ಕಮನೀಯ ಅರೆಪಾವಿನಾಟ, ಚಪ್ಪರಮಂಚ, ರಂಗಾರಂಗಿ

ಕಟೀಲು : ಇಲ್ಲಿನ ಸರಸ್ವತೀ ಸದನದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವದಲ್ಲಿ ಸೋಮವಾರ ಪ್ರದರ್ಶಿತಗೊಂಡ ಅರೆಪಾವಿನಾಟ, ಚಪ್ಪರಮಂಚ, ರಂಗಾರಂಗಿ ತನ್ನ ವೈವಿಧ್ಯದ ನಡೆಗಳಿಂದ ಗಮನಸೆಳೆಯಿತು.
ಹಾವಿನಾಟದ ವಿಳಂಬಿತ ಚಲನೆಯನ್ನು ಸ್ವಚ್ಛವಾಗಿ ಸ್ಪುಟವಗಿ ತೋರಿಕೊಟ್ಟ ಬಾಲಕಲಾವಿದರಾದ ಶಿವಮನ್ಯು, ಪ್ರಹ್ಲಾದಮೂರ್ತಿ, ಚಪ್ಪರಮಂಚದಲ್ಲಿ ಪ್ರೀತಿಕಾ ಮೆಚ್ಚುಗೆಗೆ ಪಾತ್ರರಾದರು. ಸಾಮಾಜಿಕ ಕಳಕಳಿಯನ್ನು ಯಕ್ಷಗಾನ ಹೊಂದಿತ್ತು ಎನ್ನುವುದನ್ನು ಸಾರಿಹೇಳುವ ಪೂರ್ವರಂಗದ ಪ್ರಸ್ತುತಿಗಳಲ್ಲಿ ಒಂದಾದ ರಂಗಾರಂಗಿಯನ್ನು ಶ್ರೀರಕ್ಷಾ ಹೆಗಡೆ, ಶ್ರೀವರ್ಷಾ ಹೆಗಡೆ ಪ್ರಸ್ತುತಪಡಿಸಿದರು.
ವಾಚಿಕ ಸಮಾರಾಧನೆಯನ್ನು ಮಾಡುತ್ತಿರುವ ಮಕ್ಕಳ ಮೇಳದ ವಿದ್ಯಾರ್ಥಿಗಳಾದ ಧನುಷ್, ಆದರ್ಶ, ಸೃಷ್ಟಿ, ಸೃಜನ್, ದೇವೀಶ್, ದೇವೀಪ್ರಸಾದ್, ಸ್ವಸ್ತಿಕ್, ಶಿಫಾಲಿ ಶರಸೇತುಬಂಧನ ತಾಳಮದ್ದಲೆ ನಡೆಸಿಕೊಟ್ಟರು.
ವೈಶಾಲಿ, ತನ್ಮಯಿ, ಆತ್ಮೀಯ, ಶ್ರೀರಕ್ಷಾ, ತೃಪ್ತಿ, ಪವಿತ್ರಾ, ಯತೂಕ್ಷಾ ಡಿಂಪಲ್ ಯಕ್ಷಗಾನದ ಕೋಲಾಟವನ್ನು ಪ್ರದರ್ಶಿಸಿದರು. ಸಾತ್ವಿಕ ಶರ್ಮ ನಡೆಸಿಕೊಟ್ಟ ಹನೂಮಂತನ ಒಡ್ಡೋಲಗ, ಕಾರ್ತವೀರ‍್ಯನ ಒಡ್ಡೋಲಗವನ್ನು ಧನುಷ್ ಜೋಗಿ(ಕಾರ್ತವೀರ‍್ಯ) ಕೃತ್ತಿಕಾ, ಧನಲಕ್ಷ್ಮೀ, ಶ್ರಾವ್ಯಾ, ಈಶ್ವರೀ ಶೆಟ್ಟಿ(ರಾಣಿಯರು) ಪರಿಣಾಮಕಾರಿಯಾಗಿ ನಡೆಸಿಕೊಟ್ಟರು.
ಕಿರಾತನ ಒಡ್ಡೋಲಗವನ್ನು ಬಾಲಕಲಾವಿದರಾದ ಮನ್ವಿತ್, ತ್ರಿಶಾನ್, ಪ್ರಥ್ವಿ, ಭುವನ್ ದರ್ಶನ್, ಸ್ವಸ್ತಿಕ್, ಹೇಮಂತ್, ಶಿಮನ್ಯು, ದೇವಿಕಿರಣ್, ಪ್ರಹ್ಲಾದ್ ಭಾರಧ್ವಾಜ್, ಅನಿಕೇತ್, ಪ್ರಹ್ಲಾದಮೂರ್ತಿ, ಸೃಜನ್, ಧನುಷ್, ಪ್ರಣಮ್ಯ, ಶಿಫಾಲಿ, ಶ್ರೀರಕ್ಷಾ, ಯಾಚನಾ, ಸಮೃದ್ಧ್, ಸಮರ್ಥ, ಆಕಾಶ್ ಸಮರ್ಥವಾಗಿ ಪ್ರದರ್ಶಿಸಿದರು.
ಹೆಣ್ಣುಬಣ್ಣದ ಒಡ್ಡೋಲಗದೊಂದಿಗೆ ಗಮನಸೆಳೆದವರು ಜೀವನ್. ಬಲಿಪ ಪ್ರಸಾದರ ಭಾಗವತಿಕೆ ಪೂರ್ವರಂಗದ ನಾಟ್ಯಪ್ರಕಾರವನ್ನು ಮತ್ತಷ್ಟು ಎತ್ತರಿಸಿತು. ವಾದಿರಾಜ ಕಲ್ಲೂರಾಯರ ಮಾಹಿತಿಪೂರ್ಣ ನಿರೂಪಣೆಯಿತ್ತು.

Kinnigoli-06111701 Kinnigoli-06111702 Kinnigoli-06111703

Comments

comments

Comments are closed.

Read previous post:
Kinnigoli-08111701
ಪಾವಂಜೆ ಶರವಣಭವನಿಗೆ ಸಂಕೀರ್ತನಾರಾಧನೆ

ಹಳೆಯಂಗಡಿ : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸದ ಪೂರ್ವಭಾವಿಯಾಗ ಶ್ರೀ ಶರವಣಭವನಿಗೆ ಸಂಕೀರ್ತನಾರಾಧನೆ ತಾ. 2ರಿಂದ ಆರಂಭಗೊಂಡಿದ್ದು, ತಾ. 15ರವರೆಗೆ ದಿನಂಪ್ರತಿ ವಿವಿಧ ಭಜನಾತಂಡಗಳಿಂದ...

Close