ಕಿನ್ನಿಗೋಳಿ : ಮನೆ ಮನೆ ಕಾಂಗ್ರೆಸ್ ಭೇಟಿ

ಕಿನ್ನಿಗೋಳಿ : ಗ್ರಾಮೀಣ ಭಾಗದ ಜನರಿಗೆ ಸಿದ್ದರಾಮಯ್ಯ ಸರಕಾರದ ಜನ ಪರ ಯೋಜನೆಗಳು ತಲುಪಬೇಕು ಎಂಬ ಸದುದ್ದೇಶದಿಂದ ಕಾಂಗ್ರೆಸ್ ಪಕ್ಷ ಮನೆ ಮನೆ ಬೇಟಿ ಅಭಿಯಾನ ಆರಂಭಿಸಿದೆ ಎಂದು ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಕಿನ್ನಿಗೋಳಿಯ ಹೊಸಕಾವೇರಿ ಪರಿಸರದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿನ್ನಿಗೋಳಿ ಕಾಂಗ್ರೆಸ್ ವಲಯದ ಮನೆ- ಮನೆ ಬೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದಿನ ಸರಕಾರ ಮಾಡದಂತಹ ಜನ ಪರ ಯೋಜನೆ ಸೌಲಭ್ಯಗಳನ್ನು ರಾಜ್ಯ ಸರಕಾರ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನ ಮಾಡಿದೆ ಎಂದು ಹೇಳಿದರು.
ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ಕಾರ್ಯಕರ್ತರೆ ಪಕ್ಷದ ಜೀವ ನಾಡಿಗಳು ಸರಕಾರದ ಉತ್ತಮ ಯೋಜನೆಗಳನ್ನು ಜನರಿಗೆ ಮನ ಮುಟ್ಟುವಂತಹ ಕಾರ್ಯ ಕಾರ್ಯಕರ್ತರು ಮಾಡಬೇಕು. ಶಾಸಕ ಅಭಯಚಂದ್ರಜೈನ್ ಅವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಉತ್ತಮ ಕಾಮಗಾರಿಗಳು ನಡೆದಿದೆ ಎಂದು ಹೇಳಿದರು.
ದ. ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಟಿ. ಎಚ್. ಮಯ್ಯದ್ದಿ, ಸುನೀತಾ ರೋಡ್ರಿಗಸ್, ಸಂತೋಷ್, ಚಂದ್ರಶೇಖರ್, ಶರತ್ ಕುಮಾರ್, ಅರುಣ್‌ಕುಮಾರ್, ಉಮಾವತಿ, ಅಬ್ದುಲ್ ಹಕೀಂ ಕಾರ್ನಾಡ್, ಟಿ. ಕೆ. ಅಬ್ದುಲ್ ಕಾದರ್, ಅಬೂಬಕ್ಕರ್, ಅಶೋಕ್ ಪೂಜಾರ್, ಟಿ. ಟ ಹನೀಫ್, ರಮೇಶ್, ಲಕ್ಷ್ಮಣ್ ಕುಕ್ಯಾನ್, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli10111706 Kinnigoli10111707

Comments

comments

Comments are closed.

Read previous post:
Kinnigoli10111705
ಜೀವನದಲ್ಲಿ ಗುರಿ ತಲುಪಲು ಸಾಧನೆ ಮುಖ್ಯ

ಕಿನ್ನಿಗೋಳಿ: ಜೀವನದಲ್ಲಿ ಗುರಿ ತಲುಪಲು ಸಾಧನೆ ಮುಖ್ಯ. ಇಂದಿನ ದಿನದಲ್ಲಿ ಹೆತ್ತವರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ ಮಕ್ಕಳನ್ನೇ ಆಸ್ತಿಯಾಗಿ ಮಾಡುತ್ತಿದ್ದಾರೆ, ಶಿಬಿರದ ಮೂಲಕ ವಿಧ್ಯಾರ್ಥಿಗಳು...

Close