ಕಟೀಲು ಯಕ್ಷಗಾನ ಮೇಳಕ್ಕೆ ವಿವಿಧ ಕೊಡುಗೆ

ಕಟೀಲು: ತೆಂಕುತಿಟ್ಟಿನ ಯಕ್ಷಗಾನದ ಪ್ರದರ್ಶನವು ಅನಾದಿಕಾಲದಿಂದಲೂ ಸೇವಾರೂಪದಲ್ಲಿ ನಡೆಯುತ್ತಿರುವುದು ಶ್ರೀಕ್ಷೇತ್ರ ಕಟೀಲಿನ ವೈಶಿಷ್ಟ್ಯವಾಗಿದೆ. ಪ್ರಸ್ತುತ ಆರು ಮೇಳಗಳನ್ನು ಹೊಂದಿದ್ದರೂ ಭಕ್ತಾದಿಗಳು 20 ವರ್ಷಕ್ಕಿಂತಲೂ ಹೆಚ್ಚು ತಮ್ಮ ಸೇವೆಗಾಗಿ ಕಾಯುವುದು ಅನಿವಾರ್ಯವಾಗಿದೆ. ಸುಮಾರು 500 ಯಕ್ಷಗಾನ ಸೇವೆಗಳು ಭಕ್ತರಿಂದ ಪ್ರತಿವರ್ಷ ನಡೆಸುವ ಸೇವೆಗಳಾಗಿದ್ದು ಹೀಗೆಯೇ ಬಹಳಷ್ಟು ವರ್ಷ ಸೇವೆಯನ್ನು ಖಾಯಂ ಆಗಿ ನಿರ್ವಹಿಸಿದ ಕೃತಾರ್ಥಭಾವವುಳ್ಳ ಸಮಾನ ಮನಸ್ಕರು ಸೇರಿ ಮೇಳದ ಯಜಮಾನರಾದ ಶ್ರೀ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಹಾಗೂ ಆಸ್ರಣ್ಣ ಸಹೋದರರ, ಆಡಳಿತ ಮಂಡಳಿಯ ಸಲಹೆಯಂತೆ ಕಟ್ಟಿಕೊಂಡಿರುವ ಸಂಸ್ಥೆಯೇ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಧರ್ಮಬೋಧಿನೀ ಚ್ಯಾರಿಟೇಬಲ್ ಟ್ರಸ್ಟ್(ರಿ.)
ಟ್ರಸ್ಟ್‌ನ ದೇಣಿಗೆಗಳು: ಇತರ ಭಕ್ತರಿಂದ ದೇಣಿಗೆ ಪಡೆಯದೆ ಟ್ರಸ್ಟಿಗಳೇ ಸೇರಿ ಎಲ್ಲ ಮೇಳಗಳಿಗೂ ಬಸ್, ರಂಗಸ್ಥಳಗಳನ್ನು ಒದಗಿಸುವುದು ಹಾಗೂ ಎಲ್ಲ ಬೆಳ್ಳಿ ಉಯ್ಯಾಲೆಗಳನ್ನು ಏಕಪ್ರಕಾರವಾಗಿ ಮಾರ್ಪಾಡುಗೊಳಿಸಿ ಮೇಳದೊಂದಿಗೆ ಹೊತ್ತೊಯ್ಯುವ ವ್ಯವಸ್ಥೆ ಮಾಡಿರುವುದು ಈಗ ಇತಿಹಾಸ. ಸುಮಾರು 16 ಲಕ್ಷ ರೂಪಾಯಿಗಳನ್ನು ಮೇಳದ ದೇವರ ಕಿರೀಟಗಳಿಗೆ ಚಿನ್ನದ ಲ್ಯಾಮಿನೇಶನ್ ಮಾಡುವಾಗಲೂ ಟ್ರಸ್ಟಿಗಳು ನೀಡಿರುತ್ತಾರೆ. ದೇವೀಮಹಾತ್ಮೆಯ ದೇವಿ ಪಾತ್ರಕ್ಕೆ ಇಡುವಂತಹ ಎಲ್ಲಾ ಬೆಳ್ಳಿಯ ಕಿರೀಟಗಳಿಗೆ ಚಿನ್ನದ ಲ್ಯಾಮಿನೇಶನನ್ನು ಟ್ರಸ್ಟಿನ ಸದಸ್ಯರು ಸ್ವಂತ ಖರ್ಚಿನಿಂದ ಮಾಡಿಸಿ ದೇಣಿಗೆಯಾಗಿ ನೀಡಿರುತ್ತಾರೆ.
