ಸಮಸ್ಯೆಗೆ ಸ್ಪಂದಿಸುವ ಮನೋಭಾವ ನಮ್ಮಲ್ಲಿರಲಿ

ಹಳೆಯಂಗಡಿ : ಜನಪ್ರತಿನಿಧಿಗಳಾದ ಮೇಲೆ ಆಶ್ವಾಸನೆ ಕೊಡುವುದು ಸಹಜಗುಣ ಆದರೆ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವ ಮನೋಭಾವನೆ ಬೆಳೆದಲ್ಲಿ ಮಾತ್ರ ಜನರು ನಮ್ಮ ಮೇಲೆ ವಿಶ್ವಾಸವಿಡುತ್ತಾರೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ದಾರಿದೀಪಕ್ಕೆ ವಿಶೇಷ ಆದ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದು ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಹೇಳಿದರು.
ಹಳೆಯಂಗಡಿಯ ಗುಡ್ಡೆಮನೆಯ ರಸ್ತೆಗೆ ಇಂಟರ್‌ಲಾಕ್ ಮತ್ತು ಕಾಂಕ್ರೀಟೀಕರಣಗೊಂಡ ರಸ್ತೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಥಳೀಯ ಹಿರಿಯ ನಿವಾಸಿ ಎಡ್ವರ್ಡ್ ಕುಟಿನ್ಹೋ ಅವರು ರಸ್ತೆಯನ್ನು ಉದ್ಘಾಟಿಸಿದರು.
ದ.ಕ.ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು ಶುಭ ಹಾರೈಸಿದರು.
ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಚಿತ್ರಾ ಸುಕೇಶ್, ಬೇಬಿ ಸುಲೋಚನಾ, ಪಿಸಿಎ ಬ್ಯಾಂಕ್ ನಿರ್ದೇಶಕ ಹಿಮಕರ್ ಕದಿಕೆ, ಉದ್ಯಮಿ ಸಂತೋಷ್ ಶೆಟ್ಟಿ, ಸ್ಥಳೀಯ ಗ್ರಾಮಸ್ಥರಾದ ಪೂವಪ್ಪ ಅಂಚನ್, ನಾಗರಾಜ್, ರಿತೇಶ್ ಕೆಲಸಿಬೆಟ್ಟು, ಹರೀಶ್ ಸಾಲ್ಯಾನ್, ಮನೋಜ್‌ಕುಮಾರ್ ಕೆಲಸಿಬೆಟ್ಟು, ಎಚ್.ರಾಮಚಂದ್ರ ಶೆಣೈ, ಕೇಶವ ಬಂಗೇರ, ಯೋಗೀಶ್ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಾ ಸುಖೇಶ್ ಸ್ವಾಗತಿಸಿದರು, ಮನೋಜ್‌ಕುಮಾರ್ ವಂದಿಸಿದರು.

Kinnigoli-10111701

Comments

comments

Comments are closed.