ಹಳೆಯಂಗಡಿ ಬಿಜೆಪಿ ಪರಿವರ್ತನಾ ಯಾತ್ರೆ

ಹಳೆಯಂಗಡಿ : ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಜೆಪಿಯ ಪರಿವರ್ತನಾ ಯಾತ್ರೆಯಿಂದ ಗ್ರಾಮೀಣ ಭಾಗದ ಕಾರ್ಯಕರ್ತರನ್ನು ಸಂಘಟಿಸಲು ಸಹಕಾರಿಯಾಗಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಜನರಿಗೆ ತಿಳಿಸುವ ಮೂಲಕ ರಾಜ್ಯದಲ್ಲಿಯೇ ಜನರು ಪರಿವರ್ತನೆಯನ್ನು ಬಯಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಸತೀಶ್ ಭಟ್ ಹಳೆಯಂಗಡಿ ಹೇಳಿದರು.
ಹಳೆಯಂಗಡಿಯಲ್ಲಿ ಬಿಜೆಪಿಯ ಹಳೆಯಂಗಡಿ ಗ್ರಾಮ ಸಮಿತಿಯಿಂದ ನಡೆದ ಪರಿವರ್ತನಾ ಯಾತ್ರೆಯ ಪ್ರಚಾರ ಕಾರ್ಯಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಸುಮಾರು ೨೫ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ನಾಯಕರು ಸೇರುವ ಸಾಧ್ಯತೆ ಇದೆ. ಮನೆ ಮನೆಗೆ ತೆರಳಿ ಇನ್ನೂ ಹೆಚ್ಚಿನ ಜನರು ಸ್ವಯಂ ಪ್ರೇರಿತರಾಗಿ ಆಗಮಿಸಲು ಪ್ರೇರೇಪಿಸುವ ಜನ ಸಂಪರ್ಕ ಅಗತ್ಯ ಎಂದರು.
ದ.ಕ.ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ವಿನೋದ್‌ಕುಮಾರ್, ಹಳೆಯಂಗಡಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು, ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್ ಸಸಿಹಿತ್ಲು, ಸದಸ್ಯರಾದ ನಾಗರಾಜ್, ಎಚ್.ರಾಮಚಂದ್ರ ಶೆಣೈ, ಹಿಮಕರ್, ಬೇಬಿ ಸುಲೋಚನಾ, ರಿತೇಶ್ ಸಾಲ್ಯಾನ್, ಮನೋಜ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Mulki-11111701

 

Comments

comments

Comments are closed.

Read previous post:
Kinnigoli10111706
ಕಿನ್ನಿಗೋಳಿ : ಮನೆ ಮನೆ ಕಾಂಗ್ರೆಸ್ ಭೇಟಿ

ಕಿನ್ನಿಗೋಳಿ : ಗ್ರಾಮೀಣ ಭಾಗದ ಜನರಿಗೆ ಸಿದ್ದರಾಮಯ್ಯ ಸರಕಾರದ ಜನ ಪರ ಯೋಜನೆಗಳು ತಲುಪಬೇಕು ಎಂಬ ಸದುದ್ದೇಶದಿಂದ ಕಾಂಗ್ರೆಸ್ ಪಕ್ಷ ಮನೆ ಮನೆ ಬೇಟಿ ಅಭಿಯಾನ ಆರಂಭಿಸಿದೆ ಎಂದು...

Close