ಕಿಲ್ಪಾಡಿ : ಧರ್ಮಸ್ಥಳದಿಂದ ನೆರವು

ಕಿಲ್ಪಾಡಿ:  ಕಿಲ್ಪಾಡಿ ಶ್ರೀ ಕೋರ‍್ದಬು ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಈ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಂದು ಲಕ್ಷ ರೂ. ನೆರವನ್ನು ನೀಡಲಾಗಿದೆ.
ಮಂಜೂರಾದ 1 ಲಕ್ಷ ರೂ. ಡಿ.ಡಿಯನ್ನು ಯೋಜನೆಯ ಶಿಮಂತೂರು ಒಕ್ಕೂಟದ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್‌ರವರು, ದೈವಸ್ಥಾನದ ಅಧ್ಯಕ್ಷ ಶಿವರಾಮರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಉಮರಬ್ಬ, ಮೂಲ್ಕಿ ವಲಯದ ಮೇಲ್ವಿಚಾರಕಿ ನಿಶ್ಮೀತಾ. ವಿ, ಶಿಮಂತೂರು ಒಕ್ಕೂಟದ ಕೋಶಾಧಿಕಾರಿ ಶಂಕರ ಪಡಂಗ , ರಮೇಶ್, ಗುರಿಕಾರ ಕಿಶೋರ್, ಪ್ರಮುಖರಾದ ಮಾಧವ ಪೂಜಾರಿ, ಸತೀಶ್ ಕಿಲ್ಪಾಡಿ, ಪ್ರಕಾಶ್ ದೇವಾಡಿಗ, ಮೋಹನ್ ಶೆಟ್ಟಿ, ನರಸಿಂಹ, ಆನಂದ, ಮತ್ತಿತರರು ಉಪಸ್ಥಿತರಿದ್ದರು.

Mulki-16111702

Comments

comments

Comments are closed.

Read previous post:
Mulki-16111701
ಜಾಗರಣ ವೇದಿಕೆಯಿಂದ ಶಿಕ್ಷಣಕ್ಕೆ ನೆರವು

ಹಳೆಯಂಗಡಿ: ಇಲ್ಲಿನ ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ ಮಂಡಲದ ವತಿಯಿಂದ ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಸಿಡಿಮದ್ದು ವ್ಯವಹಾರವನ್ನು ಮುಖ್ಯ ಪೇಟೆಯಲ್ಲಿ ನಡೆಸಿದ್ದು ಅದರಲ್ಲಿ ಬಂದಂತಹ ಲಾಭಾಂಶವನ್ನು ಸಮಾಜ...

Close