“ಪಿರ ಬನ್ನಗ” ನಾಟಕ ಮುಹೂರ್ತ

ಮೂಲ್ಕಿ: ರಂಗಭೂಮಿಯಿಂದ ಗ್ರಾಮೀಣ ಕಲಾವಿದರು ಬೆಳಕಿಗೆ ಬರಲು ಸಹಕಾರಿಯಾಗಿದೆ. ನಾಟಕವು ಜೀವನದ ನೈಜತೆಯನ್ನು ಪ್ರತಿಬಿಂಬಿಸುವಲ್ಲಿ ಸಹಕಾರಿಯಾಗಿದೆ. ಕಲಾವಿದರು ಸಹ ನಿಷ್ಠೆಯಿಂದ ಕಲಾಮಾತೆಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಮೂಲ್ಕಿಯ ಸಾಯಿ ಕಲಾವಿದರು ತಂಡದ ನಾಟಕ ರಚನೆಗಾರ ದಯೇಶ್ ಪುತ್ತೂರು ಹೇಳಿದರು.
ಅವರು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾನಾಡಿ ಫ್ರೇಂಡ್ಸ್ ಮಾನಂಪಾಡಿ ಇವರು ಅಭಿನಯಿಸುವ ದಿನಕರ ಭಂಡಾರಿ ರಚನೆಯ “ಪಿರ ಬನ್ನಗ” ತುಳು ನಾಟಕದ ಮುಹೂರ್ತ ಸಮಾರಂಭದಲ್ಲಿ ಶುಭ ಹಾರೈಸಿದರು.
ದೇವಳದ ಅರ್ಚಕ ಕೃಷ್ಣದಾಸ್ ಭಟ್ ಅವರು ಮುಹೂರ್ತವನ್ನು ನೆರವೇರಿಸಿ ಆಶೀರ್ವದಿಸಿದರು.
ಮಾನಾಡಿ ಫ್ರೇಂಡ್ಸ್‌ನ ಸತೀಶ್ ಕೋಟ್ಯಾನ್ ಮಾತನಾಡಿ, ಸಂಸ್ಥೆಯ ಹಾಗೂ ಸ್ಥಳೀಯ ಪ್ರತಿಭಾನ್ವಿತ ಕಲಾವಿದರ ಸಂಗಮದಿಂದ ಡಿಸೆಂಬರ್ ೨೩ರಂದು ಮಾನಂಪಾಡಿ ಸರಕಾರಿ ಶಾಲೆಯ ವಾರ್ಷಿಕೋತ್ಸವದಂದು “ಪಿರ ಬನ್ನಗ” ತುಳು ನಾಟಕವನ್ನು ಪ್ರದರ್ಶಿಸಲಾಗುವುದು. ಹಿರಿಯ ಕಲಾವಿದರಾದ ಮನೋಹರ್ ಕೋಟ್ಯಾನ್, ನರೇಂದ್ರ ಕೆರೆಕಾಡು, ನಿತಿನ್ ಶೆಟ್ಟಿ ಪಂಜಿನಡ್ಕ, ದಯೇಶ್ ಪುತ್ತೂರು, ಸುರೇಶ್ ಶೆಟ್ಟಿಗಾರ್ ಕೆರೆಕಾಡು ಮುಂತಾದ ಕಲಾವಿದರು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಲಾವಿದ ಜಯರಾಜ್ ಶೆಟ್ಟಿ, ತಿಲಕ್‌ರಾಜ್ ಮಾನಂಪಾಡಿ, ತಾಂತ್ರಿಕ ಹಾಗೂ ಸಂಗೀತ ನಿರ್ದೇಶಕ ಧನಂಜಯ ಕೊಲಕಾಡಿ, ಕಿನ್ನಿಗೋಳಿಯ ವಿಜಯಾ ಕಲಾವಿದರಾದ ನರೇಂದ್ರ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.

Kinnigoli-08111703

Comments

comments

Comments are closed.

Read previous post:
Kinnigoli-08111702
ಮೂಡುತೋಟ ರಸ್ತೆ – ಲೋಕಾರ್ಪಣೆ

ಹಳೆಯಂಗಡಿ: ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಮೂಲಕ ದೇಶವನ್ನು ಸಂವೃದ್ದಿಗೊಳಿಸುವ ಕನಸು ಸಿದ್ದರಾಮಯ್ಯರವರದ್ದಾಗಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಸೋಮವಾರ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುತೋಟ ರಸ್ತೆಯ...

Close