ಕಟೀಲು ಕಲಾಪರ್ವದಲ್ಲಿ ಸಂಭ್ರಮಿಸಿದ ಯಕ್ಷಗಾನ ಪೂರ್ವರಂಗ, ಒಡ್ಡೋಲಗಗಳು

ಕಟೀಲು : ಯಕ್ಷಗಾನದಲ್ಲಿ ವಿರಳವಾಗುತ್ತಿರುವ, ಮರೆತುಹೋಗುತ್ತಿರುವ ಪೂರ್ವರಂಗದ ವೈವಿಧ್ಯಗಳು ಹಾಗೂ ಒಡ್ಡೋಲಗಗಳ ಪ್ರದರ್ಶನಗಳನ್ನು ಶ್ರೀದುರ್ಗಾಮಕ್ಕಳ ಮೇಳದ ಬಾಲ ಕಲಾವಿದರು ಸಂಪ್ರದಾಯ ಬದ್ಧವಾಗಿ ಪ್ರದರ್ಶಿಸಿದರು.
ಮಕ್ಕಳ ಮೇಳದ 4ನೇ ಕಲಾಪರ್ವ ಕಟೀಲಿನ ಸರಸ್ವತೀ ಸದನದಲ್ಲಿ ಶನಿವಾರ ಚೌಕಿಪೂಜೆಯೊಂದಿಗೆ ಪ್ರಾರಂಭಗೊಂಡಿತು. ಬಳಿಕ ಯಕ್ಷಗಾನ ಸಭಾ ಲಕ್ಷಣದಲ್ಲಿ ತಿಳಿಸಿರುವ ಪ್ರತಿಯೊಂದು ವಿಚಾರವನ್ನು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ನಿಟ್ಟಿನಲ್ಲಿ ಗಣಪತಿ ಕೀರ್ತನೆ, ದುರ್ಗಾ ಕೀರ್ತನೆ ಪ್ರದರ್ಶಿಸಲಾಯಿತು. ನಾಟಿರಾಗದಲ್ಲಿ ಝಂಪೆತಾಳದಲ್ಲಿ ಗಣಪತಿಯ ಪ್ರಾರ್ಥನೆ ಮುದದಿಂದ ನಿನ್ನದಿಂದ ಪ್ರಾರಂಭಿಸಿ ತ್ರಿವುಡೆ ತಾಳದಲ್ಲಿ ಶರಣತಿರುವಗ್ರಶಾಲಿವಾಹನಿ, ಶಾರ್ದೂಲವಿಕ್ರೀಡಿತಂದಲ್ಲಿರುವ ಸರ್ವೇಶಾಂ ಪರಿಪೂಜಿತಂ ಕ್ಷಮಕರು, ತ್ರಿವುಡೆತಾಳದ ನಿಗಮಗೋಚರ ಬಳಿಕದ ಪರಿವರ್ಧಿನೀ ಶ್ಲೋಕಗಳು ವಚನಗಳನ್ನು ಬಾಲಕಲಾವಿದೆ ಶ್ರೀರಕ್ಷಾ ಭಾಗವತಿಕೆಯಲ್ಲಿ ಪ್ರಸ್ತುತಗೊಳಿಸಿದರು ಕೋಡಂಗಿಗಳಾಗಿ ಭುವನ್, ಮಂಥನ್ ಶೆಟ್ಟಿ, ಬಾಲಗೋಪಾಲರಾಗಿ ತಪಸ್ಯಾ, ಅಭಿಷ್ಯಾ ಪ್ರಸ್ತುತಗೊಳಿಸಿದರು. ಪ್ರಸಾದ ಬಲಿಪರ ಭಾಗವತಿಕೆಯಲ್ಲಿ ವೈಷ್ಣವಿ ರಾವ್ ಅರ್ಧನಾರೀಶ್ವರವನ್ನು ಪ್ರಸ್ತುತಗೊಳಿಸಿದರು. ಚಂದಾಭಾಮಾ ಹಾಗೂ ಷಣ್ಮಖ ಸುಬ್ರಾಯದ ಪ್ರಸ್ತುತಿಯನ್ನು ಮೇಘ, ಈಶ್ವರೀ ಶೆಟ್ಟಿ, ಸಾತ್ವಿಕ ಶರ್ಮ ನಡೆಸಿದರು. ಕೃಷ್ಣನ ಒಡ್ಡೋಲಗದಲ್ಲಿ ಸೃಜನ್, ಡಿಂಪಲ್, ಮಾನ್ಯ, ಅನಿಕೇತ್, ಪೃಥ್ವಿ, ಧನ್ಯಶ್ರೀ, ಯತೀಕ್ಷ, ಪವಿತ್ರಾ ಹಾಗೂ ಬಣ್ಣದ ಒಡ್ಡೋಲಗವನ್ನು ಆಶಿತಾ ಸುವರ್ಣ ನಡೆಸಿಕೊಟ್ಟರು. ಮಕ್ಕಳ ಮೇಳದ ಬಾಲಕಲಾವಿದರಾದ ವಿಘ್ನೇಶ ಶೆಟ್ಟಿಗಾರ, ಮನೀಷ ಡಿ.ರಾವ್, ವಿಘ್ನೇಶ ಉಡುಪ, ಗಣೇಶ , ಶ್ರನಣ ಕುಮಾರರಿಂದ ಯಕ್ಷನಾದ ವೈಭವ ನಡೆಯಿತು.

