ಕಲಾಪರ್ವ : ದೇವೇಂದ್ರ, ಪಾಂಡವರ, ರಾಮನ ಒಡ್ಡೋಲಗಗಳು

ಕಟೀಲು : ಕಟೀಲು ಸರಸ್ವತೀ ಸದನದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಮಕ್ಕಳ ಮೇಳದ ಕಲಾಪರ್ವದಲ್ಲಿ ಭಾನುವಾರ ಪ್ರದರ್ಶಿಸಲ್ಪಟ್ಟ ದೇವೇಂದ್ರನ ಒಡ್ಡೋಲಗ, ಪಾಂಡವರ ಒಡ್ಡೋಲಗ, ರಾಮನ ಒಡ್ಡೋಲಗಗಳು ಮನಸೂರೆಗೊಂಡವು.
ಚೌಕಿಪೂಜೆಯ ಬಳಿಕ ಬಾಲಕಲಾವಿದರಾದ ವೈಷ್ಣವಿ, ಅನುಪಮಾ, ವಿಶ್ವಾಸ್, ಗಾಯತ್ರೀ, ನಂದಿತ್ ಭಾಗವತಿಕೆಯ ಮೂಲಕ ಪೂರ್ವರಂಗದ ಷಣ್ಮುಖ ಸುಬ್ರಾಯದ ಹಾಡುಗಳನ್ನು ಹಾಡಿದರು. ಶ್ರೀರಕ್ಷಾ ಭಟ್ ಪಂಚವಟಿ, ದೇವೀಮಾಹಾತ್ಮ್ಯೆ, ವೀರಮಣಿಕಾಳಗ ಮುಂತಾದ ಪ್ರಸಂಗಗಳ ಆಯ್ದ ಪದಗಳನ್ನು ಬಿಲಹರಿ, ಆರಭಿ, ಮೋಹನ, ಹಿಂದೋಳ ಮೊದಲಾದ ರಾಗಗಳಲ್ಲಿ ಪ್ರಸ್ತುತಪಡಿಸಿದರು. ಮನೀಷ್ ರಾವ್, ವಿಘ್ನೇಶ್ ಉಡುಪ ಹಿಮ್ಮೇಳದಲ್ಲಿ ಸಹಕರಿಸಿದರು. ಕುಬಣೂರು ಶ್ರೀಧರರಾಯರ ಕಲ್ಪನೆಯ ರಾಜೇಶ್ ಐ ನಿರ್ದೇಶನದ ದೇವೇಂದ್ರ ಒಡ್ಡೋಲಗ ಮುದನೀಡಿತು. ಅಷ್ಟತಾಳದ ತಿಲ್ಲಾನವನ್ನು ಬಳಸಿಕೊಂಡು ಸಭೆಯನ್ನು ರೋಮಾಂಚನಗೊಳಿಸಿದ ಮಕ್ಕಳ ಮೇಳದ ಬಾಲಕಲಾವಿದರು ಪಾಂಡವರ ಒಡ್ಡೋಲಗದಲ್ಲೂ ಜನಮನರಂಜಿಸಿದರು. ದೇವೀಪ್ರಕಾಶ ರಾವ್, ರಾಜೇಶ್ ಐ, ಭಾಸ್ಕರ ಭಟ್, ಗಣೇಶ್ ಹಿಮ್ಮೇಳದಲ್ಲಿ ನವ್ಯಾ, ಅರ್ಪಣಾ, ದುರ್ಗಾಶ್ರೀ, ಪ್ರೀತಿಕಾ, ಧನಲಕ್ಷ್ಮೀ, ಆಶಿತಾ, ಜೀವನ್, ಅನುಷಾ, ಕೃತ್ತಿಕಾ, ಚೈತನ್ಯ, ಮೇಘ, ವೈಭವಿರಾಜ್, ಪೂಜಾ, ಚಿತ್ತಾರ ಮುಮ್ಮೇಳದಲ್ಲಿ ಪಾಲ್ಗೊಂಡರು. ಬಹುತೇಕ ಹೆಣ್ಮಕ್ಕಳೇ ಈ ಗಂಡುಕಲೆಯಲ್ಲಿ ಹೆಜ್ಜೆಹಾಕಿ ಗಮನಸೆಳೆದರು. ದುರ್ಗಾಶ್ರೀ ಹಾಗೂ ಧನಲಕ್ಷ್ಮೀಯವರ ಕುಣಿತದಲ್ಲಿ ಪ್ರಸ್ತುತಗೊಂಡ ರಾಮನ ಒಡ್ಡೋಲಗ ಸಾಂಪ್ರದಾಯಿಕ ಕುಣಿತಗಳೊಂದಿಗೆ ಮೆಚ್ಚುಗೆ ಗಳಿಸಿತು. ವಾದಿರಾಜ ಕಲ್ಲೂರಾಯರ ನಿರೂಪಣೆಯಲ್ಲಿ ಈ ಒಡ್ಡೋಲಗಗಳು ಮೂಡಿಬಂದರೆ, ಕಳಸದ ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಟಾನದ ಕಲಾವಿದರಿಂದ ಗಿರಿಜಾ ಕಲ್ಯಾಣ, ವಿಟ್ಲ ಯಕ್ಷ ಸಿಂಧೂರ ಪ್ರತಿಷ್ಟಾನದವರಿಂದ ಸುದರ್ಶನ ವಿಜಯ ಹಾಗೂ ಮಕ್ಕಳ ಮೇಳದ ಕಲಾವಿದರಿಂದ ಸತ್ತ್ವ ಪರೀಕ್ಷೆ ಪ್ರದರ್ಶಿತವಾಯಿತು.

Kateel-05111702 Kateel-05111703 Kateel-05111704 Kateel-05111705 Kateel-05111706

Comments

comments

Comments are closed.

Read previous post:
Kateel-05111701
ಮಕ್ಕಳಲ್ಲಿ ಕಲೆಯ ಒಲವು; ಸಂಸ್ಕಾರದ ಉಳಿವು

ಕಟೀಲು : ಮಕ್ಕಳಲ್ಲಿ ಪುರಾಣಕಥೆಗಳನ್ನು ತಿಳಿಸುವ ಸಂಗೀತ, ಮಾತುಗಾರಿಕೆ, ನಾಟ್ಯಗಳ ಆಸಕ್ತಿ ಮೂಡಿಸುವ ಯಕ್ಷಗಾನವನ್ನು ಕಲಿಸುವ ಮೂಲಕ ಅವರಲ್ಲಿ ಸಂಸ್ಕಾರವನ್ನು ಉಳಿಸಿ ಸಂಸ್ಕೃತಿ ಬೆಳೆಸುವ ಮಹತ್ತರ ಕಾರ‍್ಯ...

Close