ಮೂಲ್ಕಿ-ಕಾಪು ಸಂಪರ್ಕ ಸೇತುವೆ ಶಿಲಾನ್ಯಾಸ

ಮೂಲ್ಕಿ: ಅವಿಭಜಿತ ದ.ಕ.ಜಿಲ್ಲೆಯಲ್ಲಿ ಹಳ್ಳಿ ಮತ್ತು ಪಟ್ಟಣಗಳ ನಡುವಿನ ವ್ಯತ್ಯಾಸ ಕಡಿಮೆಯಾಗಿದ್ದು ದೇಶದಲ್ಲಿ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಹೊಂದಿದ ಪ್ರದೇಶವಾಗಿದೆ. ಸೇತುವೆ ನಿರ್ಮಾಣದ ಮೂಲಕ ಎರಡು ಭಾಗದ ಜನರನ್ನು ಸೇರಿಸುವ ಕಾರ್ಯದ ಜೊತೆಗೆ ಹೃದಯವನ್ನು ಬೆಸೆಯುವ ಮೂಲಕ ಸೌಹಾರ್ದತೆ ಮೂಡಿಸಬೇಕೆಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಸರ್ಕಾರದ ಗ್ರಾಮಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಗಾಂಧಿ ಪಥ ನಮ್ಮ ರಸ್ತೆ ಯೋಜನೆಯಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೆಜಮಾಡಿ-ಕೊಕ್ರಾಣಿ ಕುದ್ರು ರಸ್ತೆ ಹಾಗೂ ಸಂಪರ್ಕ ರಸ್ತೆಗೆ ಮೂಲ್ಕಿಯ ಶಾಂಭವಿ ನದಿ ತಟದ ಕಡಲಿನ ಬಾಗಿಲು ಬಳಿ ಶಿಲಾನ್ಯಾಸಗೈದು ಬಳಿಕ ಜರಗಿದ ಸಮಾರಂಭದಲ್ಲಿ ಮಾತನಾಡಿದ ಅವರು ಅವಿಭಜಿತ ದ.ಕ.ಜಿಲ್ಲೆಯಲ್ಲಿ ದೂರವಾಣಿ ಸಂಪರ್ಕ, ದೂರದರ್ಶನ ಮೊದಲಾದವುಗಳು ದೇಶದ ಇತರ ರಾಜಧಾನಿಗಳಿಗೆ ಬರುವ ಮೊದಲು ಅವಿಭಜಿತ ದ.ಕ.ಜಿಲ್ಲೆಗೆ ಬಂದಿದ್ದು ನೂತನ ಸೇತುವೆ ಮೂಲಕ ಮೂಲ್ಕಿಯಿಂದ ಕಾಪುಗೆ ಕುದ್ರು ಪ್ರದೇಶದವರಿಗೆ ನೇರ ಸಂಪರ್ಕ ಸಾಧ್ಯವಾಗಲಿದೆಯೆಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅವರು ಕ್ಷೇತ್ರದ ಜನತೆಗೆ ತಾನು ನೀಡಿದ ಅಶ್ವಾಸನೆಯಂತೆ ಕಾರ್ಯ ನಿರ್ವಹಿಸಿದ್ದು ಕ್ಷೇತ್ರದಲ್ಲಿ ಈಗಾಗಲೇ 29 ಸೇತುವೆ, 25 ಕೆರೆಗಳ ನಿರ್ಮಾಣವಾಗಿದ್ದು ನಡಿಕುದ್ರು-ಮೂಲ್ಕಿ ಸೇತುವೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಹೆಜಮಾಡಿ ಬಂದರಿಗೆ ಕೇಂದ್ರ ಸರ್ಕಾರ ಹಿಂದೆ ಶೇಕಡಾ 72:25 ಅನುಪಾತದಲ್ಲಿ ಅನುದಾನ ಮಂಜೂರು ಮಾಡಿದ್ದು ಈಗಿನ ಕೇಂದ್ರ ಸರ್ಕಾರವನ್ನು ಅನುದಾನವನ್ನು ಕಡಿತಗೊಳಿಸಿ 50:50 ಕ್ಕೆ ಮಿತಿ ಗೊಳಿಸಿದ್ದರಿಂದ ಸಮಸ್ಯೆಯಾಗಿದ್ದು ಒಟ್ಟು 140 ಕೋಟಿ ಯೋಜನೆಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು, 58 ಕೋಟಿ ವೆಚ್ಚದಲ್ಲಿ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಸ್ತಾವನೆ ಮಂಜೂರಾಗಿದ್ದು ಕುದ್ರು ಬಳಿ 20 ಕೋಟಿ ವೆಚ್ಚದಲ್ಲಿ ವೆಂಟೆಡ್ ಡ್ಯಾಮ್ ನಿರ್ಮಾಣವಾಗಲಿದೆ, ಇದರಿಂದ ಕಾಪು ಕ್ಷೇತ್ರದ ಜೊತೆಗೆ ಮೂಲ್ಕಿ ಪರಿಸರಕ್ಕು ನೀರು ಲಭಿಸಲಿದೆಯೆಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಕೆ ಅಭಯಚಂದ್ರ ಜ್ಯೆನ್ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶಗಳ ಅಭಿವೃದ್ದಿ ಗೆ ಹೆಚ್ಚಿನ ಒತ್ತು ನೀಡಿದ್ದು ಜಿಲ್ಲೆಗೆ ಆಸ್ಕರ್ ಫೆರ್ನಾಂಡಿಸ್ ಮತ್ತು ಜನಾರ್ಧನ ಪೂಜಾರಿಯವರು ನೀಡಿದ ಕೊಡುಗೆ ಅಮೂಲ್ಯವಾಗಿದ್ದು ಅವರ ದೂರದರ್ಶಿತ್ವದಿಂದ ಜಿಲ್ಲೆಯು ಅಭಿವೃದ್ದಿ ಹೊಂದಿದೆಯೆಂದು ಹೇಳಿದರು.
ಶ್ರಿ ಕ್ಷೇತ್ರ ಕಟೀಲಿನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರು ಆಶೀರ್ವಚನ ನೀಡಿದರು.
ಈ ಸಂದರ್ಭ ಆಸ್ಕರ್ ಫೆರ್ನಾಂಡಿಸ್ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಝೇವಿಯರ್ ಗೋಮ್ಸ್, ಮೂಲ್ಕಿ ಮಸೀದಿ ಖತೀಬ ಮಹಮ್ಮದ್ ನೂರ್ ಆಲಂ, ಸುರತ್ಕಲ್ ಚರ್ಚಿನ ಧರ್ಮಗುರು ವಂದನೀಯ ಪೌಲ್ ಪಿಂಟೋ, ಪಡುಬಿದ್ರಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ರೇಣುಕಾ ಪುತ್ರನ್, ಹೆಜಮಾಡಿ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಫಲಿಮಾರ್ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಪುರ್ತಾಡೋ, ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮ್ಮದ್ ಗಫೂರ್, ಯೋಜನಾ ವಿಭಾಗದ ಅಭಿಯಂತರುಗಳಾದ ಕೆ ಸಿ ಸತೀಶ್, ಹೇಮಂತ್, ರಮೇಶ್, ಕಾಫು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಡಾ ಎಂ ಎ ಆರ್ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli-081117013 Kinnigoli-081117014

Comments

comments

Comments are closed.

Read previous post:
Kinnigoli-081117012
ಹಗ್ಗ ಜಗ್ಗಾಟ ತೋಕೂರು ಐಟಿಐ ರನ್ನರ‍್ಸ್ ಅಫ್ ಪ್ರಶಸ್ತಿ

ಕಿನ್ನಿಗೋಳಿ : ಮಂಗಳೂರಿನ ಜೆಪ್ಪು ಸೈಂಟ್ ಜೋಸೆಫ್ ಐಟಿಐನಲ್ಲಿ ಜರಗಿದ ಅಂತರ್ ಜಿಲ್ಲಾ ಮಟ್ಟದ ಐಟಿಐಗಳ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ತೋಕೂರು ತಪೋವನದ ಎಂ ಆರ್ ಪೂಂಜ ಐಟಿಐ...

Close