ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆ-2017 ಸಮಾರೋಪ

ಕಿನ್ನಿಗೋಳಿ : ಏಕಾಗ್ರತೆಯಿಂದ ಕ್ರೀಡೆಯಲ್ಲಿ ಆಸಕ್ತಿ ತೋರಿದಾಗ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ಜಯ ಸತ್ಸಸಿದ್ದ. ಸೋಲನ್ನು ಸವಾಲಾಗಿ ಸ್ವೀಕರಿಸಿ ಭವಿಷ್ಯದಲ್ಲಿ ಉತ್ತಮ ಪ್ರಯತ್ನ ಪಡಬೇಕು ಎಂದು ಅಗ್ರಜ ಬಿಲ್ಡರ‍್ಸ್ ಮಾಲಕ ಸಂದೇಶ್ ಕುಮಾರ್ ಶೆಟ್ಟಿ ಹೇಳಿದರು.
ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ ಕಿನ್ನಿಗೋಳಿ ಆಶ್ರಯದಲ್ಲಿ ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ಮಂಗಳೂರು ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಜ್ಯೂನಿಯರ್, ಸಬ್ ಜ್ಯೂನಿಯರ್ ಮತ್ತು ಮಾಸ್ಟರ‍್ಸ್ ಪವರ್ ಲಿಪ್ಟಿಂಗ್ ಸ್ಪರ್ಧೆ -2017ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಮಾಸ್ಟರ‍್ಸ್ ಪವರ್ ಲಿಪ್ಟರ್‌ಗಳಾದ ಕೃಷ್ಣ ದೇವಾಡಿಗ ಅಶೋಕ್ ಜಿ.ವಿ. ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಪವರ್‌ಲಿಪ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಮುಂದಿನ ರಾಷ್ಟ್ರೀಯ ಹಾಗೂ ಕೇರಳದಲ್ಲಿ ನಡೆಯಲಿರುವ ಸ್ಪರ್ಧೆಗಳ ಸವಿವರ ನೀಡಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ಮಂಗಳೂರು ನಗರಪಾಲಿಕೆ ಮಾಜಿ ಮೇಯರ್ ಪುರಂದರದಾಸ್ ಕೂಳೂರು, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಕಿನ್ನಿಗೋಳಿ ಬಸ್ ಚಾಲಕರ ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ ಪೂಜಾರಿ, ಉದ್ಯಮಿ ಪ್ರವೀಣ್ ಕುಮಾರ್, ತೀರ್ಪುದಾರ ದಾದಪೀರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ವೀರಮರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಈಶ್ವರ್ ಕಟೀಲ್ ಸ್ವಾಗತಿಸಿದರು. ಕೇಶವ ಕರ್ಕೇರಾ ವಂದಿಸಿದರು. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ
ಸಬ್ ಜೂನಿಯರ್ ಬಲಶಾಲಿ ಯುವಕ ಕರ್ನಾಟಕ 2017
ಶರತ್ ಕುಮಾರ್ ವೀರಮಾರುತಿ ಜಿಮ್ ಸಾಲಿಗ್ರಾಮ

ಸಬ್ ಜೂನಿಯರ್ ಬಲಶಾಲಿ ಯುವತಿ ಕರ್ನಾಟಕ 2017
ವೆನಿಜಿಯಾ ಎ ಕಾರ್ಲೊಸ್ ಜಿಮ್ ಮಂಗಳೂರು

ಜೂನಿಯರ್ ಬಲಶಾಲಿ ಯುವಕ ಕರ್ನಾಟಕ 2017
ಮಹಮ್ಮದ್ ಫರ್ಹಾನ್ ಬಾಲಾಂಜನೇಯ ಜಿಮ್ ಮಂಗಳೂರು

ಜೂನಿಯರ್ ಬಲಶಾಲಿ ಯುವತಿ ಕರ್ನಾಟಕ 2017
ರಜನಿ ಎಸ್. ಶಿವಮೊಗ್ಗ ಜಿಲ್ಲೆ

ಟೀಮ್ ಚಾಂಪಿಯನ್‌ಶಿಪ್ ಪುರುಷರು
ಪ್ರಥಮ ಬಾಲಾಂಜನೇಯ ಜಿಮ್ ಮಂಗಳೂರು
ದ್ವಿತೀಯ ಆಳ್ವಾಸ್ ಕಾಲೇಜು ಮೂಡಬಿದಿರೆ

ಟೀಮ್ ಚಾಂಪಿಯನ್‌ಶಿಪ್ ಮಹಿಳೆಯರು
ಪ್ರಥಮ ಆಳ್ವಾಸ್ ಕಾಲೇಜು ಮೂಡಬಿದಿರೆ
ದ್ವಿತೀಯ ಶಿವಮೊಗ್ಗ ಜಿಲ್ಲೆ ಪವರ್ ಲಿಪ್ಟಿಂಗ್ ಅಸೋಸಿಯೇಶನ್

 

Kinnigoli-05111701

Comments

comments

Comments are closed.

Read previous post:
Kateel-05111702
ಕಲಾಪರ್ವ : ದೇವೇಂದ್ರ, ಪಾಂಡವರ, ರಾಮನ ಒಡ್ಡೋಲಗಗಳು

ಕಟೀಲು : ಕಟೀಲು ಸರಸ್ವತೀ ಸದನದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಮಕ್ಕಳ ಮೇಳದ ಕಲಾಪರ್ವದಲ್ಲಿ ಭಾನುವಾರ ಪ್ರದರ್ಶಿಸಲ್ಪಟ್ಟ ದೇವೇಂದ್ರನ ಒಡ್ಡೋಲಗ, ಪಾಂಡವರ ಒಡ್ಡೋಲಗ, ರಾಮನ ಒಡ್ಡೋಲಗಗಳು ಮನಸೂರೆಗೊಂಡವು. ಚೌಕಿಪೂಜೆಯ ಬಳಿಕ...

Close