ಹಳೆಯಂಗಡಿ: ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಮೂಲಕ ದೇಶವನ್ನು ಸಂವೃದ್ದಿಗೊಳಿಸುವ ಕನಸು ಸಿದ್ದರಾಮಯ್ಯರವರದ್ದಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಸೋಮವಾರ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುತೋಟ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆದ ಬಳಿಕ ಗ್ರಾಮೀಣ ಪ್ರದೇಶಗಳು ದೂರಗಾಮಿ ನೆಲೆಯಲ್ಲಿ ಅಭಿವೃದ್ಧಿಯಾಗಿದ್ದು ಗ್ರಾಮೀಣ ರಸ್ತೆಗಳನ್ನು ಕಾಂಕ್ರೀಟಿಕರಣದ ಮೂಲಕ ಶಾಶ್ವತ ಅಭಿವೃದ್ಧಿಯಮೂಲಕ ಅವರ ಕಲ್ಪನೆಯನ್ನು ಸಾಕಾರಗೊಳಿಸಿದಂತಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಸಂತ ಬೆರ್ನಾಡ್,ಜಿಲ್ಲಾ ಕಂಗ್ರೆಸ್ ಸಮಿತಿ ಉಪಾಧ್ಯಕ್ಷ ಸಂಜೀವ ಮೊಲಿ ಮೂಡಬಿದ್ರೆ, ಶ್ಥಳಿಯರಾದ ಶೀನ ಸಾಲ್ಯಾನ್,ಜನಾರ್ಧನ ಪಡುಪಣಂಬೂರು,ಜಗದೀಶ ಆಚಾರ್ಯ,ದಿನೇಶ್ ಬೆಳ್ಳಾಯೂರು,ಮೋಹನ್ ಶೆಟ್ಟಿಗಾರ್ ಮಾಧವ ಶೆಟ್ಟಿ, ಹಳೆಯಂಗಡಿ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಜ್, ಸ್ಥಳೀಯ ಮುಖಂಡರಾದ ಧರ್ಮಾನಂದ ಶೆಟ್ಟಿಗಾರ್, ಲತಾ ಕಲ್ಲಾಪು, ಭಾರತಿ ಶೆಟ್ಟಿಗಾರ್,ಅಶೋಕ್ ಪೂಜಾರ್,ಶಮೀರ್ ಕೆ.ಎಸ್.ರಾವ್ ನಗರ,ಕುಸುಮ ಮಡಿವಾಳ,ರೆಣುಕಾ ಶೆಟ್ಟಿಗಾರ್ ನಳಿನಿ, ರತ್ನಾ ಶೆಟ್ಟಿ, ವಿನೇಶ್ ಶೆಟ್ಟಿ ಉಪಸ್ಥಿತರಿದ್ದರು. ಪಡುಪಣಂಬೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸವಿತಾ ಶರತ್ ಸ್ವಾಗತಿಸಿದರು. ಜನಾರ್ದನ ಪಡುಪಣಂಬೂರು ವಂದಿಸಿದರು.