ರಾಜ್ಯ ಪವರ್ ಲಿಪ್ಟಿಂಗ್ ಸ್ಪರ್ಧೆ-2017 ಉದ್ಘಾಟನೆ

ಕಿನ್ನಿಗೋಳಿ: ಮಾನಸಿಕ ಹಾಗೂ ದೈಹಿಕ ಕ್ಷಮತೆಗಳನ್ನು ಹೆಚ್ಚಿಸಲು ಕ್ರೀಡೆಗಳಲ್ಲಿ ಮಕ್ಕಳನ್ನು ಆಸಕ್ತಿ ಮೂಡುವಂತೆ ಮಾಡಿ ಮಕ್ಕಳು ದುರಭ್ಯಾಸಗಳ ಕಡೆಗೆ ಮನ ಮಾಡದಂತೆ ನೋಡಿ ಭವಿಷ್ಯದ ಉತ್ತಮ ಪ್ರಜೆಗಳನ್ನು ಮಾಡಬೇಕು. ಕ್ರೀಡೆಗಳಿಗೆ ಸರಕಾರಗಳ ಪ್ರೋತ್ಸಾಹ ಅತ್ಯಗತ್ಯ ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ ಕಿನ್ನಿಗೋಳಿ ಆಶ್ರಯದಲ್ಲಿ ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ಮಂಗಳೂರು ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಜ್ಯೂನಿಯರ್, ಸಬ್ ಜ್ಯೂನಿಯರ್ ಮತ್ತು ಮಾಸ್ಟರ‍್ಸ್ ಪವರ್ ಲಿಪ್ಟಿಂಗ್ ಸ್ಪರ್ಧೆ -2017 ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಪವರ್‌ಲಿಪ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಮಾತನಾಡಿ ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ತಂದುಕೊಡುವ ಕ್ರೀಡೆ ಪವರ್ ಲಿಪ್ಟಿಂಗ್ ಕ್ರೀಡೆಯಾಗಿದೆ. ಇದಕ್ಕೆ ಎಲ್ಲಾ ಆಯಮಗಳಲ್ಲಿ ಪ್ರೋತ್ಸಾಹ ಸಿಗಬೇಕಾಗಿದೆ ಎಂದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯಿಂದ ಆರೋಗ್ಯಯುತ ಮಾನಸಿಕ ಸಮತೋಲದ ಶಿಸ್ತಿನ ಜೀವನ ಸಾಧ್ಯ ಗ್ರಾಮೀಣ ಪರಿಸರದಲ್ಲಿ ಇಂತಹ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಜನರಲ್ಲಿಯೂ ಕ್ರೀಡೆಯ ಬಗ್ಗೆ ಅಭಿಮಾನ ಆಸಕ್ತಿ ಮೂಡುವುದು ಎಂದರು.
ಈ ಸಂದರ್ಭ ರಾಷ್ಟ್ರ ಮಟ್ಟದ ಪವರ್ ಲಿಪ್ಟರ್ ಮಂಜುನಾಥ ಮಲ್ಯ ಅವರನ್ನು, ಅವರನ್ನು ಸನ್ಮಾನಿಸಲಾಯಿತು.
ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಶೆಟ್ಟಿ, ಸಿವಿಲ್ ಕಂಟ್ರಾಕ್ಟರ್ ಲೋಕಯ್ಯ ಸಾಲ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಮುಲ್ಕಿ ಮೂಡಬಿದ್ರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಸಿವಿಲ್ ಕಂಟ್ರಾಕ್ಟರ್ ದೊಡ್ಡಯ್ಯ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ವೀರಮರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಈಶ್ವರ್ ಕಟೀಲ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಕೇಶವ ಕರ್ಕೇರಾ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
KInnigoli-03111703 KInnigoli-03111704 KInnigoli-03111705

Comments

comments

Comments are closed.

Read previous post:
KInnigoli-03111701
ಕಿನ್ನಿಗೋಳಿ ಚಿಟ್ಟಾಣಿ ನುಡಿ ನಮನ

ಕಿನ್ನಿಗೋಳಿ:  ಚಿಟ್ಟಾಣಿ ಅವರು ಪ್ರಖರವಾದ ವಾಕ್‌ಚಾತುರ‍್ಯದಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲಾ ಪ್ರೌಢಮೆ ಮೆರೆದಿದ್ದರು. ಎಂದು ಹಿರಿಯ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕರ್ನಾಟಕ ರಾಜೋತ್ಸವದ...

Close