ಜಾಗರಣ ವೇದಿಕೆಯಿಂದ ಶಿಕ್ಷಣಕ್ಕೆ ನೆರವು

ಹಳೆಯಂಗಡಿ: ಇಲ್ಲಿನ ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ ಮಂಡಲದ ವತಿಯಿಂದ ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಸಿಡಿಮದ್ದು ವ್ಯವಹಾರವನ್ನು ಮುಖ್ಯ ಪೇಟೆಯಲ್ಲಿ ನಡೆಸಿದ್ದು ಅದರಲ್ಲಿ ಬಂದಂತಹ ಲಾಭಾಂಶವನ್ನು ಸಮಾಜ ಸೇವೆಗೆ ಮೀಸಲಿರಿಸಿ ವಿತರಿಸಲಾಗಿದೆ.
ಮೊದಲ ಭಾಗವಾಗಿ ಕೊಳುವೈಲು ನಿವಾಸಿ ಭಾಮಿನಿ ಅವರ ಪುತ್ರಿಯ ಶಿಕ್ಷಣಕ್ಕೆ ಧನಸಹಾಯವನ್ನು ನೀಡಲಾಯಿತು. ಈ ಸಂದರ್ಭ ಹಿಂದು ಜಾಗರಣ ವೇದಿಕೆ ಹಳೆಯಂಗಡಿ ಮಂಡಲ ಅಧ್ಯಕ್ಷ ಹರೀಶ್, ಸುರತ್ಕಲ್ ಹಾಗೂ ಮೂಲ್ಕಿ ವಿಭಾಗದ ಸಂಘಟನಾ ಪ್ರಮುಖ್ ಪುಷ್ಪರಾಜ್ ಕುಳಾಯಿ, ಸಹ ಸಂಚಾಲಕ ದೇವದಾಸ್ ಕೊಳುವೈಲು, ಸಂಘ ಪರಿವಾರದ ಸುಕೇಶ್ ಪಾವಂಜೆ, ವಿನೋದ್‌ಕುಮಾರ್ ಕೊಳುವೈಲು, ನರೇಂದ್ರ ಪ್ರಭು, ತುಕರಾಮ್, ಕೇಶವ, ನಿತೇಶ್, ಮನೋಜ್‌ಕುಮಾರ್ ಸಹಿತ ಇತರರು ಉಪಸ್ಥಿತರಿದ್ದರು.

Mulki-16111701

Comments

comments

Comments are closed.

Read previous post:
Kinnigoli-14111707
ದೇಂದಡ್ಕ ದೇವಳದಲ್ಲಿ ಸಂಭ್ರಮದ ದೀಪೋತ್ಸವ

ಕಿನ್ನಿಗೋಳಿ: ಕವತ್ತಾರು ಪುತ್ತೂರಿನ ದೇಂದಡ್ಕ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಳದಲ್ಲಿ ರಂಗ ಪೂಜೆ, ದೀಪೋತ್ಸವ ಹಾಗೂ ಅಂಗಾರಕ ಸಂಕಷ್ಠಿ ಪೂಜೆಯು ಜರುಗಿತು. ಹಳೆಯಂಗಡಿ ವಿಶ್ವಕರ್ಮ ಭಜನಾ ಮಂಡಳಿ ಹಾಗೂ...

Close