ಶಿಮಂತೂರು:ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

ಮುಲ್ಕಿ: ಯಕ್ಷಮಿತ್ರರು ಪಂಜಿನಡ್ಕ ನೇತೃತ್ವದಲ್ಲಿ ಶಿಮಂತೂರು ಶ್ರೀ ಆದಿಜರ್ನಾನ ದೇವಸ್ಥಾನದಲ್ಲಿ ಯಕ್ಷಗಾನ ನಾಟ್ಯ ತರಗತಿಯನ್ನು ವೇದಮೂರ್ತಿ ರಾಮಚಂದ್ರ ಭಟ್ ಶಿಮಂತೂರು ದೀಪ ಬೆಳಗಿಸಿ ಉದ್ಘಾಟಿಸಿದರು.ಉದ್ಯಮಿ ಶಂಕರ್ ಶೆಟ್ಟಿ ಶಿಮಂತೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನ ಕಲೆಯ ತರಬೇತಿಯಿಂದ ತೆರೆಮರೆಯಲ್ಲಿರುವ ಕಲಾವಿದರನ್ನು ಗುರುತಿಸಲು ಸಾದ್ಯ,ಏಕಾಗ್ರತೆಯಿಂದ ಕಲಿತರೆ ಮಹಾನ್ ಸಾದಕರಾಗಲು ಸಾದ್ಯ ಎಂದು ಅಬಿಪ್ರಾಯಪಟ್ಟರು.ವೇದಿಕೆಯಲ್ಲಿ ದೇವಳದ ಅರ್ಚಕ ಪುರುಷೋತ್ತಮ ಭಟ್,ಕವಿ ಹಾಗೂ ಲೇಖಕ ಚಂದ್ರಹಾಸ ಸುವರ್ಣ ,ಶಿಮಂತೂರು ಶ್ರೀ ಆದಿಜನಾರ್ಧನ ಯುವಕ ಮಂಡಲದ ಅಧ್ಯಕ್ಷ ಸತೀಶ್ ಶೆಟ್ಟಿ,ಯಕ್ಷಗಾನ ಹವ್ಯಾಸಿ ಭಾಗವತ ಶಶಿ ಭಟ್ ಚಿತ್ರಾಪು,ಶಿಮಂತೂರು ಹಾಲು ಉತ್ಪಾದಕ ಸಂಘದ ಅಧ್ಯಕ್ಷೆ ಪದ್ಮಿನಿ ಶೆಟ್ಟಿ,ಯಕ್ಷಗಾನ ಕಲಾವಿದ ಸುರೇಶ್ ಕೊಲೆಕಾಡಿ,ಮುಂಬಯಿ ಉದ್ಯಮಿ ಸುಧಾಕರ ಶೆಟ್ಟಿ ನಡಿಗುತ್ತು ಉಪಸ್ಥಿತರಿದ್ದರು.ವೇಣುಗೋಪಾಲ ಶಿಮಂತೂರು ಕಾರ‍್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

Mulki30101703

Comments

comments

Comments are closed.

Read previous post:
Mulki30101702
ಪಂಜಿನಡ್ಕ : ಭಜನಾ ಮಂಗಲೋತ್ಸವ

ಮುಲ್ಕಿ: ಶ್ರೀ ವಿಠೋಬ ರುಕುಮಾಯಿ ಭಜನಾ ಮಂದಿರ ಪಂಜಿನಡ್ಕ ಮುಲ್ಕಿ ಇದರ ವರ್ಷಾವಧಿ ಭಜನಾ ಮಂಗಲೋತ್ಸವ ವಿಜೃಂಭಣೆಯಿಂದ ನಡೆಯಿತು.

Close