ಕಿನ್ನಿಗೋಳಿಯಲ್ಲಿ ಕನ್ನಡ ರಾಜ್ಯೋತ್ಸವ

ಕಿನ್ನಿಗೋಳಿ : ಕನ್ನಡ ಮಾಧ್ಯಮ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವುದು ಸರಕಾರ ಹಾಗೂ ಕನ್ನಡಿಗರ ಆಧ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ೭೧ನೇ ವರ್ಷದ ಸಂಭ್ರಮದ ಪ್ರಯುಕ್ತ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡದ ಅಭಿವೃದ್ಧಿಗೆ ರಾಜಕೀಯ ಹಿತಾಸಕ್ತಿಯ ಕೊರತೆ ಕಾರಣ. ಇತ್ತೀಚಿನ ದಿನಗಳಲ್ಲಿ ಕನ್ನಡ ಕಲಿಕೆ ಕೇವಲ ಬಡವರಿಗೆ ಮಾತ್ರವೇ ಎಂಬ ಭ್ರಮೆ ಮೂಡುತ್ತಿದೆ. ಶಿಕ್ಷಣದಲ್ಲಿ ಇಂಗ್ಲಿಷ್ ಭಾಷೆಯೊಂದಿಗೆ ಸಮಾನವಾಗಿ ಕನ್ನಡ ಸಾಗಬೇಕು. ರಾಜ್ಯದಲ್ಲಿ ನೆಲೆಸಿದ ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ವ್ಯವಸ್ಥೆಯಾಗಬೇಕು ಎಂದರು.
ದ.ಕ.ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಾಷೆಯ ಮೇಲೆ ಪಾಂಡಿತ್ಯ ಹಿಡಿತವಿದ್ದರೆ ಮಾತ್ರ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಯನ್ನು ಕಾಣಬಹುದು. ನಮ್ಮ ರಾಜ್ಯ ಭಾಷೆ ಕನ್ನಡಕ್ಕೆ ವಿಶೇಷ ಸ್ಥಾನ ಮಾನ ನಾವು ನೀಡಬೇಕು ಎಂದರು.
ಈ ಸಂದರ್ಭ ಸಮಾಜಕ್ಕೆ ವಿಶಿಷ್ಠ ಸೇವೆ ಸಲ್ಲಿಸಿದ ಪತ್ರಿಕಾ ಸಂಗ್ರಾಹಕ, ಸಾಹಿತಿ, ನಿವೃತ್ತ ಶಿಕ್ಷಕ ಉಮೇಶ್ ರಾವ್ ಎಕ್ಕಾರು, ಸಾಹಿತಿ ಅಜಾರು ನಾಗರಾಜ ರಾಯ, ಧಾರ್ಮಿಕ ಚಿಂತಕ, ಸಾಹಿತಿ ಮೋಹನದಾಸ ಸುರತ್ಕಲ್, ಪತ್ರಕರ್ತ ಕಲಾವಿದ ನರೇಶ್ ಸಸಿಹಿತ್ಲು, ಸಾಹಸಿ ಪ್ರಕಾಶ್ ಮರಾಠೆ ನಂದಾವರ, ಯೋಗ ಶಿಕ್ಷಕ, ಯಕ್ಷಗಾನ ಕಲಾವಿದ ಹರಿರಾಜ್ ಶೆಟ್ಟಿಗಾರ್ ಕುಜಿಂಗಿರಿ, ಕೆರೆಕಾಡು ಮಕ್ಕಳ ಮೇಳದ ವ್ಯವಸ್ಥಾಪಕ ಜಯಂತ ಕೆರೆಕಾಡು, ಅಂತಾರಾಪ್ಟ್ರೀಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಬೋಳ, ಪ್ರಗತಿಪರ ಕೃಷಿಕ ಪಡಂಬೈಲು ಕೃಷ್ಣಪ್ಪ ಗೌಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಾಷ್ಟ್ರ ಮಟ್ಟದ ಯೋಗಪಟು ಶ್ರೇಯಾ, ಬಹುಮುಖ ಪ್ರತಿಭೆ ಆಶ್ವೀಜ ಉಡುಪ, ರಾಷ್ಟ್ರಮಟ್ಟದ ಕರಾಟೆಪಟು ಸಂಯುಕ್ತ ನಾಯರ್, ರಾಜ್ಯಮಟ್ಟದ ಕರಾಟೆಪಟು ಮನೀಷ್, ಬಹುಮುಖ ಪ್ರತಿಭೆ ಧೃತಿ ಕುಲಾಲ್ ಅವರನ್ನು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಗಣೇಶ್ ಮಲ್ಯ, ತೋಕೂರು ಐಟಿಐ ಪ್ರಾಂಶುಪಾಲ ವೈ.ಎನ್.ಸಾಲ್ಯಾನ್, ಉದ್ಯಮಿ ಶ್ರೀಪತಿ ಭಟ್ ಮೂಡಬಿದ್ರೆ , ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಶಿಮಂತೂರು ಶ್ರೀ ಶಾರದಾ ಮೋಡೆಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಗೀತಾ ಎಸ್.ಎಂ., ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಶಶಿಕಲಾ ಕೆಮ್ಮಡೆ ಅವರಿಂದ ನಾಡಹಬ್ಬದ ಗೀತಗಾಯನ ನಡೆಯಿತು. ಯುಗಪುರುಷ ಪ್ರಧನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದು ಸ್ವಾಗತಿಸಿದರು. ರೇವತಿ ಪುರುಷೋತ್ತಮ್ ವಂದಿಸಿದರು. ಪತ್ರಕರ್ತ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.

Kinnigoli-01111701 Kinnigoli-01111702 Kinnigoli-01111703

Comments

comments

Comments are closed.

Read previous post:
ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆ

ಕಿನ್ನಿಗೋಳಿ : ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ಮಂಗಳೂರು ಹಾಗೂ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ ಕಿನ್ನಿಗೋಳಿ ಇದರ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನವೆಂಬರ್ 3ರಿಂದ 5...

Close