ಜೀವನದಲ್ಲಿ ಗುರಿ ತಲುಪಲು ಸಾಧನೆ ಮುಖ್ಯ

ಕಿನ್ನಿಗೋಳಿ: ಜೀವನದಲ್ಲಿ ಗುರಿ ತಲುಪಲು ಸಾಧನೆ ಮುಖ್ಯ. ಇಂದಿನ ದಿನದಲ್ಲಿ ಹೆತ್ತವರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಮಕ್ಕಳನ್ನೇ ಆಸ್ತಿಯಾಗಿ ಮಾಡುತ್ತಿದ್ದಾರೆ, ಶಿಬಿರದ ಮೂಲಕ ವಿಧ್ಯಾರ್ಥಿಗಳು ತಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ ಎಂದು ಲಯನ್ ಡಾ. ಮೆಲ್ವಿನ್ ಡಿ ಸೋಜ ಹೇಳಿದರು.
ಸರಕಾರಿ ಪ್ರೌಢಶಾಲೆ ನಡುಗೋಡು ಉತ್ತರ ವಲಯ ಹಾಗೂ ಲಯನ್ಸ್ ಕ್ಲಬ್ ಕಿನ್ನಿಗೋಳಿ ಇವರ ಸಹಯೋಗದಲ್ಲಿ ನಡುಗೋಡು ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ಕಲಾತ್ಮಕ ಚಟುವಟಿಕೆ ಮತ್ತು ವೈಜ್ಜಾನಿಕ ಮನೋಭಾವನೆಗಾಗಿ ವಿದ್ಯಾರ್ಥಿಗಳು, ಫಸಲು ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಯನ್ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಲ್ಲಿನ ಕಲಾತ್ಮಕ ಚಟುವಟಿಕೆಗಳಿಗಾಗಿ ಶಿಬಿರವನ್ನು ಆಯೋಜಿಸಲಾಗಿದೆ, ಗ್ರಾಮೀಣ ಪ್ರದೇಶದಲ್ಲಿನ ನಡುಗೋಡು ಶಾಲೆ ರಾಷ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದು ಉತ್ತಮ ಸಾಧನೆ ಮಾಡಿದೆ. ಮಕ್ಕಳ ರಕ್ಷಕರ ಸಹಕಾರದಿಂದ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹೇಳಿದರು.
ಈ ಸಂದರ್ಭ ನಿವೃತ್ತ ಶಿಕ್ಷಕ ವಿಶ್ವನಾಥ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಗದೀಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ಲಯನ್ಸ್ ಕ್ಲಬ್ ನ ಸುಧಾಕರ ಶೆಟ್ಟಿ, ಯೋಗೀಶ್ ರಾವ್, ಮೋಹನ್ ದಾಸ್ ಶೆಟ್ಟಿ, ಪ್ರೇಮಲತಾ ಶೆಟ್ಟಿ, ಮುಲ್ಕಿ ಬಂಟರ ಸಂಘದ ಮಲ್ಲಿಕಾ ಪೂಂಜ, ಯೋಗ ಶಿಕ್ಷಕಿ ಕಾಂಚನಾ ಗಣೇಶ್, ಶಾಲಾ ನಾಯಕ ಪ್ರಜ್ವಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ಎನ್ ಸ್ವಾಗತಿಸಿ ಪ್ರಸ್ತಾವನೆಗೈದರು, ಶಿಕ್ಷಕಿ ವಿದ್ಯಾ ಟಿ ವಂದಿಸಿದರು, ಮಂಗಳಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli10111705

 

Comments

comments

Comments are closed.

Read previous post:
Kinnigoli-10111701
ಸಮಸ್ಯೆಗೆ ಸ್ಪಂದಿಸುವ ಮನೋಭಾವ ನಮ್ಮಲ್ಲಿರಲಿ

ಹಳೆಯಂಗಡಿ : ಜನಪ್ರತಿನಿಧಿಗಳಾದ ಮೇಲೆ ಆಶ್ವಾಸನೆ ಕೊಡುವುದು ಸಹಜಗುಣ ಆದರೆ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವ ಮನೋಭಾವನೆ ಬೆಳೆದಲ್ಲಿ ಮಾತ್ರ ಜನರು ನಮ್ಮ ಮೇಲೆ ವಿಶ್ವಾಸವಿಡುತ್ತಾರೆ. ಗ್ರಾಮೀಣ ಭಾಗದಲ್ಲಿ...

Close