ಕಟೀಲು ವಾರ್ಷಿಕ ಕಲಾ ಪರ್ವ ಯಕ್ಷಗಾನ – ಪ್ರಶಸ್ತಿ ಪ್ರದಾನ – ಗೌರವಾರ್ಪಣೆ

ಕಟೀಲು : ಮಕ್ಕಳನ್ನು ಯಕ್ಷಗಾನ ರಂಗದಲ್ಲಿ ತರಬೇತಿ ನೀಡುವ ಮೂಲಕ ಸಂಸ್ಕಾರವಂತ ವಾತಾವರಣ ನಿರ್ಮಿಸುತ್ತಿರುವ ಅನೇಕ ಮಕ್ಕಳ ಮೇಳಗಳಲ್ಲಿ ಕಟೀಲಿನ ಶ್ರೀದುರ್ಗಾ ಮಕ್ಕಳ ಮೇಳ ಅತೀ ಎತ್ತರದಲ್ಲಿದೆ ಎಂದು ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ, ಪಂಚ ಮೇಳಗಳ ಸಂಚಾಲಕ ಪಿ. ಕಿಶನ್ ಹೆಗ್ಡೆ ಎಂದು ಹೇಳಿದರು.
ಶನಿವಾರ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ವಾರ್ಷಿಕ ಕಲಾಪರ್ವ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ವಾರ್ಷಿಕ ಕಲಾಪರ್ವದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಡಿದರು.
ಕಟೀಲು ದೇವಳ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ ಶುಭ ಹಾರೈಸಿದರು.
ಉದ್ಯಮಿ ರಾಮಚಂದ್ರ ಭಟ್ ಕಾವೂರು ಕಾರ್ಯಕ್ರಮ ಉದ್ಘಾಟಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷ ಧರ್ಮ ಬೋಧಿನಿ ಚಾರಿಟೇಬಲ್ ಟಸ್ಟ್ ಪ್ರಾಯೋಜಕತ್ವದ ಶ್ರೀ ದುರ್ಗಾ ಮಕ್ಕಳ ಮೇಳ ಪ್ರಶಸ್ತಿಯನ್ನು ಕಟೀಲು ಮೇಳದ ಹಿರಿಯ ಕಲಾವಿದ ಕ್ಯೆರಂಗಳ ಕೃಷ್ಣ ಮೂಲ್ಯರಿಗೆ ನೀಡಿ ಸನ್ಮಾನಿಸಲಾಯಿತು. ಉದ್ಯಮಿಗಳಾದ ಹೆಜಮಾಡಿ ಪ್ರೇಮನಾಥ ಶೆಟ್ಟಿ, ಪೆರ್ಮುದೆ ಶೇಖರ ಶೆಟ್ಟಿ, ಪೆರ್ಮುದೆ ಯಾದವ ಕೋಟ್ಯಾನ್, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಹಾ ಪ್ರಬಂಧಕ ರತ್ನಾಕರ ಶೆಟ್ಟಿ ಅವರು ಗುರುವಂದನೆ ನಡೆಸಿ ಕೊಟ್ಟರು.
ನಿವೃತ್ತ ಯಕ್ಷಗಾನ ಕಲಾವಿದ ಪಟ್ಲ ಮಹಾಬಲ ಶೆಟ್ಟಿ ಪಟ್ಲ ಗುತ್ತು ಅವರನ್ನು ಗೌರವಿಸಲಾಯಿತು. ಉದ್ಯಮಿ ಬಿ.ಡಿ. ರಾಮಚಂದ್ರ ಆಚಾರ್ಯ, ತಾಲೂಕು ಪಂಚಾಯಿತಿ ಸದಸ್ಯ ಸುಕುಮಾರ್ ಸನಿಲ್, ಬಿ. ಸುದೇಶ್ ಕುಮಾರ್ ರೈ, ಮುಂಬಯಿ, ಸುಧೀರ್ ಕುಮಾರ್ ಶೆಟ್ಟಿ, ಕಲಾಪೋಷಕ ಪ್ರದೀಪ ತಳವಾರ್ ದಾಮಸ್‌ಕಟ್ಟೆ, ಉದ್ಯಮಿ ಲೋಕಯ್ಯ ಸಾಲ್ಯಾನ್, ಮುಂಬಯಿಯ ಎಚ್. ಬಿ. ಎಲ್ ರಾವ್, ಉದ್ಯಮಿ ಜೆ. ಸಿ. ಕುಮಾರ್, ನೀಲೇಶ್ ಶೆಟ್ಟಿಗಾರ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಟ್ರಸ್ಟಿಗಳಾದ ರಾಘವೇಂದ್ರ ಆಚಾರ್ಯ ಬಜಪೆ, ಪಶುಪತಿ ಶಾಸ್ತ್ರಿ, ದಯಾನಂದ ಮಾಡ, ರಾಜೇಶ್ ಐ, ಕೃಷ್ಣ ಕೆ ಮತ್ತಿತರರು ಉಪಸ್ಥಿತರಿದ್ದರು.
ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kateel-03111705 Kateel-03111706 Kateel-03111707

Comments

comments

Comments are closed.

Read previous post:
Kateel-03111701
ಕಟೀಲು ಕಲಾಪರ್ವದಲ್ಲಿ ಸಂಭ್ರಮಿಸಿದ ಯಕ್ಷಗಾನ ಪೂರ್ವರಂಗ, ಒಡ್ಡೋಲಗಗಳು

ಕಟೀಲು : ಯಕ್ಷಗಾನದಲ್ಲಿ ವಿರಳವಾಗುತ್ತಿರುವ, ಮರೆತುಹೋಗುತ್ತಿರುವ ಪೂರ್ವರಂಗದ ವೈವಿಧ್ಯಗಳು ಹಾಗೂ ಒಡ್ಡೋಲಗಗಳ ಪ್ರದರ್ಶನಗಳನ್ನು ಶ್ರೀದುರ್ಗಾಮಕ್ಕಳ ಮೇಳದ ಬಾಲ ಕಲಾವಿದರು ಸಂಪ್ರದಾಯ ಬದ್ಧವಾಗಿ ಪ್ರದರ್ಶಿಸಿದರು. ಮಕ್ಕಳ ಮೇಳದ 4ನೇ...

Close