ಈ ವರ್ಷ ಹೊಸ ಬಸ್, ಹೊಸ ಲಾರಿ, ವಿದ್ಯುತ್ ಅಲಂಕಾರ, ಧ್ವನಿವರ್ಧಕ, ಜನರೇಟರ್‌ಗಳ ಕೊಡುಗೆ: ಪ್ರಸ್ತುತ ಮೇಳದಲ್ಲಿ ಇದ್ದ ಬಸ್‌ಗಳೆಲ್ಲವೂ ಹಳೆಯದಾಗಿರುವುದರಿಂದ ಅವುಗಳನ್ನು ವಿಲೇವಾರಿ ಮಾಡಲಾಗಿದೆ. ಅದರ ಬದಲಿಗೆ ಈ ವರ್ಷದಿಂದ ಕಲಾವಿದರು ಹಾಗೂ ಸಿಬ್ಬಂದಿಗಳಿಗೆ ಉಪಯೋಗವಾಗುವಂತೆ ವಿನ್ಯಾಸಗೊಳಿಸಿದ ಹೊಸ ಬಸ್ಸುಗಳನ್ನು ನೀಡುವ ಜೊತೆಗೆ ಸಾಮಾಗ್ರಿಗಳ ಸಾಗಾಣಿಕೆಗೆ ಪ್ರತ್ಯೇಕ ಆರು ಲಾರಿಗಳನ್ನು ಮೇಳಕ್ಕೆ ನೀಡಲಾಗುತ್ತದೆ. ಅದೂ ಅಲ್ಲದೇ ಸೇವಾದಾರರಿಗೆ ಉಪಯೋಗವಾಗುವಂತೆ ರಂಗಸ್ಥಳ ಮತ್ತು ಚೌಕಿಗೆ ವಿದ್ಯುತ್ ಅಲಂಕಾರ ಧ್ವನಿವರ್ಧಕಗಳನ್ನು, ಪ್ರತೀ ಮೇಳಕ್ಕೆ ಎರಡು ಹೊಸ ಜನರೇಟರ್‌ಗಳನ್ನು ನೀಡಲಾಗುತ್ತದೆ. ಭಕ್ತಾದಿಗಳ ಸೇವೆಯಲ್ಲಿ ಇತರ ಉಪಯೋಗವಾಗಕ್ಕಾಗಿ ಇಪ್ಪತ್ತು ಟ್ಯೂಬ್‌ಲೈಟ್‌ಗಳನ್ನು ಭಕ್ತಾದಿಗಳು ಹೇಳುವ ಜಾಗದಲ್ಲಿ ಹಾಕಿ ಭಕ್ತರಿಗೆ ಅನುಕೂಲವನ್ನೂ ಮಾಡಿಕೊಡಲಾಗುವುದು.

Kinnigoli-08111707 Kinnigoli-08111708 Kinnigoli-08111709 Kinnigoli-081117010 Kinnigoli-081117011

Comments

comments

Comments are closed.

Read previous post:
Kinnigoli-08111706
ಕರಾಳ ದಿನಾಚರಣೆಯ ಪ್ರತಿಭಟನಾ ಸಭೆ

ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದ ನರೇಂದ್ರ ಮೋದಿ ಕಿನ್ನಿಗೋಳಿ: ನರೇಂದ್ರ ಮೋದಿ ಅವರು ನೋಟ್ ಬ್ಯಾನ್‌ನಿಂದ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದ್ದಾರೆ. ಇವರ ವಿರುದ್ಧ ಪ್ರಕರಣವನ್ನು...

Close