೆ ರಾಧಾ ಶೆಣೈ, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ವಿಜೇತ್ ಸಿಕ್ವೇರಾ, ಕಿನ್ನಿಗೋಳಿ ರೋಟರಿ ನಿಯೋಜಿತ ಅಧ್ಯಕ್ಷ ಕೆ. ಬಿ. ಸುರೇಶ್ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಪಿ. ಸತೀಶ್ ರಾವ್ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಅಧ್ಯಕ್ಷೆ ಸವ್ರಿನ್ ಲೋಬೋ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. Kinnigoli-29101701

Comments

comments

Comments are closed.

Read previous post:
Haleyangadi-28101701
ಧಾರ್ಮಿಕ ಕೇಂದ್ರ ಸಮಾಜದ ಅಭಿವೃದ್ಧಿಯ ಕೇಂದ್ರ

ಹಳೆಯಂಗಡಿ : ಸಾಮಾಜಿಕ ಸಂಸ್ಕಾರ ಧಾರ್ಮಿಕ ಪ್ರಜ್ಞೆ ಮೂಡಲು ಧಾರ್ಮಿಕ ಕೇಂದ್ರ ಕಾಲಕ್ಕೆ ಸರಿಯಾಗಿ ಅಭಿವೃದ್ಧಿಗೊಳ್ಳುವುದು ಬಹಳ ಅಗತ್ಯ. ಹಿರಿಯರು ಸಂಘಟನಾತ್ಮಕ ಕಾರ್ಯಗಳಿಗೆ ಕಿರಿಯರನ್ನು ಸೇರಿಸಿಕೊಂಡು ಸಂಘಟಿತ ಯುವ...

Close