ನ. 19 : ಕಿರೆಂ ನವೀಕೃತ ಚರ್ಚ್ ಉದ್ಘಾಟನೆ

ಕಿನ್ನಿಗೋಳಿ: ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸವಿರುವ ಕ್ರಿ.ಶ. 1780 ರಲ್ಲಿ ಕಿರೆಂ ಇಗರ್ಜಿ ಮುಳಿ ಹುಲ್ಲಿನಿಂದ ಮಾಡಿದ್ದು 1783 ರಲ್ಲಿ ಹೆಂಚಿನ ಆಲಯವಾಗಿ ನವೀಕರಣಗೊಂಡಿತ್ತು. ಆದರೆ ಕ್ರಿ.ಶ. 1784 ಫೆಬ್ರವರಿ 24 ಬುಧವಾರ ಮೈಸೂರಿನ ರಾಜ ಟಿಪ್ಪು ಸುಲ್ತಾನನ ಆಕ್ರಮಣಕ್ಕೆ ತುತ್ತಾದಾಗ ಐಕಳಬಾವಗುತ್ತು , ಏಳಿಂಜೆ ಅಂಗಡಿಗುತ್ತು, ತಾಳಿಪಾಡಿ ಗುತ್ತಿನ ಬಂಟ ಮನೆತನದವರು ಕಿರೆಂ ಇಗರ್ಜಿಯನ್ನು ರಕ್ಷಿಸಿದರು ನಂತರ ಕ್ರಿ.ಶ. 1794 ರಲ್ಲಿ ಇಗರ್ಜಿ ಪುನರುಜ್ಜೀವನಗೊಂಡಿತ್ತು. ಕ್ರಿ.ಶ.1903 ಈ ಕ್ಷೇತ್ರ ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಟ್ಟಿತು. 1943ರಲ್ಲಿ ಪುನ: ನವೀಕರಣಗೊಂಡಿತ್ತು ಇದೀಗ ಕಿರೆಂ ರೆಮದಿ ಅಮ್ಮನವರ ಇಗರ್ಜಿ ಸುಮಾರು 1.25 ಕೋಟಿರೂ ವೆಚ್ಚದಲ್ಲಿ ನವೀಕರಣಗೊಂಡು ನವೆಂಬರ್ 19 ರಂದು ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮ ಪ್ರಾಂಥ್ಯದ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ರವರಿಂದ ಲೋಕಾರ್ಪಣೆ ಗೊಳ್ಳಲಿದೆ ಎಂದು ಕಿರೆಂ ರೆಮದಿ ಅಮ್ಮನವರ ಚರ್ಚ್ ಪ್ರಧಾನ ಧರ್ಮಗುರು ರೆ.ಫಾ. ಫಾ. ವಿಕ್ಟರ್ ಡಿಮೆಲ್ಲೊ ಹೇಳಿದರು.
ಕಿರೆಂ ಚರ್ಚ್‌ನಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರ್ನಾಟಕ ಸರಕಾರದ ರೂ 50ಲಕ್ಷ ಅನುದಾನ ಮತ್ತು ಊರ ಪರವೂರ ಭಕ್ತಭಿಮಾನಿಗಳ ಸಹಕಾರದಿಂದ ಸುಸಜ್ಜಿತ ಚರ್ಚ್ ನಿರ್ಮಿಸಲಾಗಿದ್ದು ದೇವಾಲಯದ ಮೇಲ್ಚಾವಣಿ, ನವೀಕೃತ ಬಲಿಪೀಠ, ಸುಂದರ ಗೋಪುರ ನಿರ್ಮಿಸಲಾಗಿದೆ ಎಂದರು.
ನವೆಂಬರ್ 19 ಸಂಜೆ 4 ಗಂಟೆಗೆ ಚರ್ಚ್ ಲೋಕಾರ್ಪಣೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ಮಂಗಳೂರು ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಘನ ಉಪಸ್ಥಿತಿಯಲ್ಲಿ ಪ್ರಾರಂಭಗೊಳ್ಳಲಿದ್ದು ಸಂಜೆ5.30 ಗಂಟೆಗೆ ಮೆರವಣಿಗೆ ಮತ್ತು ಬಲಿಪೂಜೆ ಆ ನಂತರ ಸಂಜೆ 6.45 ಕ್ಕೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗುಲ್ಬರ್ಗಾ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ರಾಬರ್ಟ್ ಮಿರಾಂದ, ಮಂಗಳೂರು ಶಾಸಕ ಜೆ. ಆರ್. ಲೊಬೊ, ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ.ಫಾ. ವಿನ್ಸೆಂಟ್ ಮೊಂತೆರೊ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಭಾಗವಹಿಸಲಿದ್ದಾರೆ.
ಈ ಸಂದರ್ಭ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ, ಕಾರ್ಯದರ್ಶಿಅನಿತಾ ಡಿಸೋಜಾ ಸದಸ್ಯರಾದ ಸೆವರಿನ್ ಲೋಬೊ, ಸಂತಾನ್ ಡಿಸೋಜಾ ಉಪಸ್ಥಿತರಿದ್ದರು.

Kinnigoli-18111701

Comments

comments

Comments are closed.

Read previous post:
Kinnigoli-17111702
ನಡುಗೋಡು: ಮನೆ ಮನೆಗೆ ಕಾಂಗ್ರೇಸ್ ಭೇಟಿ

ಕಿನ್ನಿಗೋಳಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಕಾರ್ಯಕ್ರಗಳನ್ನು ಹಮ್ಮಿಕೊಂಡಿದ್ದು ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಉದ್ದೇಶದಲ್ಲಿ ಕಾಂಗ್ರೇಸ್ ಪಕ್ಷ ಮನೆ ಮನೆ ಭೇಟಿ ಅಭಿಯಾನ ಆರಂಭಿಸಿದೆ ಎಂದು...

Close