ಪ್ರೋ- ಕಬ್ಬಡಿ ಮಾದರಿ ಪಂದ್ಯಾಟ

ಮುಲ್ಕಿ: ಕಾರ್ನಾಡು ಗಾಂಧೀ ಮೈದಾನದಲ್ಲಿ ನಡೆದ ಪ್ರೊ ಕಬಡ್ಡಿ ಮಾದರಿಯ ಪಂದ್ಯಾ ಕೂಟ ಕಾರ್ನಾಡ್ ಫ್ರೆಂಡ್ಸ್ ಟ್ರೋಫಿ-2017 ಹಾಗೂ 10000ರೂ ನಗದನ್ನು ಮಾಹಾಲಿಂಗೇಶ್ವರ ಉಚ್ಚಿಲ ತಂಡ ಪಡೆದುಕೊಂಡಿದ್ದು ಫ್ರೆಂಡ್ಸ್ ಕೋಲ್ನಾಡು ತಂಡ ದ್ವಿತೀಯ ಸ್ಥಾನದ ಟ್ರೋಪಿ ಹಾಗೂ 6000ರೂಪಡೆಯಿತು.ಒಟ್ಟು 25 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ರೋಮಾಂಚಕ ಸೆಮಿಫೈನಲ್ ಪಂದ್ಯಗಳಲ್ಲಿ ಫ್ರೆಂಡ್ಸ್ ಕೋಲ್ನಾಡು ಶ್ರೀರಾಂ ಅಂಗಾರಗುಡ್ಡೆ ತಂಡವನ್ನು ಸೋಲಿಸಿದರೆ iಹಾಲಿಂಗೇಶ್ವರ ಉಚ್ಚಿಲ ತಂಡವು ಎಲ್‌ವಿಎಸ್‌ಎಸ್ ಜಾರಂದಗುಡ್ಡೆ ತಂಡವನ್ನು ಸೋಲಿಸಿ ಅಂತಿಮ ಹಂತಕ್ಕೆ ತಲುಪಿತು.ಪಂದ್ಯಾಕೂಟದ ಉತ್ತಮ ರೈಡರ್ ಆಗಿ ಫ್ರೆಂಡ್ಸ್ ಕೋಲ್ನಾಡು ತಂಡದ ರವಿಕಿರಣ್,ಉತ್ತಮ ಡಿಫೆಂಡರ್, ಸವ್ಯಸಾಚಿಯಾಗಿ ಮಹಾಲಿಂಗೇಶ್ವರ ತಂಡದ ಅನೀಶ್ ಹಾಗೂ ಸುಮನ್ ಪ್ರಶಸ್ತಿ ಗಳಿಸಿದರು.ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ನ.ಪಂ. ಸದಸ್ಯ ಪುತ್ತು ಬಾವ ವಹಿಸಿದ್ದರು. ವೇದಿಕೆಯಲ್ಲಿ ದ.ಕ ಯುವ ಕಾಂಗ್ರೆಸ್ಸ್ ಅಧ್ಯಕ್ಷ ಮಿಥುನ್ ರೈ,ಮುಲ್ಕಿ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ದನಂಜಯ ಮಟ್ಟು,ಕರಾವಳಿ ಪ್ರಾಧಿಕಾರದ ಸದಸ್ಯ ಶಾಹುಲ್ ಹಮೀದ್,ಉಳೆಪಾಡಿ ಶ್ರೀ ದುರ್ಗಾಪರಮೆಶ್ವರೀ ಮಹಾಮಾಯಿ ದೇವಸ್ಥಾನದ ದರ್ಮದರ್ಶಿ ಮೋಹನದಾಸ ಸುರತ್ಕಲ್,ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಮುಲ್ಕಿ,ಉದ್ಯಮಿ ಖಾದರ್ ಕೋಲ್ನಾಡು,ಮುಲ್ಕಿ ,ನ,ಪಂ, ಸದಸ್ಯರಾದ ಬಷೀರ್ ಕುಳಾಯಿ,ಯೋಗೀಶ್ ಕೋಟ್ಯಾನ್,ಅಶೋಕ್ ಪೂಜಾರ,ಜೆಡಿಎಸ್ ನಾಯಕ ನಿಸಾರ್ ಹ್ಮದ್ ಅಂಗಾರಗುಡ್ಡೆ,ಸಾಮಾಜಿಕ ಕಾರ‍್ಯಕರ್ತರಾದ ಲೋಕೇಶ್ ಕೋಟ್ಯಾನ್, ಭೀಮಾಶಂಕರ್,ವೀರಯ್ಯ ಹಿರೇಮಠ,ಮಂಜುನಾಥ ಕಂಬಾರ ಮತ್ತಿತರರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.ಪಂದ್ಯಾಟದ ತೀರ್ಪುಗಾರರಾಗಿ ಹರಿಶ್ಚಂದ್ರ ಮೂಡಬಿದ್ರೆ,ಪುಂಡಲೀಕ ಕೊಠಾರಿ,ಪ್ರಣಿಲ್ ಹೆಗ್ಡೆ ಕಿನ್ನಿಗೋಳಿಯವರನ್ನು ಗೌರವಿಸಲಾಯಿತು.ನೌಷಾದ್ ಕಾರ‍್ನಾಡು ಸ್ವಾಗತಿಸಿದರು.ರಫೀಕ್ ಕೋಲ್ನಾಡು ಕಾರ‍್ಯಕ್ರಮ ನಿರೂಪಿಸಿದರು. ಹಕೀಂ ಕಾರ‍್ನಾಡು ಧನ್ಯವಾದ ಅರ್ಪಿಸಿದರು.

Mulki-06111706

Comments

comments

Comments are closed.

Read previous post:
Mulki-06111705
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮುಲ್ಕಿ: ಹಳೆಯಂಗಡಿ ಸಮೀಪದ ಲೈಟ್‌ಹೌಸಿನ ಟೋರ್ಪಡೋಸ್ ಕ್ರೀಡಾ ಸಂಸ್ಥೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ.ನ.1 ರಂದು ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಟೋರ್ಪಡೋಸ್ ಕ್ರೀಡಾ ಸಂಸ್ಥೆಯ...

Close