ಕರ್ನಿರೆ – ಭಜನಾ ಸಂಕೀರ್ತನೆ

ಪಾವಂಜೆ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ೨೦೧೮ರಲ್ಲಿ ನೆರವೇರುವ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ತುಲಾಮಾಸದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶರವಣಭವನಿಗೆ ಸಂಕೀರ್ತನಾರಾಧನೆಯಲ್ಲಿ ಶನಿವಾರ ಭಜನಾ ಸಪ್ತಾಹ ಸಂಪನ್ನಗೊಂಡಿತು.
ಭಜನಾ ಸಪ್ತಾಹದಲ್ಲಿ ತಾಳಿಪಾಡಿ ಕುಜಿಂಗಿರಿ ಶ್ರೀ ರಕ್ತೇಶ್ವರಿ ದೈವಸ್ಥಾನ, ಗೋಳಿಜೋರ ಶ್ರೀ ಹರಿಹರ ಭಜನಾ ಮಂದಿರ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ,
ಕಮ್ಮಾಜೆ ನೇಕಾರ ಕಾಲೋನಿಯ ಶ್ರೀ ದುರ್ಗಾ ಭಜನಾ ಮಂದಿರ,
ಮೆನ್ನಬೆಟ್ಟು ಶ್ರೀ ಬ್ರಾಹ್ಮರೀ ಮಹಿಳಾ ಸಮಾಜ,ಕಿನ್ನಿಗೋಳಿಯ
ಶ್ರೀ ಕಾಳಿಕಾಂಬಾ ಮಹಿಳಾ ಭಜನಾ ಮಂಡಳಿ ಹಾಗೂ
ಶ್ರೀ ವಿಶ್ವಕರ್ಮ ಭಜನಾ ಮಂಡಳಿ,ಕರ್ನಿರೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಮತ್ತು ಸುರತ್ಕಲ್‌ನ ಯುವರಂಜಿನಿ ತಂಡವು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡವು.
ದೇವಳದ ಧರ್ಮದರ್ಶಿ ಯಾಜಿ ಡಾ.ನಿರಂಜನ್ ಭಟ್, ಮೊಕ್ತೇಸರರಾದ ಎಂ.ಶಶೀಂದ್ರ ಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್ ಅವರು ಭಜನಾ ಸಂಕೀರ್ತನೆಗಾರರನ್ನು ದೇವಳದ ವತಿಯಿಂದ ಗೌರವಿಸಿದರು.

Mulki-13111702

Comments

comments

Comments are closed.

Read previous post:
Kateel-13111701
ಕಟೀಲು: 72 ಜೋಡಿ ವಿವಾಹ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಭಾನುವಾರ 72 ಜೋಡಿಗಳಿಗೆ ವಿವಾಹ ನಡೆಯಿತು.  

Close