ಪಕ್ಷಿಕೆರೆ : ಅಂಗೈಯಲ್ಲಿ ಆರೋಗ್ಯ

ಕಿನ್ನಿಗೋಳಿ: ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಗ್ರಾಮೀಣ ಪ್ರದೇಶದಲ್ಲಿ ವರ್ಷವಿಡಿ ಜನಪರ ಕಾಳಜಿ ಹಾಗೂ ಜಾಗೃತಿ ಮೂಡಿಸುವ ಅಭಿಯಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವುದು ಇತರ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಹಿರಿಯ ವೈದ್ಯ ಡಾ. ರಾಧಾಕೃಷ್ಣ ಶಾಸ್ತ್ರಿ ಹೇಳಿದರು.
ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ಇದರ ರಜತೋತ್ಸವ ಸಂಭ್ರಮ – 2018 ಅಂಗವಾಗಿ ಎ. ಜೆ. ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಘದ ಆಶ್ರಯದಲ್ಲಿ ಭಾನುವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಅಂಗೈಯಲ್ಲಿ ಆರೋಗ್ಯ (ಉಚಿತ ವೈದ್ಯಕೀಯ ತಪಾಸಣಾ ಮತ್ತು ಬೃಹತ್ ರಕ್ತದಾನ ಶಿಬಿರ) ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಹಿರಿಯ ಶುಶ್ರೂಷಕಿ ಸ್ಟೆಲ್ಲಾ ಮಿನೇಜಸ್ ಪಕ್ಷಿಕರೆ ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಪಂಜದ ಗುತ್ತು ಶಾಂತಾರಾಮ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಂ. ಅಂಚನ್, ಪಿಡಿಒ ರಮೇಶ್ ರಾಥೋಡ್, ಈಶ್ವರೀ ವಿಶ್ವನಾಥ್, ನಾಟಿವೈದ್ಯ ರವೀಂದ್ರ ಆರ್ ರಾವ್, ಪ್ರಧಾನ ಅರ್ಚಕ ಪಂಜ ವಾಸುದೇವ ಭಟ್, ಸಮಿತಿಯ ಮಾಜಿ ಆಧ್ಯಕ್ಷರುಗಳಾದ ಪಿ. ಕೆ. ಶೆಟ್ಟಿ, ಜಯರಾಮ ಆಚಾರ್ಯ, ಸೇಸಪ್ಪ, ಜಗನ್ನಾಥ ಶೆಟ್ಟಿ ಮಮ್ಮೆಟ್ಟು ಉಪಸ್ಥಿತರಿದ್ದರು.
ರಜತ ವರ್ಷದ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು. ರಾಜೇಶ್ ದಾಸ್ ವಂದಿಸಿದರು. ಉಪನ್ಯಾಸಕ ಜಯಾನಂದ ಕಾರ್ಯಕ್ರಮ ನಿರೂಪಿಸಿದರು.
Kinnigoli-29101702

Comments

comments

Comments are closed.

Read previous post:
ನ.1: ಶ್ರೀ ಅರಸು ಕುಂಜಿರಾಯ ಭಂಡಾರ ಸ್ಥಾನ ಶಿಲನ್ಯಾಸ

ಕಿನ್ನಿಗೋಳಿ : ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸಂಬಂಧಪಟ್ಟ ಶ್ರೀ ಅರಸು ಕುಂಜಿರಾಯರ ಭಂಡಾರ ಸ್ಥಾನದ ಸಂಪೂರ್ಣ ನವೀಕರಣದ ಅಂಗವಾಗಿ ನ. 1 ಬುಧವಾರ ಬೆಳಿಗ್ಗೆ 9 ಗಂಟೆಗೆ ವಿವಿಧ ಧಾರ್ಮಿಕ...

Close