ಶ್ರೀ ದುರ್ಗಾಮಕ್ಕಳ ಮೇಳದ ಕಲಾಪರ್ವ

ಕಟೀಲು : ವಿಶ್ವದ ಹೆಮ್ಮೆಯ ಕಲೆ ಯಕ್ಷಗಾನ ಎಂದು ಹೆಮ್ಮೆ ಪಟ್ಟರೆ ಸಾಕಾಗದು, ಪ್ರಸ್ತುತ ಬೇಡವಾದ್ದನ್ನು ಬಿಸಾಕಿ ಒಳ್ಳೆಯದ್ದನ್ನು ಬೇಕಾದ್ದನ್ನು ಸೇರಿಸಿಕೊಳ್ಳಬೇಕು ಎಂದು ಕಲಾವಿಮರ್ಶಕ ಡಾ. ಪ್ರಭಾಕರ ಜೋಷಿ ಹೇಳಿದರು.
ಅವರು ಸೋಮವಾರ ಕಟೀಲು ಸರಸ್ವತೀ ಸದನದಲ್ಲಿ ಶ್ರೀ ದುರ್ಗಾಮಕ್ಕಳ ಮೇಳದ ಕಲಾಪರ್ವದಲ್ಲಿ ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಯಕ್ಷಗಾನಕ್ಕೆ ಕಟೀಲಿನ ಕೊಡುಗೆ ಅನನ್ಯವಾದುದು. ಯಕ್ಷಗಾನ ಇತ್ತೀಚಿಗೆ ವ್ಯಕ್ತಿಕೇಂದ್ರಿತವಾಗುತ್ತಿದೆ. ದೇವೀಮಾಹಾತ್ಮ್ಯೆಯಲ್ಲಿ ಗಂಟೆಗಟ್ಟಲೆ ಮಾಲಿನಿ ಕುಣಿಯುವಂತಹ ಬೆಳವಣಿಗೆ ಸರಿಯಲ್ಲ. ಅಭಿಮಾನದ ಅತಿರೇಕ ಯಕ್ಷಗಾನವನ್ನು ಹಾಳು ಮಾಡುತ್ತಿದೆ. ಹಿಮ್ಮೇಳದವರಿಗೂ ಸಮವಸ್ತ್ರಧರಿಸುವುದು ರಂಗಕ್ರಮದಲ್ಲಿ ಮುಖ್ಯವಾಗುತ್ತದೆ. ಯಕ್ಷಗಾನ ಕಲೆಯ ವೈಭವಕ್ಕೆ ಯಕ್ಷಗಾನಕ್ಕೆ ವಾದ್ಯಬ್ಯಾಂಡು, ದುರ್ಸು, ಗರ್ನಲುಗಳ್ಯಾಕೆ? ಗೋವಿಂದ ಭಟ್ಟರಂತಹ ೬೫ವರ್ಷಗಳಿಗೂ ಮಿಕ್ಕಿ ಎಡೆಬಿಡದೆ ಯಕ್ಷಗಾನದಲ್ಲಿ ಕುಣಿಯುತ್ತಿರುವ ಕಲಾವಿದರನೇಕರನ್ನು ಸರಿಯಾಗಿ ಗುರುತಿಸುವ ಕಾರ‍್ಯದಲ್ಲಿ ಮಾಧ್ಯಮಗಳೂ ಸೇರಿದಂತೆ ನಾವೆಲ್ಲ ಎಡವಿದ್ದೇವೆ ಎಂದ ಡಾ. ಜೋಷಿ ಮಕ್ಕಳ ಮೇಳದ ಕಾರ‍್ಯವನ್ನು ಶ್ಲಾಘಿಸಿದರು.
ಕಲಾಗುರು ಪಣಂಬೂರು ಶಂಕರನಾರಾಯಣ ಮೈರ್ಪಾಡಿಯವರನ್ನು ಗೌರವಿಸಲಾಯಿತು. ಮಕ್ಕಳ ಮೇಳದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಮಕ್ಕಳ ಮೇಳದ ದಶಮಾನೋತ್ಸವ ವರ್ಷವನ್ನು ಬಜಪೆಯ ಉದ್ಯಮಿ ಎಸ್. ಕಮಲಾಕ್ಷ ಕಾಮತ್ ಉದ್ಘಾಟಿಸಿದರು.
ಶಾಸಕ ಅಭಯಚಂದ್ರ ಜೈನ್, ಕಟೀಲು ದೇಗುಲದ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ರಾಮಣ್ಣ ಶೆಟ್ಟಿ, ಉದ್ಯಮಿ ಸುಂದರ ಶೆಟ್ಟಿ, ಗಿರೀಶ್ ಶೆಟ್ಟಿ, ತಾರಾನಾಥ ವರ್ಕಾಡಿ ಮತ್ತಿತರರಿದ್ದರು.
ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾದಿರಾಜ ಕಲ್ಲಾರಾಯ, ದೇವೀಪ್ರಕಾಶ್ ರಾವ್ ಸಮಮಾನ ಪತ್ರ ವಾಚಿಸಿದರು. ವಾಸುದೇವ ಶೆಣೈ ಕಾರ‍್ಯಕ್ರಮ ನಿರೂಪಿಸಿದರು.

Kinnigoli-07111701 Kinnigoli-07111702

Comments

comments

Comments are closed.

Read previous post:
Mulki-06111706
ಪ್ರೋ- ಕಬ್ಬಡಿ ಮಾದರಿ ಪಂದ್ಯಾಟ

ಮುಲ್ಕಿ: ಕಾರ್ನಾಡು ಗಾಂಧೀ ಮೈದಾನದಲ್ಲಿ ನಡೆದ ಪ್ರೊ ಕಬಡ್ಡಿ ಮಾದರಿಯ ಪಂದ್ಯಾ ಕೂಟ ಕಾರ್ನಾಡ್ ಫ್ರೆಂಡ್ಸ್ ಟ್ರೋಫಿ-2017 ಹಾಗೂ 10000ರೂ ನಗದನ್ನು ಮಾಹಾಲಿಂಗೇಶ್ವರ ಉಚ್ಚಿಲ ತಂಡ ಪಡೆದುಕೊಂಡಿದ್ದು...

Close