ಕೆರೆಕಾಡು-ಬೆಳ್ಳಾಯರು ರಸ್ತೆ : ಕಾಂಕ್ರೀಟೀಕರಣಕ್ಕೆ ಚಾಲನೆ

ಕಿನ್ನಿಗೋಳಿ : ಸರಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳು ನಿಯಮಿತ ಕಾಲಮಿತಿಯಲ್ಲಿ ನಡೆಯಬೇಕು, ಕಳೆದ ನಾಲ್ಕು ವರ್ಷಗಳಿಂದ ಅತಿ ಹೆಚ್ಚು ಅನುದಾನಗಳು ಕ್ಷೇತ್ರದಲ್ಲಿ ವಿನಿಯೋಗಿಸಲಾಗಿದೆ. ಹಿಂದಿನ ಯಾವುದೇ ಸರಕಾರವೂ ಸಹ ಇಷ್ಟೊಂದು ಗರಿಷ್ಠ ಅನುದಾನಗಳನ್ನು ನೀಡಿಲ್ಲ. ರಸ್ತೆಗಳು ಡಾಮರೀಕರಣಕ್ಕಿಂತ ಹೆಚ್ಚಾಗಿ ಕಾಂಕ್ರೀಟೀಕರಣಗೊಂಡರೆ ಮಾತ್ರ ದೀರ್ಘ ಕಾಲ ಬಾಳಿಕೆ ಬರುತ್ತದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡಿನ ಪೂಪಾಡಿಕಟ್ಟೆ ರಸ್ತೆಗೆ ಶನಿವಾರ ವಿವಿಧ ಯೋಜನೆಗಳಿಂದ 85ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಯಶೋಧಾ ಪೂಜಾರಿ ತೆಂಗಿನಕಾಯಿ ಒಡೆಯುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮೂಲ್ಕಿ ನಗರ ಪಂಚಾಯಿತಿ ಸದಸ್ಯರಾದ ಬಿ.ಎಂ.ಆಸಿಫ್, ಪುತ್ತುಬಾವ, ಅಶೋಕ್ ಪೂಜಾರ್, ಬಶೀರ್ ಕುಳಾಯಿ, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಜ್, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕೋಶಾಧಿಕಾರಿ ನಂದಾ ಪಾಯಸ್, ಮೂಲ್ಕಿ ಬ್ಲಾಕ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸುನೀತಾ ರೋಡ್ರಿಗಸ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಪಡುಪಣಂಬೂರು ಗ್ರಾ.ಪಂ. ಸದಸ್ಯ ಉಮೇಶ್ ಪೂಜಾರಿ, ಮಾಜಿ ಸದಸ್ಯ ನಾಗೇಶ್ ಬಂಜನ್, ಮೆಸ್ಕಾಂ ಸಲಹೆಗಾರರಾದ ಧರ್ಮಾನಂದ ತೋಕೂರು, ಲತಾ ಕಲ್ಲಾಪು, ವಾಹಿದ್ ತೋಕೂರು, ಮಾಜಿ.ತಾ.ಪಂ. ಸದಸ್ಯ ರಾಜು ಕುಂದರ್, ಪ್ರಮುಖರಾದ ದಿನೇಶ್ ಸುವರ್ಣ, ಲೋಕೇಶ್ ಕೋಟ್ಯಾನ್, ಗ್ರಾಮಸ್ಥರಾದ ದಿವಾಕರ ಶೆಟ್ಟಿಗಾರ್, ರವೀಂದ್ರನ್, ಅಶೋಕ್ ದೇವಾಡಿಗ, ಪಡುಪಣಂಬೂರು ವಲಯ ಕಾಂಗ್ರೆಸ್ ಅಧ್ಯಕ್ಷೆ ಸವಿತಾ ಶರತ್ ಬೆಳ್ಳಾಯರು, ಬೆಳ್ಳಾಯರು ಬೂತ್ ಅಧ್ಯಕ್ಷ ಸತೀಶ್ ಮಡಿವಾಳ, ಕೆ.ಆರ್.ಐ.ಡಿ.ಎಲ್‌ನ ಇಂಜಿನಿಯರ್ ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಗ್ರಾಮಾಭಿವೃದ್ಧಿಯ ವಿಶೇಷ ಯೋಜನೆಯಿಂದ 50 ಲಕ್ಷ ರೂ., ಪರಿಶಿಷ್ಟ ಪಂಗಡದ ವಿವೇಚನಾ ನಿಧಿಯಿಂದ ಮೀಸಲು ಅನುದಾನದಿಂದ 25 ಲಕ್ಷ ರೂ., ಬೃಹತ್ ನೀರಾವರಿ ಸರಬರಾಜು ಯೋಜನೆಯ ಅಭಿವೃದ್ಧಿಯಿಂದ 10 ಲಕ್ಷ ರೂ.ಗಳ ಒಟ್ಟು 85 ಲಕ್ಷ ರೂ.ಗಳ ವೆಚ್ಚದಲ್ಲಿ ಎರಡು ತಿಂಗಳ ಕಾಲಾವಧಿಯಲ್ಲಿ ರಸ್ತೆಯು ಸಂಪೂರ್ಣ ಕಾಂಕ್ರೀಟೀಕರಣಗೊಳ್ಳಲಿದೆ.
ಕೆ.ಅಭಯಚಂದ್ರ ಜೈನ್
ಮೂಲ್ಕಿ ಮೂಡಬಿದಿರೆ ಶಾಸಕರು

Kerekadu-19111701

Comments

comments

Comments are closed.

Read previous post:
Haleyangadi-19111701
ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ : ಧನ ಸಹಾಯ

ಹಳೆಯಂಗಡಿ : ಹಿಂದೂ ಜಾಗರಣ ವೇದಿಕೆ ಹಳೆಯಂಗಡಿ ಮಂಡಲದ ವತಿಯಿಂದ ಇಂದಿರಾನಗರದ ಸಂಜೀವ ಅವರಿಗೆ ಧನ ಸಹಾಯ ನೀಡಲಾಯಿತು. ಹಳೆಯಂಗಡಿ ಜಾಗರಣ ವೇದಿಕೆಯ ಅಧ್ಯಕ್ಷ ಹರೀಶ್ ಹಳೆಯಂಗಡಿ, ತುಕರಾಮ್...

Close