ಸುರತ್ಕಲ್ ಗೋವಿಂದದಾಸ ಕಾಲೇಜು ರಾ. ಸೇ. ಯೋ. ವಾರ್ಷಿಕ ಶಿಬಿರ

 ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಹಾಗೂ ಸಾಮರಸ್ಯದ ಬದುಕು ಕಲಿಯಬಹುದು. ಎಂದು ಸುರತ್ಕಲ್ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಇ. ಜನಾರ್ದನ್ ಹೇಳಿದರು.
ಶುಕ್ರವಾರ ಗುತ್ತಕಾಡು ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗೋವಿಂದದಾಸ ಕಾಲೇಜು ಪ್ರಿನ್ಸಿಪಾಲ್ ಡಾ. ಬಿ. ಮುರಳೀಧರ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜು ಜೀವನ ಭವಿಷ್ಯದ ಮೆಟ್ಟಿಲು ವಿದ್ಯಾರ್ಥಿಗಳು ದುಶ್ಟಟಕ್ಕೆ ಬಲಿಯಾಗದೆ ಶಿಕ್ಷಣವನ್ನು ಸದುಪಯೋಗ ಪಡಿಸಿ ಯಶಸ್ಸು ಪಡೆದು ಸಾಧನೆ ಮಾಡಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಗುತ್ತಕಾಡು ದ.ಕ. ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಗೋವಿಂದದಾಸ ಕಾಲೇಜು ವೈಸ್ ಪ್ರಿನ್ಸಿಪಾಲ್ ಪ್ರೊ. ಕೃಷ್ಣಮೂರ್ತಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ, ಶಿಬಿರಾಧಿಕಾರಿ ಬಬಿತಾ ನವೀನ್‌ಚಂದ್ರ ಯೋಜನೆಯ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್, ನಿಶಾ, ಶಶಾಂಕ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಪ್ರತೀಕ್ಷಾ ಪ್ರಸ್ತಾವನೆಗೈದರು. ದೀಕ್ಷಾ ಸ್ವಾಗತಿಸಿದರು. ಚೈತ್ರಾ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-18111701

Comments

comments

Comments are closed.

Read previous post:
Kinnigoli-18111701
ನ. 19 : ಕಿರೆಂ ನವೀಕೃತ ಚರ್ಚ್ ಉದ್ಘಾಟನೆ

ಕಿನ್ನಿಗೋಳಿ: ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸವಿರುವ ಕ್ರಿ.ಶ. 1780 ರಲ್ಲಿ ಕಿರೆಂ ಇಗರ್ಜಿ ಮುಳಿ ಹುಲ್ಲಿನಿಂದ ಮಾಡಿದ್ದು 1783 ರಲ್ಲಿ ಹೆಂಚಿನ ಆಲಯವಾಗಿ ನವೀಕರಣಗೊಂಡಿತ್ತು. ಆದರೆ ಕ್ರಿ.ಶ. 1784...

Close