ಗ್ರಾ.ಪಂ. ತ್ಯಾಜ್ಯ ನಿರ್ವಹಣೆಗೆ ಗರಿಷ್ಠ ಪ್ರಯತ್ನ

ಕಿನ್ನಿಗೋಳಿ: ಜನರು ಕಸ ತಂದು ಎಲ್ಲೆಂದರಲ್ಲಿ ಬಿಸಾಡುವುದು ಸರಿಯಲ್ಲ, ಪಂಚಾಯಿತಿ ತ್ಯಾಜ್ಯ ನಿರ್ವಹಣೆಗೆ ಪ್ರಯತ್ನ ನಡೆಸುತ್ತಿದೆ. ಆನರು ಕಸದ ಬಗ್ಗೆ ಗಮನ ನೀಡುವುದು ಆದ್ಯ ಕರ್ತವ್ಯ ಎಲ್ಲದಕ್ಕೂ ಗ್ರಾಮ ಪಂಚಾಯಿತಿ ದೂರುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಎಂ.ಆರ್.ರವಿ ಹೇಳಿದರು.
ಹಳೆಯಂಗಡಿ ಇಂದಿರಾನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ
ದ.ಕ. ಜಿಲ್ಲಾ ಪಂಚಾಯಿತಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಹಾಗೂ ಮಂಗಳೂರು ಡಾ| ಎಮ್. ವಿ.ಶೆಟ್ಟಿ ಕಾಲೇಜು ಸಮಾಜ ಕಾರ್ಯ ವಿಭಾಗದ ಸಹಕಾರದಲ್ಲಿ ಮಂಗಳವಾರ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ನಮ್ಮ ಕಸ – ನಮ್ಮ ಹೊಣೆ ಎಂಬ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಅಧ್ಯಕ್ಷತೆ ವಹಿಸಿದ್ದರು.
ಡಾ| ಎಮ್,ವಿ. ಶೆಟ್ಟಿ ಕಾಲೇಜು ಉಪನ್ಯಾಸಕಿ ನಿವೇದಿತಾ ಎಂ. ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಳೆಯಂಗಡಿ ಗ್ರಾ.ಪಂ.ನ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ವಸಂತ ಬೆರ್ನಾಡ್, ಚಂದ್ರಕುಮಾರ್ ಸಸಿಹಿತ್ಲು, ಅಬ್ದುಲ್ ಅಝಿಜ್, ಆಬ್ದುಲ್ ಖಾದರ್, ಅಬ್ದುಲ್ ಬಶೀರ್ ಸಾಗ್, ಶರ್ಮಿಳಾ ಎಸ್. ಕೋಟ್ಯಾನ್, ಬೇಬಿ ಸುಲೋಚನ, ಚಿತ್ರಾ ಸುರೇಶ್, ಸುಗಂಧಿ, ಕಾರ್ಯದರ್ಶಿ ಕೇಶವ ದೇವಾಡಿಗ, ಜಿಲ್ಲಾ ಪಂಚಾಯಿತಿ ನೆರವು ಘಟಕದ ಸಹ ಸಂಯೋಜಕಿ ಮಂಜುಳಾ, ದ.ಕ.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಹಳೆಯಂಗಡಿ ಮಹಿಳಾ ಮಂಡಲದ ಅಧ್ಯಕ್ಷೆ ಸುಜಾತಾ ವಾಸುದೇವ್, ಇಂದಿರಾನಗರದ ಸಂಗಮ್ ಮಹಿಳಾ ಮಂಡಲದ ಅಧ್ಯಕ್ಷೆ ಸುಜಾತಾ, ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಉಪಸ್ಥಿತರಿದ್ದರು.
ಹಳೆಯಂಗಡಿ ಗ್ರಾ.ಪಂ. ಪಿಡಿಒ ಅಬೂಬಕ್ಕರ್ ಸ್ವಾಗತಿಸಿದರು, ಡಾ.ಎಂ.ವಿ.ಶೆಟ್ಟಿ ಕಾಲೇಜಿನ ಅಶ್ವಿನಿ ವಂದಿಸಿದರು, ಮಂಜುಷಾ ಹಾಗೂ ಆಶಾ ನಿರೂಪಿಸಿದರು.

Kinnigoli-17111701

Comments

comments

Comments are closed.