ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ

ಪಡುಪಣಂಬೂರು : ಸಮಾಜದ ಬೆಳವಣಿಗೆಯಲ್ಲಿ ಯುವ ಸಮುದಾಯದ ಪಾತ್ರ ಹಿರಿದಾಗಿದೆ. ಸೂಕ್ತವಾದ ಮಾರ್ಗದರ್ಶನ ಸಿಕ್ಕಲ್ಲಿ ಅವರಲ್ಲೂ ಸಾಮಾಜಿಕ ಚಟುವಟಿಕೆಯ ಚಿಂತನೆ ಅರಳಲು ಸಾಧ್ಯವಿದೆ. ಸಂಘ ಸಂಸ್ಥೆಗಳ ಮೂಲಕ ವೇದಿಕೆಯನ್ನು ನಿರ್ಮಿಸಲು ಸಮುದಾಯ ಸಹಕಾರ ನೀಡಿದಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಜಾಗೃತಿ ಕಾರ್ಯಕ್ರಮ ನಡೆಸಬಹುದು ಎಂದು ಮೂಲ್ಕಿ ಅರಮನೆಯ ಗೌತಮ್ ಜೈನ್ ಹೇಳಿದರು.
ಪಡುಪಣಂಬೂರಿನ ಮೂಲ್ಕಿ ಅರಮನೆಯಲ್ಲಿ ವಿವಿಧ ಸಂಘಟನೆಗಳ ಮೂಲಕ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಹಳೆಯಂಗಡಿಯ ಹಿರಿಯ ವೈದ್ಯರಾದ ಡಾ.ಗುರುಪ್ರಸಾದ ನಾವಡ ಶಿಬಿರಕ್ಕೆ ಚಾಲನೆ ನೀಡಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಸದಸ್ಯ ಉಮೇಶ್ ಪೂಜಾರಿ, ಮಾಜಿ ಸದಸ್ಯ ಸಂಪತ್ ಕುಮಾರ್ ಜೈನ್, ಸುಂದರ ದೇವಾಡಿಗ ಪಡುಪಣಂಬೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಕರುಣಾಕರ ಶೆಟ್ಟಿಗಾರ್ ಕಲ್ಲಾಪು, ಪಡುಪಣಂಬೂರು ಸೇವಾ ಪ್ರತಿನಿಧಿ ಸವಿತಾ ಶರತ್ ಬೆಳ್ಳಾಯರು, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ಧರ್ಮಾನಂದ ಶೆಟ್ಟಿಗಾರ್ ತೋಕೂರು, ಮುಕ್ಕ ಶ್ರೀನಿವಾಸ ಕಾಲೇಜಿನ ಪ್ರಾಂಶುಪಾಲ ಮನೋಜ್ ವರ್ಮ, ಉಪಪ್ರಾಂಶುಪಾಲೆ ಲಾವಣ್ಯ ವರ್ಮ, ದಂತ ವೈದ್ಯಕೀಯ ವಿಭಾಗದ ಡಾ. ಕೆವಿನ್ ಪಾಯಸ್, ಡಾ. ಲಕ್ಷ್ಮೀ, ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕರಾದ ಅಶೋಕ್ ಪೂಜಾರಿ, ಶ್ಯಾಮ್‌ಪ್ರಸಾದ್ ಪಡುಪಣಂಬೂರು, ಕಿರಣ್ ಕುಮಾರ್ ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದರು.
ಶಿಬಿರವನ್ನು ಪಡುಪಣಂಬೂರು ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ, ಪಡುಪಣಂಬೂರು ಯುವಕ
ಮಂಡಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ 10ನೇ ತೋಕೂರು ಇದರ ಸಂಯುಕ್ತ ಆಶ್ರಯದಲ್ಲಿ ಮುಕ್ಕದ ಶ್ರೀನಿವಾಸ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ನ ಸಹಕಾರದಲ್ಲಿ ಜರುಗಿತು.
ನವೀನ್ ಕುಮಾರ್ ಶೆಟ್ಟಿ ಎಡ್ಮೆಮಾರ್ ಸ್ವಾಗತಿಸಿ, ನಿರೂಪಿಸಿದರು.

Mulki-16111703

Comments

comments

Comments are closed.

Read previous post:
Mulki-16111702
ಕಿಲ್ಪಾಡಿ : ಧರ್ಮಸ್ಥಳದಿಂದ ನೆರವು

ಕಿಲ್ಪಾಡಿ:  ಕಿಲ್ಪಾಡಿ ಶ್ರೀ ಕೋರ‍್ದಬು ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಈ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಂದು ಲಕ್ಷ ರೂ. ನೆರವನ್ನು ನೀಡಲಾಗಿದೆ. ಮಂಜೂರಾದ 1...

Close