ರಕ್ಷಕ ಶಿಕ್ಷಕ ಸಮಾಲೋಚನಾ ಸಭೆ

ಮೂಲ್ಕಿ: ವಿದ್ಯಾರ್ಥಿಗಳ ಉನ್ನತಿಯಲ್ಲಿ ಶಿಕ್ಷಕರಂತೆ ಪೋಷಕರ ಪಾತ್ರವೂ ಮುಖ್ಯವಾಗಿದೆ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಮನೋವೈದ್ಯೆ ಡಾ. ಕರೋಲಿನ್.ಪಿ ಡಿಸೋಜಾ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ಪದವಿ ಪೂರ್ವ ವಿಭಾಗದ ರಕ್ಷಕ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಇಂದು ಆಧುನಿಕ ತಂತ್ರಜ್ಞಾನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ವಿಷಯದಲ್ಲಿ ಮನೆಯ ಜವಾಬ್ದಾರಿಯಿಂದ ಮುಕ್ತಗೊಳಿಸುವುದು ವಿದ್ಯಾರ್ಥಿಗಳು ವ್ಯಕ್ತಿಗತವಾಗಿ ಏಕಾಂಗಿಗಳಾಗಲು ಹಾಗೂ ಖಿನ್ನತೆ ಆವರಿಸಿಕೊಳ್ಳಲು ಕಾರಣವಾಗುತ್ತದೆ.ಇದು ಮುಂದೆ ಅಫರಾಧಿ ಪ್ರವೃತ್ತಿ ದುಶ್ಚಟಗಳಿಗೆ ಕಾರಣವಾಗುತ್ತದೆ. ಮಕ್ಕಳಿಗೂ ಮನೆಯ ಜವಾಬ್ದಾರಿಗಳ ಕೆಲ ಅಂಶ ಪರಿಚಯಿಸುವ ಜೊತೆಗೆ ಅವರ ಶಿಕ್ಷಣ ಪ್ರಕ್ರಿಯೆಗೆ ಪೋಷಕರು ಸಹಕಾರಿಗಳಾಗಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು, ಮಕ್ಕಳ ನಿರ್ವಹಣೆಯಲ್ಲಿ ಪೋಷಕರು ಅವರಿಗೆ ಮಾದರಿ ವ್ಯಕ್ತಿಗಳಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್. ಸುಹಾಸ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳ ಉನ್ನತಿಗೆ ಶಿಕ್ಷಕರರೊಂದಿಗೆ ಸಮಭಾಗಿದಾರಿಕೆಯನ್ನು ಪೋಷಕರು ಹೊಂದಿರುವುದು ಬಹಳ ಅಗತ್ಯ. ಮಕ್ಕಳ ಭವಿಷ್ಯಕ್ಕೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಕಾಲೇಜಿನೊಂದಿಗೆ ನಿರಂತರ ಸಂಪರ್ಕವಿರಿಸಿ ಕಾಲೇಜಿನ ಅಭ್ಯುದಯಕ್ಕಾಗಿ ಆಡಳಿತ ಮಂಡಳಿ ನಡೆಸುವ ಕಾರ್ಯಕ್ಕೆ ಸಹಕಾರಿಗಳಾಗಬೇಕು ಎಂದರು.
ಈ ಸಂದರ್ಭ 2016-17 ಸಾಲಿನ ದ್ವಿತೀಯ ಪಿಯು ಪ್ರತಿಭಾನ್ವಿತರನ್ನು ಪ್ರಶಸ್ತಿ ಪತ್ರ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯ ವಿ.ಶಿವರಾಮ ಕಾಮತ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ,ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು.
ಪ್ರಗತಿ ಪ್ರಾರ್ಥಿಸಿದರು, ಪ್ರಾಂಶುಪಾಲೆ ಪಮೀದಾ ಬೇಗಂ ಸ್ವಾಗತಿಸಿದರು,ಎಲಿಜಬೆತ್ ತಾನಿಯಾ ಅತಿಥಿ ಪರಿಚಯಿಸಿದರು,ಶ್ರೀಲಕ್ಷ್ಮಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು.ಸೋಮಶೇಖರ್ ಭಟ್ ನಿರೂಪಿಸಿದರು.ರೂಪಶ್ರೀ ವಂದಿಸಿದರು.

Mulki-13111701

Comments

comments

Comments are closed.

Read previous post:
Kinnigoli-12111719
Kinnigoli Parish Annuval Festival – Sunday Procession

ಕಿನ್ನಿಗೋಳಿ : ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನ ವಾರ್ಷಿಕ ಹಬ್ಬದ ಪ್ರಯುಕ್ತ ಭಾನುವಾರ ಮೆರವಣಿಗೆ ಹಾಗೂ ಬಲಿಪೂಜೆ ನಡೆಯಿತು.  

Close