ಗೋಕರ್ಣನಾಥೇಶ್ವರ ಕಾಲೇಜು ರಾ.ಸೇ.ಯೋ. ವಾರ್ಷಿಕ ಶಿಬಿರ

ಕಿನ್ನಿಗೋಳಿ:  ಸಮಾಜದಲ್ಲಿ ಯಶಸ್ವಿ ಜೀವನ ಸಾಗಿಸಲು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು, ಸಮಾಜ ಸೇವೆಯ ಅರಿವು ನಾಯಕತ್ವ ಗುಣಗಳನ್ನು ಪಡೆಯಲು ರಾಷ್ಟ್ರೀಯ ಸೇವಾ ಯೋಜನೆಯಿಂದ ದೊರೆಯುತ್ತದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು.
ಶುಕ್ರವಾರ ಕೊಲ್ಲೂರು ದ.ಕ.ಹಿ.ಪ್ರಾ. ಶಾಲೆಯಲ್ಲಿ ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜು ರಾ.ಸೇ.ಯೋ. ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗೋಕರ್ಣನಾಥೇಶ್ವರ ಕಾಲೇಜು ಪ್ರಿನ್ಸಿಪಾಲ್ ಡಾ. ಗಂಗಾಧರ ಬಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಜೀವನ ಕೃಷಿ ಬದುಕಿನ ಅರಿವನ್ನು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲು ಅಲ್ಲದೇ ತಮ್ಮ ಜೀವನದಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಮನೋದೈರ್ಯ ತರಲು ಇಂತಹ ಶಿಬಿರಗಳು ಸಹಕಾರಿ ಎಂದು ಹೇಳಿದರು.
ಶಿಬಿರಾಧಿಕಾರಿ ಡಾ| ಆಶಾಲತಾ ಎಸ್ . ಸುವರ್ಣ ಮಾತನಾಡಿ ಗಾಂಧೀಜಿಯ ಸರಳ ರಾಮ ರಾಜ್ಯದ ಕನಸಿನಂತೆ ರಾ. ಸೇ. ಯೋಜನೆಯ ಘಟಕಗಳು ದೇಶದ ಎಲ್ಲಾ ವಿ. ವಿ ಗಳಲ್ಲಿ ಕಾರ್ಯವೆಸಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಶಿಬಿರಗಳು ಪೂರಕವಾಗಿದೆ ಎಂದು ಹೇಳಿದರು.
ಮಂಗಳೂರು ಶ್ರೀವೆಂಕಟೇಶ ಶಿವಭಕ್ತಿ ಯೋಗ ಸಂಘದ ಕಾರ್ಯದರ್ಶಿ ವಸಂತ ಕಾರಂದೂರು, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕೊಲ್ಲೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೋಭಾರಾಣಿ , ಕೊಲ್ಲೂರು ದ.ಕ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾಕ್ಷಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಸಪಳಿಗ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ನಾಯ್ಕ್ , ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಐತಪ್ಪ ಸಾಲ್ಯಾನ್, ರಾ.ಸೇ.ಯೋ. ಘಟಕದ ನಾಯಕರಾದ ಶರೀಫ್ ಎಚ್. ಕೆ, ಐಶ್ವರ್ಯ ಉಪಸ್ಥಿತರಿದ್ದರು.
ಡಾ. ಉಮ್ಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-18111702

Comments

comments

Comments are closed.

Read previous post:
Kinnigoli-18111701
ಸುರತ್ಕಲ್ ಗೋವಿಂದದಾಸ ಕಾಲೇಜು ರಾ. ಸೇ. ಯೋ. ವಾರ್ಷಿಕ ಶಿಬಿರ

 ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಹಾಗೂ ಸಾಮರಸ್ಯದ ಬದುಕು ಕಲಿಯಬಹುದು. ಎಂದು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘದ...

Close