ಕಟೀಲು ಮೇಳಗಳ 2017-18 ನೇ ಸಾಲಿನ ಪ್ರಥಮ ಸೇವೆಯಾಟ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಯಕ್ಷಗಾನ ಮೇಳಗಳ 2017-18ನೇ ಸಾಲಿನ ಸೇವೆ ಬಯಲಾಟಗಳ ತಿರುಗಾಟದ ಪ್ರಥಮ ಸೇವೆಯಾಟದ ಪ್ರಯುಕ್ತ ದೇವಳದಲ್ಲಿ ಸೋಮವಾರ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆರು ಮೇಳದ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಿದರು. ಆರು ಮೇಳಗಳ ದೇವರ ಪೆಟ್ಟಿಗೆ ,ಚಿನ್ನ, ಬೆಳ್ಳಿಯ ಕಿರೀಟ ಹಾಗೂ ಆಯುಧಗಳನ್ನು ದೇವಳದಲ್ಲಿ ಪೂಜೆ ಬಳಿಕ ಶಾಲಾ ಸರಸ್ವತೀ ಸದನದಲ್ಲಿನ ಚೌಕಿಯಲ್ಲಿ ಪೂಜೆ ನಡೆಯಿತು. ದೇವಳದ ರಥಬೀದಿಯಲ್ಲಿ ನಿರ್ಮಿಸಿದ ಆರು ರಂಗಸ್ಥಳಗಳಲ್ಲಿ ಬಯಲಾಟ ನಡೆಯಿತು. ಕಟೀಲು ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ , ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ , ವೇದವ್ಯಾಸ ತಂತ್ರಿ , ದೇವಳದ ಪ್ರಬಂಧಕ ತಾರನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kateel-14111701 Kateel-14111702 Kateel-14111703 Kateel-14111704 Kateel-14111705 Kateel-14111706 Kateel-14111707 Kateel-14111708 Kateel-14111709 Kateel-14111710 Kateel-14111711 Kateel-14111712 Kateel-14111713

Comments

comments

Comments are closed.

Read previous post:
Mulki-13111702
ಕರ್ನಿರೆ – ಭಜನಾ ಸಂಕೀರ್ತನೆ

ಪಾವಂಜೆ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ೨೦೧೮ರಲ್ಲಿ ನೆರವೇರುವ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ತುಲಾಮಾಸದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶರವಣಭವನಿಗೆ ಸಂಕೀರ್ತನಾರಾಧನೆಯಲ್ಲಿ ಶನಿವಾರ ಭಜನಾ ಸಪ್ತಾಹ...

Close