ಕಿನ್ನಿಗೋಳಿ ಚಿಟ್ಟಾಣಿ ನುಡಿ ನಮನ

ಕಿನ್ನಿಗೋಳಿ:  ಚಿಟ್ಟಾಣಿ ಅವರು ಪ್ರಖರವಾದ ವಾಕ್‌ಚಾತುರ‍್ಯದಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲಾ ಪ್ರೌಢಮೆ ಮೆರೆದಿದ್ದರು. ಎಂದು ಹಿರಿಯ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ರಾಜೋತ್ಸವದ ಪ್ರಯುಕ್ತ ಯುಗಪುರುಷದ ನೇತೃತ್ವದಲ್ಲಿ ಮಹಮ್ಮದ್ ಗೌಸ್ ಪ್ರವಾಸಿ ಯಕ್ಷಗಾನ ತಂಡ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅಗಲಿದ ಯಕ್ಷರಂಗದ ಚೇತನ ಚಟ್ಟಾಣಿಯವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಮುಂಬಯಿ ಕಸಾಪದ ಮಾಜಿ ಅಧ್ಯಕ್ಷ ಜಿ. ಡಿ. ಜೋಷಿ, ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಭಾಗವತ ಪ್ರಸನ್ನ ಭಟ್ ಬಾಳ್ಕಲ್, ಮಹಮ್ಮದ್ ಗೌಸ್ ಉಪಸ್ಥಿತರಿದ್ದರು.
ಭುವನಾಭಿರಾಮ ಉಡುಪ ಪ್ರಸ್ಥಾವನೆಗೈದು ಕಾರ್ಯಕ್ರಮ ನಿರೂಪಿಸಿದರು.

KInnigoli-03111701

Comments

comments

Comments are closed.

Read previous post:
KInnigoli-03111702
ಕನ್ನಡಕ ವಿತರಣೆ

ಕಿನ್ನಿಗೋಳಿ : ಎಳತ್ತೂರು ಸಂತ ನಿರಂಕಾರಿ ಬಾಬಾ ಸತ್ಸಂಗ ಕೇಂದ್ರದಲ್ಲಿ ಮೂಲ್ಕಿ ಲಯನ್ಸ್ ಕ್ಲಬ್ ಮತ್ತು ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ನಡೆದ ನೇತ್ರ...

Close