ಹಳೆಯಂಗಡಿ: ಗುರುತು ಚೀಟಿ ವಿತರಣೆ

ಕಿನ್ನಿಗೋಳಿ: ಹಿರಿಯ ನಾಗರಿಕರನ್ನು ಗುರುತಿಸುವುದು ದೇವರ ಕೆಲಸವಾಗಿದ್ದು ಸಮಾಜ ಕಟ್ಟವಂತಹ ಕೆಲಸವನ್ನು ಸಂಘಟನೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜ ಹೇಳಿದರು.
ಹಳೆಯಂಗಡಿಯ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲ, ಹಳೆಯಂಗಡಿಯ ಕೆನರಾ ಬ್ಯಾಂಕ್ ಮತ್ತು ಹಳೆಯಂಗಡಿಯ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಹಿರಿಯ ನಾಗರಿಕರ ಸಂಘದ ಸಹಯೋಗದೊಂದಿಗೆ ಶನಿವಾರ ಹಳೆಯಂಗಡಿಯ ಜಾರಂದಾಯ ದೈವಸ್ಥಾನದ ಶ್ರೀನಿವಾಸ ಕಲಾ ಮಂದಿರದಲ್ಲಿ ಹಿರಿಯ ನಾಗರಿಕರಿಗೆ ಗುರುತು ಚೀಟೀ ನೋಂದಾವಣೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ಎಚ್ ವಿಶ್ವನಾಥ ಪ್ರಭು, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ನಿರ್ದೇಶಕ ಕೆ ಸಾಹುಲ್ ಹಮೀದ್ ಕದಿಕೆ ಮತ್ತು ಮಂಗಳೂರಿನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ದೇವದಾಸ್ ಕಾಮತ್, ಎಚ್ ಡಿ ಪವಾರ್, ಸತೀಶ್ ಭಟ್ ಕೊಳುವೈಲು, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟಿನ ಅಧ್ಯಕ್ಷ ಸೂರ್ಯ ಕುಮಾರ್ ಹಳೆಯಂಗಡಿ, ಸದಾಶಿವ ಅಂಚನ್, ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆಮೀನ್, ಸುಜಾತಾ ವಾಸುದೇವ, ಯುವತಿ ಮಂಡಲದ ಅಧ್ಯಕ್ಷೆ ದಿವ್ಯಾಶ್ರೀ ಉಪಸ್ಥಿತರಿದ್ದರು. ಸುಧಾಕರ ಆಮೀನ್ ಸ್ವಾಗತಿಸಿ ಸ್ಟೇನಿ ಡಿಕೋಸ್ತಾ ವಂದಿಸಿದರು. ರಾಮದಾಸ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು ಬಳಿಕ ಹಿರಿಯ ನಾಗರಿಕರಿಗೆ ಗುರುತಿ ಚೀಟಿ.

Kinnigoli-14111705

Comments

comments

Comments are closed.

Read previous post:
Kinnigoli-14111704
ಕವನ ಸಂಕಲನ ಲೋಕಾರ್ಪಣೆ

ಕಿನ್ನಿಗೋಳಿ: ವೇದಕಾಲದಿಂದ ಹಿಡಿದು ಆಧುನಿಕ ಕಾಲದ ವರೆಗಿನ ಭಾರತದ ಚಿತ್ರಣವನ್ನು 42 ಇಂಗ್ಲೀಷ್ ಕವನಗಳ ರೂಪದಲ್ಲಿ ಬಣ್ಣಿಸಿದ ಕೆ.ಜಿ.ಮಲ್ಯರ ನೂತನ ಕವನ ಸಂಕಲನವು ನಮ್ಮ ದೇಶದ 70ನೆಯ ಸ್ವಾತಂತ್ರ್ಯೋತ್ಸವವನ್ನು...

Close