ಮಕ್ಕಳಲ್ಲಿ ಕಲೆಯ ಒಲವು; ಸಂಸ್ಕಾರದ ಉಳಿವು

ಕಟೀಲು : ಮಕ್ಕಳಲ್ಲಿ ಪುರಾಣಕಥೆಗಳನ್ನು ತಿಳಿಸುವ ಸಂಗೀತ, ಮಾತುಗಾರಿಕೆ, ನಾಟ್ಯಗಳ ಆಸಕ್ತಿ ಮೂಡಿಸುವ ಯಕ್ಷಗಾನವನ್ನು ಕಲಿಸುವ ಮೂಲಕ ಅವರಲ್ಲಿ ಸಂಸ್ಕಾರವನ್ನು ಉಳಿಸಿ ಸಂಸ್ಕೃತಿ ಬೆಳೆಸುವ ಮಹತ್ತರ ಕಾರ‍್ಯ ಕಟೀಲಿನಲ್ಲಿ ನಡೆಯುತ್ತಿದೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಕಟೀಲು ಸರಸ್ವತೀ ಸದನದಲ್ಲಿ ಶ್ರೀ ದುರ್ಗಾಮಕ್ಕಳ ಮೇಳದ ನವಮ ಕಲಾಪರ‍್ವದ ಎರಡನೆಯ ದಿನದ ಸಭಾಕಾರ‍್ಯಕ್ರಮದಲ್ಲಿ ಪುಂಡರೀಕಾಕ್ಷ ಉಪಾಧ್ಯಾಯರಿಗೆ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
ಕಲಾಸಂಘಟಕ ಕುಳಾಯಿ ಮಧುಕರ ಭಾಗತವರನ್ನು ಗೌರವಿಸಲಾಯಿತು. ಮೇಳದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿಭಾಪುರಸ್ಕಾರದ ಮೂಲಕ ಅಭಿನಂದಿಸಲಾಯಿತು.
ಸಾಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ ಮಕ್ಕಳಲ್ಲಿ ಕಲಾಪ್ರೇಮ ಮೂಡಿಸುವ ಮೂಲಕ ಯಕ್ಷಗಾನದ ಬಗ್ಗೆ ಆಶಾಭಾವನೆಯ ವಾತಾವರಣವನ್ನು ಕಟೀಲಿನಲ್ಲಿ ರೂಪಿಸುತ್ತಿರುವ ಮಕ್ಕಳ ಮೇಳದ ಕಾರ‍್ಯವನ್ನು ಶ್ಲಾಘಿಸಿದರು.
ಮಂಗಳೂರಿನ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಡಂದಲೆ ಕೃಷ್ಣ ಭಟ್, ಕಟೀಲು ದೇಗುಲದ ಅರ್ಚಕರಾದ ಅನಂತ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಚಂದ್ರಶೇಖರ ಮಾಡ, ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ವೇದವ್ಯಾಸ ತಂತ್ರಿ, ಭಾಸ್ಕರದಾಸ ಎಕ್ಕಾರು, ಸುದರ್ಶನ ಜೈನ್ ಬಂಟ್ವಾಳ, ಕೇಳ ಕಾಶಿಪಟ್ನದ ಅನಂತ ಆಸ್ರಣ್ಣ, ಚಂದ್ರಶೇಖರ ಬೆಳ್ಚಡ, ಕಟೀಲು ಗ್ರಾಪಂ. ಉಪಾಧ್ಯಕ್ಷ ಕಿರಣ್ ಕುಮಾರ ಶೆಟ್ಟಿ, ದಾಮೋದರ ದಂಡಕೇರಿ, ಶರತ್ ಎನ್. ಕರ್ಕೇರ, ದಿನೇಶ ಪೈ, ರಾಮಣ್ಣ ಶೆಟ್ಟಿ, ಮುಖ್ಯಶಿಕ್ಷಕಿ ಸರೋಜಿನಿ ಮತ್ತಿತರರಿದ್ದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ, ದೇವೀಪ್ರಕಾಶ ರಾವ್ ಸಂಮಾನ ಪತ್ರ ವಾಚಿಸಿದರು. ವಾಸುದೇವ ಶೆಣೈ ಕಾರ‍್ಯಕ್ರಮ ನಿರೂಪಿಸಿದರು.

Kateel-05111701

Comments

comments

Comments are closed.

Read previous post:
ಕಿನ್ನಿಗೋಳಿ ಮಂಜುನಾಥ ಮಲ್ಯ ಮಾಸ್ಟರ್ಸ್ ಚಾಂಪಿಯನ್

 ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಕಿನ್ನಿಗೋಳಿ : ಕಿನ್ನಿಗೋಳಿಯ ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಮಂಜುನಾಥ ಮಲ್ಯ ಸತತ ಎರಡನೇ ಬಾರಿ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್‌ನ...

Close