ಕಟೀಲು : ಕಡಂದೇಲು ಜನ್ಮಶತಮಾನೋತ್ಸವ

ಕಿನ್ನಿಗೋಳಿ: ಪುರುಷೋತ್ತಮ ಭಟ್ಟರು ಒರ್ವ ಸಜ್ಗನ ಕಲಾವಿದ ಅಪ್ಪಟ ಸ್ವಾಭಿಮಾನಿ. ಯಾರನ್ನು ಅನುಕರಣೆ ಮಾಡಿದೆ ತನ್ನದೆ ಶೈಲಿಯ ಪಾತ್ರವನ್ನು ರಂಗದಲ್ಲಿ ಸಮರ್ಥವಾಗಿ ಅಭಿನಯಿಸುತ್ತಿದ್ದರು. ಅವರ ಮಾತುಗಾರಿಕೆಯಲ್ಲಿ ಸಂಸ್ಕೃತ ಸಾಹಿತ್ಯದ ಶಬ್ದ ಭಂಡಾರವಿರುತ್ತಿತ್ತು. ಎಂದು ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹೇಳಿದರು.
ಕಟೀಲು ದೇವಳದ ಸರ‍್ವಸ್ವತೀ ಸದನದಲ್ಲಿ ಸೋಮವಾರ ನಡೆದ ಖ್ಯಾತ ಯಕ್ಷಗಾನ ವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ಟರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣಗೈದು ಮಾತನಾಡಿದರು.
ಉಡುಪಿ ತುಳುಕೂಟದ ಅಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಪುರುಷೋತ್ತಮ ಭಟ್ಟರು ಸ್ತ್ರೀ ಪಾತ್ರವಿರಲಿ ಪುರುಷ ಪಾತ್ರವಿರಲಿ ರಂಗದಲ್ಲಿ ಪಾತ್ರವನ್ನು ಅಷ್ಟು ಸಲಿಸಾಗಿ ಮೂಡಿಸಿ ಎಲ್ಲರ ಮನ ಗೆದ್ದವರು ಎಂದು ಹೇಳಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ, ಜಾನಪದ ವಿದ್ವಾಂಸ ಪತ್ರಕರ್ತ ಕೆ.ಎಲ್. ಕುಂಡಂತಾಯ, ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಕಡಂದೇಲು ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಕಡಂದೇಲು ಶ್ರೀಪಾದ ಭಟ್ ಪ್ರಸ್ತಾವನೆಗೈದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Kinnigoli-31101701

Comments

comments

Comments are closed.

Read previous post:
Kinnigoli-30101701
ಕಿನ್ನಿಗೋಳಿ-ಪುರುಷೋತ್ತಮ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ನಾಗರಿಕ ಹಿತರಕ್ಷಣಾ ವೇದಿಕೆ ಇದರ ಪ್ರಥಮ ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ರಾಜೇಶ್ ಕೆಂಚನಕೆರೆ, ಕೋಶಾಧಿಕಾರಿ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಕರ್ನಿರೆ,...

Close