ಮಕ್ಕಳಲ್ಲಿ ಪ್ರತಿಭೆಗೆ ಅವಕಾಶ ನೀಡಿ

ಹಳೆಯಂಗಡಿ: ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳಲು ಅವರಲ್ಲಿನ ಆಂತರಿಕ ಪ್ರತಿಭೆಗಳಿಗೆ ವೇದಿಕೆಯನ್ನು ನಿರ್ಮಿಸಬೇಕು, ಕ್ರೀಡೆ, ಕಲೆ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಾಗ ಅವರಲ್ಲೂ ಮನೋಬಲ ಹೆಚ್ಚುವಂತಾಗುತ್ತದೆ ಎಂದು ಹಿರಿಯ ಸಾಹಿತಿ ಎಚ್.ಶಕುಂತಳಾ ಭಟ್ ಹೇಳಿದರು.
ಹಳೆಯಂಗಡಿಯ ಯುವತಿ ಮತ್ತು ಮಹಿಳಾ ಮಂಡಳದ ಸಭಾಂಗಣದಲ್ಲಿ ನಡೆದ ಮಕ್ಕಳ ದಿನಾಚರಣೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಜಲಜಾ ಶುಭ ಹಾರೈಸಿದರು.
ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಯನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಯುವಕ ಮಂಡಲದ ಕೋಶಾಽಕಾರಿ ಯತೀಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಳೆಯಂಗಡಿಯ ಯುವತಿ ಮತ್ತು ಮಹಿಳಾ ಮಂಡಳಿ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ,
ರಜತ ಸೇವಾ ಟ್ರಸ್ಟ್ ನ ಇವರ ಸಂಯುಕ್ತ ಆಶ್ರಯದಲ್ಲಿ ಸಂಯೋಜಿಸಲಾಗಿತ್ತು.
ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ ವಾಸುದೇವ ಸ್ವಾಗತಿಸಿದರು, ಕೋಶಾಧಿಕಾರಿ ಪ್ರೇಮಲತಾ ಯೋಗೀಶ್ ಬಹುಮಾನಿತ ಪಟ್ಟಿ ವಾಚಿಸಿದರು, ಪ್ರಧಾನ ಕಾರ್ಯದರ್ಶಿ ರಾಜೇಶ್ವರೀ ನಿರೂಪಿಸಿದರು. ಯುವತಿ ಮಂಡಳದ ಅಧ್ಯಕ್ಷೆ ದಿವ್ಯಶ್ರಿ ವಂದಿಸಿದರು.

Kinnigoli-18111704

 

Comments

comments

Comments are closed.

Read previous post:
Kinnigoli-18111703
ಸ್ವಚ್ಚ ಪಡುಪಣಂಬೂರು ಅಭಿಯಾನಕ್ಕೆ ಚಾಲನೆ

ತೋಕೂರು: ಗ್ರಾಮೀಣ ಭಾಗದಲ್ಲಿ ಪ್ರಧಾನಿಯವರ ಪರಿಕಲ್ಪನೆಯ ಸ್ವಚ್ಚತಾ ಅಭಿಯಾನಕ್ಕೆ ವಿಶೇಷ ಜಾಗೃತಿ ಮೂಡಿಸಿರುವುದರಿಂದ ನಗರಕ್ಕಿಂತ ಹೆಚ್ಚು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಸ್ವಚ್ಚತೆಯ ಬಗ್ಗೆ ಅರಿವನ್ನು ಮೂಡಿಸಿಕೊಂಡಿದ್ದಾರೆ. ಪಂಚಾಯತ್‌ಗಳು...

Close