ಕರಾಳ ದಿನಾಚರಣೆಯ ಪ್ರತಿಭಟನಾ ಸಭೆ

ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದ ನರೇಂದ್ರ ಮೋದಿ
ಕಿನ್ನಿಗೋಳಿ: ನರೇಂದ್ರ ಮೋದಿ ಅವರು ನೋಟ್ ಬ್ಯಾನ್‌ನಿಂದ ದೇಶದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳಿದ್ದಾರೆ. ಇವರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನ. 8ರಂದು ಕೇಂದ್ರ ಸರಕಾರದ ನೋಟು ಅಮಾನ್ಯೀಕರಣದ ಕಾರ್ಯಕ್ರಮಕ್ಕೆ ಒಂದು ವರ್ಷ ಪೂರೈಸಿದ್ದರಿಂದ ಅದನ್ನು ವಿರೋಧಿಸಿ ಹಳೆಯಂಗಡಿ ಮುಖ್ಯ ಬಸ್ ನಿಲ್ದಾಣದ ಬಳಿ ಬುಧವಾರ ನಡೆದ ಕರಾಳ ದಿನಾಚರಣೆಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಮೋದಿ ಅವರು ವಿದೇಶದಿಂದ ಕಾಳಧನಿಕರ ಹಣವನ್ನು ಮರಳಿ ದೇಶಕ್ಕೆ ತರುತ್ತೇವೆ ಎಂದು ಹೇಳಿ ಈಗ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ, ಕಪ್ಪು ಧನಿಕರ ತಿಜೋರಿ ತುಂಬಿಸುವ ಪರೋಕ್ಷ ಅಭಿಯಾನವೇ ಈ ನೋಟು ಬ್ಯಾನ್ ಎಂದರು.
ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸದೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ನೆರವು ನೀಡಿದ್ದಾರೆ. ನೋಟು ಅಮಾನ್ಯತೆ ಕಂಡು ಒಂದು ವರ್ಷ ಕಳೆದರೂ ಜನರು ಅದರ ಪರಿಣಾಮದಿಂದ ಹೊರ ಬಂದಿಲ್ಲ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ಮನ್ಸೂರ್ ಸಾಗ್, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್, ಪಡುಪಣಂಬೂರು ಗ್ರಾಮ ಸಮಿತಿಯ ಅಧ್ಯಕ್ಷೆ ಸವಿತಾ ಶರತ್ ಬೆಳ್ಳಾಯರು, ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ವಿಮಲಾ ಪೂಜಾರಿ, ಪುತ್ತುಬಾವ, ಬಶೀರ್ ಕುಳಾಯಿ, ಅಶೋಕ್ ಪೂಜಾರ್, ಯೋಗೀಶ್ ಕೋಟ್ಯಾನ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಜಲಜಾ, ಸದಸ್ಯರಾದ ಅಬ್ದುಲ್ ಖಾದರ್, ಅಜೀಜ್, ಅನಿಲ್ ಬಂಗೇರ, ಚಂದ್ರಶೇಖರ ಸಸಿಹಿತ್ಲು, ಚಿತ್ರಾ ಸುರೇಶ್, ಪ್ರವೀಣ್ ಸಾಲ್ಯಾನ್, ಶರ್ಮಿಳಾ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
 ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾಕರರು ಬ್ಲಾಕ್ ಕಾಂಗ್ರೇಸ್ ಕಚೇರಿಯಿಂದ ಹಳೆಯಂಗಡಿ ಪೇಟೆಯವರೆಗೆ ಮೆರವಣಿಗೆ ಸಾಗಿದರು. ನೋಟ್ ಬ್ಯಾನ್ ಪರಿಣಾಮದಿಂದ ದೇಶದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಮೌನ ಪ್ರಾರ್ಥನೆ ನಡೆಸಿದರು.

Kinnigoli-08111706

Comments

comments

Comments are closed.

Read previous post:
Kinnigoli-08111705
ಕಿನ್ನಿಗೊಳಿ : ಪ್ರಶಿಕ್ಷಣ ವರ್ಗ

ಕಿನ್ನಿಗೋಳಿ : ಯುವ ಜನಾಂಗಕ್ಕೆ ಸನಾತನ ಹಿಂದು ಧರ್ಮದ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರ ನೀಡುವ ಕಾರ್ಯ ಆಗಬೇಕು. ಎಂದು ಯೋಗ ಶಿಕ್ಷಕ ತರಬೇತು ದಾರ ಜಗದೀಶ ಎಮ್ ಹೇಳಿದರು....

Close