ಕಿನ್ನಿಕಂಬಳ ವಾದಿರಾಜ ಕಲ್ಲೂರಾಯರ ನಿರೂಪಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಲಿಪ ಪ್ರಸಾದರು ಷಣ್ಮುಖ ಸುಬ್ರಾಯದ ಏಕತಾಳದ ಕುಂಡಲಮಣಿಭೂಷಣ ಹಾಡಿಗೆ ಕಲಾವಿದೆ ಮೇಘ ಪ್ರಸ್ತುತಗೊಳಿಸುವಾಗ ಪ್ರೇಕ್ಷಕರು ಎದ್ದುನಿಂತು ಕರತಾಡಣಗೈದ್ದು ಮಕ್ಕಳ ಮೇಳದ ಬದ್ಧತೆಗೆ ಸಾಕ್ಷಿಯಯಿತು.
ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಅಸ್ರಣ್ಣರ ಅದ್ಯಕ್ಷತೆಯ ಮಕ್ಕಳ ಮೇಳದಲ್ಲಿ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, ಸರ್ಪಂಗಳ ಈಶ್ವರ ಭಟ್, ರಾಜೇಶ ಐ ಇವರ ಗುರುತನದಲ್ಲಿ ನಡೆಯುತ್ತಿರುವ ತರಗತಿಗಳಲ್ಲಿ ಕಲಿತ ಮುಖ್ಯಸ್ತ್ರೀ ವೇಷ, ದೇವೇಂದ್ರ ಒಡ್ಡೋಲಗ, ಪಾಂಡವರ, ಸುದರ್ಶನ, ರಾಮನ ಒಡ್ಡೊಲಗ,ಅರೆಪಾವಿನಾಟ, ಚಪ್ಪರಮಂಚ, ರಮಗಾರಂಗಿ, ಮಕ್ಕಳ ತಾಳಮದ್ದಲೆ, ಕಾರ್ತವೀರ‍್ಯನ, ಹನೂಮಂತನ, ಕಿರಾತನ, ಹೆಣ್ಣುಬಣ್ಣದ ಒಡ್ಡೋಲಗಗಳು ಭಾನುವಾರ ಹಾಗೂ ಸೋಮವಾರ ಪ್ರದರ್ಶಿತಗೊಳ್ಳಲಿವೆ.
ಶನಿವಾರ ಕುರ್ನಾಡು ಶ್ರೀ ದತ್ತಾತ್ರೇಯ ಯಕ್ಷಗಾನ ಮಂಡಳಿಯವರು ಇಂದ್ರಜಿತು ಕಾಳಗ, ಸುಬ್ರಹ್ಮಣ್ಯ ವಿದ್ಯಾಸಾಗರ ಕಲಾಶಾಲೆಯವರು ಗುರುದಕ್ಷಿಣೆ, ಮಕ್ಕಳ ಮೇಲದ ಕಲಾವಿದರು ಸೀತಕಲ್ಯಾಣ ಯಕ್ಷಗಾನಗಳನ್ನು ಪ್ರದರ್ಶಿಸಿದರು.

Kateel-03111701 Kateel-03111702 Kateel-03111703 Kateel-03111704

 

Comments

comments

Comments are closed.

Read previous post:
KInnigoli-04111705
ಕಟೀಲು ದೇಗುಲದಲ್ಲಿ ಸೀಯಾಳಾಭಿಷೇಕ ಸೇವೆ

ಕಟೀಲು : ಲೋಕಕಲ್ಯಾಣಾರ್ಥವಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರ ಸನ್ನಿಧಿಯಲ್ಲಿ ಶನಿವಾರ ಪ್ರಾತಕಾಲ ಕಟೀಲು ದೇವಿಗೆ ಪರಮಪ್ರಿಯವಾದ...

Close