ಕಿನ್ನಿಗೊಳಿ : ಪ್ರಶಿಕ್ಷಣ ವರ್ಗ

ಕಿನ್ನಿಗೋಳಿ : ಯುವ ಜನಾಂಗಕ್ಕೆ ಸನಾತನ ಹಿಂದು ಧರ್ಮದ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರ ನೀಡುವ ಕಾರ್ಯ ಆಗಬೇಕು. ಎಂದು ಯೋಗ ಶಿಕ್ಷಕ ತರಬೇತು ದಾರ ಜಗದೀಶ ಎಮ್ ಹೇಳಿದರು.
ಭಾನುವಾರ ಕಿನ್ನಿಗೋಳಿ ನೇಕಾರ ಸೌಧ ಸಭಾ ಭವನದಲ್ಲಿ ಗ್ರಾಮ ವಿಕಾಸ ಸಮಿತಿ ಮೂಲ್ಕಿ ಇದರ ಆಶ್ರಯದಲ್ಲಿ ಬಾಲಗೋಕುಲ ನಡೆಸುವ ಮಾತೆಯರಿಗೆ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು. ತರಬೇತುದಾರ ಸೊಂದಾ ಭಾಸ್ಕರ್ ಭಟ್ ಮಾತನಾಡಿ ಭಾರತೀಯ ಹಿಂದೂ ಧರ್ಮ, ಪುರಾತನ ಋಷಿ ಮುನಿಗಳ ಕಾಲದಿಂದಲೂ ಬೆಳೆದು ಬಂದಿದ್ದು ರಾಮಾಯಣ ಮಹಾಭಾರತದಂತ ಮಹಾನ್ ಗ್ರಂಥಗಳು, ವೇದ ಉಪನಿಷತ್‌ಗಳ ಸಾರ, ತತ್ವ ಆದರ್ಶಗಳನ್ನು ಮಕ್ಕಳಿಗೆ ಕಲಿಸಿ ಸುಜ್ಞಾನವಂತರನ್ನಾಗಿ ಮಾಡಬೇಕಾಗಿದೆ ಎಂದು ಹೇಳಿದರು.
ಗ್ರಾಮ ವಿಕಾಸ ಸಮಿತಿಯ ಪ್ರಮುಖರಾದ ಶ್ರೀಕಾಂತ್ ರಾವ್ ಸಸಿಹಿತ್ಲು, ವಿಭಾಗದ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ, ಸಂಘಟಕ ಮಾಧವ ಕೆರೆಕಾಡು, ಲಲಿತಾ ಭಾಸ್ಕರ್, ಯಶವಂತಿ ಶೆಣೈ, ದಮಯಂತಿ ಕೆರೆಕಾಡು, ಸುಜಾತಾ ಕಮ್ಮಜೆ, ಕವಿತಾ ಉಮೇಶ್ ಸಸಿಹಿತ್ಲು, ಪಾರಿಜಾತ ಕೆರೆಕಾಡು ಉಪಸ್ಥಿತರಿದ್ದರು.
ಲಲಿತಾ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08111705

Comments

comments

Comments are closed.

Read previous post:
Kinnigoli-08111704
ಗುತ್ತಕಾಡು ಮನೆ ಮನೆ ಕಾಂಗ್ರೆಸ್ ಬೇಟಿ

ಕಿನ್ನಿಗೋಳಿ: ಸಿದ್ದರಾಮಯ್ಯ ಅವರ ಸರಕಾರದ ಸಾಧನೆಗಳು ಹಾಗೂ ಜನ ಪರ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ತಲುಪಬೇಕು ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮನೆ ಮನೆ ಭೇಟಿ...

Close