ಸಾರ್ವಜನಿಕ ಶೌಚಾಲಯ ಲೋಕಾರ್ಪಣೆ

ಹಳೆಯಂಗಡಿ: ಸಾರ್ವಜನಿಕ, ಸಾಂಸ್ಕೃತಿಕ,ಕಲಾ ಹಾಗೂ ಧಾರ್ಮಿಕ ಸೇವೆಯಲ್ಲಿ ಪಾವಂಜೆ ಕ್ಷೇತ್ರದ ಕಾರ್ಯ ಅಭಿನಂದನೀಯ ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿಯ ಕೋರಿಕೆ ಮೇರೆಗೆ ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯ ಸ್ವಾಮಿ ದೇವಾಲಯದ ವತಿಯಿಂದ ಸುಮಾರು 2ಲಕ್ಷರೂ ವೆಚ್ಚದಲ್ಲಿ ನಿರ್ಮಿಸಲಾದ ಪುರುಷರ ಮತ್ತು ಮಹಿಳೆಯರ ಸುಸಜ್ಜಿತ ಶೌಚಾಲಯವನ್ನು ಬುಧವಾರ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಧಾರ್ಮೀಕ ಕೇಂದ್ರಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಪ್ರದೇಶಿಕ ಅಭಿವೃದ್ಧಿ ಸುಲಭ ಸಾಧ್ಯವಾಗಲಿದ್ದು ಪಾವಂಜೆಯ ಶ್ರೀ ಸುಬ್ರಮಣ್ಯ ಕ್ಷೇತ್ರದ ಸೇವಾ ಕಾರ್ಯಗಳು ಮಾದರಿಯಾಗಿವೆ ಎಂದರು.
ಈ ಸಂದರ್ಭ ದೇವಳದ ಭಕ್ತರು ಹಾಗೂ ಜನ ಸಾಮಾನ್ಯರಿಗಾಗಿ ದೇವಳದ ವತಿಯಿಂದ ನಿರ್ವಹಿಸಲ್ಪಡುವ ಈ ಶೌಚಾಲಯ ಬೆಳಿಗ್ಗೆ ಗಂಟೆ೭ರಿಂದ ರಾತ್ರಿ ೮ಗಂಟೆಗಳ ವರೆಗೆ ಲಭ್ಯವಿದೆ ಎಂದು ತಿಳಿಸಲಾಯಿತು.
ಹಳೆಯಂಗಡಿ ಪಂಚಾಯಿತಿ ನೈರ್ಮಲ್ಯ ಸಮಿತಿ ಅಧ್ಯಕ್ಷ ಎಚ್. ವಸಂತ ಬೆರ್ನಾಡ್, ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕ್ಷೇತ್ರದ ಧರ್ಮದರ್ಶಿ ಯಾಜಿ ನಿರಂಜನ ಭಟ್, ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್, ವಿದ್ಯಾಶಂಕರ್,ಹಳೆಯಂಗಡಿ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕದಿಕೆ ಮತ್ತಿತರರು ಉಪಸ್ಥಿತರಿದ್ದರು.

Mulki-06111703

Comments

comments

Comments are closed.

Read previous post:
Mulki-06111702
ಬಪ್ಪನಾಡು ದೇವಳದಲ್ಲಿ ಸಾನಿದ್ಯಕಲಶಾಭಿಷೇಕ

ಮುಲ್ಕಿ: ಇತಿಹಾಸಪ್ರಸಿದ್ದ ಬಪ್ಪನಾಡು ದೇವಸ್ಥಾನದ ಜೀರ್ಣೊದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವಳದಲ್ಲಿ ಸಾನಿದ್ಯಕಲಶಾಭಿಷೇಕ, ಅನುಜ್ಞಾ ಕಲಶ, ಅಧಿವಾಸ ಹೋಮ ಮತ್ತು ದೇವಳದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ...

Close