ಮಹಿಳೆಯರಿಗೆ ವಿಶೇಷ ಗ್ರಾಮ ಸಭೆ

ಮೂಲ್ಕಿ: ತೊಟ್ಟಿಲು ತೂಗುವ ಕೈ ಜಗವನ್ನೇ ಆಳಬಹುದು ಎಂಬ ಮಾತಿಗೆ ಅನುಗುಣವಾಗಿ ಮಹಿಳೆಯರು ಸ್ವಾವಲಂಭಿಗಳಾಗಿ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಸಂಪನ್ನರಾದರೆ ದೌರ್ಜನ್ಯಗಳನ್ನು ಮೆಟ್ಟಿ ನಿಂತು ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ನಾಗರತ್ನ ಹೇಳಿದರು.
ಕಿಲ್ಪಾಡಿ ಪಂಚಾಯಿತಿಯ ಆಶ್ರಯದಲ್ಲಿ ಕೆಂಚನಕೆರಯ ಲಿಂಗಪ್ಪಯ್ಯ ಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ತಾಯಿ ತನ್ನ ಮಕ್ಕಳಿಗೆ ಮೂಲ ಸಂಸ್ಕಾರ ಒದಗಿಸುವ ಮೂಲಕ ಉತ್ತಮ ನಾಗರೀಕರನ್ನಾಗಿಸಲು ಪ್ರಯತ್ನಿಸಬೇಕು ಗ್ರಾಮೀಣ ಪ್ರದೇಶಗಳಲ್ಲಿ ಹೊರ ಜಿಲ್ಲೆಯ ಜನರಿಂದ ನಡೆಯುವ ಬಾಲ್ಯ ವಿವಾಹ ಪದ್ದತಿ, ಹಾಗೂ ಮಹಿಳಾ ದೌರ್ಜನ್ಯಗಳನ್ನು ಸಹಾಯವಾಣಿಗೆ ತಿಳಿಸುವ ಮೂಲಕ ಸಹಾಯ ಪಡೆದುಕೊಳ್ಳ ಬಹುದು. ಪೋಲೀಸು ಠಾಣೆಯಲ್ಲಿಯೂ ಮಹಿಳೆಯರ ದೂರಿಗಾಗಿ ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗಿದ್ದು ಮಹಿಳೆಯರಿಗೆ ಅವರು ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡುತ್ತಾರೆ ಎಂದರು.
ಸಂಪನ್ಮೂಲ ವ್ಯಕ್ತಿ ನಂದಾ ಪಾಯಸ್ ಮಾತನಾಡಿ,ಮಹಿಳೆಯರಿಗೆ ಸಮಾನತೆಯ ಹಕ್ಕು ಇದೆ ಆದರೆ ಮಹಿಳೆಯರೇ ಮಹಿಳಾ ದ್ವೇಶಿಯಾಗಬಾರದು ಮಹಿಳೆಯರ ಸಮಸ್ಯೆಗಳನ್ನು ಅಥೈಸಿ ಅವರಿಗೆ ಸಹಕಾರ ನೀಡುವುದು ಆದ್ಯ ಕರ್ತವ್ಯವಾಗಬೇಕು ೧೦೯೧ ಸಹಾಯವಾಣಿಯನ್ನು ಸಂಪರ್ಕಿಸಿ ಸಹಾಯ ಸಹಕಾರ ಪಡೆದುಕೊಳ್ಳಲು ಸಾಧ್ಯ ಎಂದರು.
ಚಚೆ: ಗ್ರಾಮೀಣ ಪ್ರದೇಶದ ಬಡ ವರ್ಗದ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಎನ್ನುತ್ತಾರೆ ಆದರೆ ಸರಕಾರಿ ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ. ಬಿ.ಪಿ.ಎಲ್ ಸಹಿತ ಸರಕಾರಿ ಸೌಲಭ್ಯ ಪಡೆಯುವ ಎಲ್ಲರೂ ಸರಕಾರಿ ಶಾಲೆಗೆ ಕಳುಹಿಸುವಂತಾಗಬೇಕು ಎಂದು ಸದಸ್ಯೆ ದಮಯಂತಿ ಹೇಳಿದರು. ಪ್ರೇಮಲತಾ ಜಯಂತ್ ಮಾತನಾಡಿ ಎಲ್ಲರಿಗೂ ಸರಕಾರಿ ನೌಕರಿ ಹಿಡಿಯುವ ಆಸೆ ಇದೆ ಈ ಕಾರಣಕ್ಕೆ ಒಂದು ಕುಟುಂಬಕ್ಕೆ ಒಂದೇ ಸರಕಾರಿ ನೌಕರಿ ಎಂಬ ಕಾನೂನು ಇರಬೇಕು ಎಂದರು. ನಂದಾ ಪಾಯಸ್ ಮಾತನಾಡಿ, ಎಲ್ಲರಿಗೆ ಸರಕಾರಿ ಹುದ್ದೆ ಬೇಕು ಎನ್ನುವ ಬದಲು ಸ್ವಾವಲಂಭಿಗಳಾಗಲು ಪ್ರಯತ್ನಿಸಬೇಕು ಇದೀಗ ವಿವಿಧ ಇಲಾಖೆಯ ವಿವಿಧ ಯೋಜನೆಯಡಿ ಬಹಳಷ್ಟು ಅನುದಾನಗಳಿವೆ ಮಹಿಳೆಯರಿಗಾಗಿ ಉತ್ತಮ ಯೋಜನೆಗಳಿವೆ ಇವುಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ರಾವ್ ವಹಿಸಿದ್ದರು, ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು,ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ,ಉಪಾಧ್ಯಕ್ಷೆ ಯಶೋಧಾ ಶೆಟ್ಟಿ,ಮಹಿಳಾ ಪೋಲೀಸರಾದ ಸಬೀಹಾ ಬಾನು ಮತ್ತು ಬಸವಲಿಂಗಮ್ಮ ಉಪಸ್ಥಿತರಿದ್ದರು ಹರಿಶ್ಚಂದ್ರ ಸ್ವಾಗತಿಸಿ ನಿರೂಪಿಸಿದರು.

Kinnigoli-18111702

Comments

comments

Comments are closed.

Read previous post:
Kinnigoli-18111702
ಗೋಕರ್ಣನಾಥೇಶ್ವರ ಕಾಲೇಜು ರಾ.ಸೇ.ಯೋ. ವಾರ್ಷಿಕ ಶಿಬಿರ

ಕಿನ್ನಿಗೋಳಿ:  ಸಮಾಜದಲ್ಲಿ ಯಶಸ್ವಿ ಜೀವನ ಸಾಗಿಸಲು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳು, ಸಮಾಜ ಸೇವೆಯ ಅರಿವು ನಾಯಕತ್ವ ಗುಣಗಳನ್ನು ಪಡೆಯಲು ರಾಷ್ಟ್ರೀಯ ಸೇವಾ ಯೋಜನೆಯಿಂದ ದೊರೆಯುತ್ತದೆ ಎಂದು ದ.ಕ. ಜಿಲ್ಲಾ...

Close