ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ : ರಕ್ತದಾನದ ಮೂಲಕ ಜೀವ ಉಳಿಸಿ ನಮ್ಮ ಜೀವನದಲ್ಲಿ ಸಾರ್ಥಕತೆ ಧನ್ಯತೆ ಕಂಡುಕೊಳ್ಳಬಹುದು ಎಂದು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಎಂ. ಪ್ರಥ್ವಿರಾಜ ಆಚಾರ್ಯ ಹೇಳಿದರು.
ಆದರ್ಶ ಬಳಗ ಕೊಡೆತ್ತೂರು, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಕಿನ್ನಿಗೋಳಿ, ಸೌತ್ ಕೆನರಾ ಪೋಟೋಗ್ರಾಫರ‍್ಸ್ ಎಸೋಸಿಯೇಶನ್ ಮೂಲ್ಕಿ ವಲಯ, ಶ್ರೀ ವೀರಮಾರುತಿ ವ್ಯಾಯಮ ಶಾಲೆ ರಾಜರತ್ನಪುರ, ಸಾರ್ವಜನಿಕ ಶ್ರೀ ಬಾಲಗಣೇಶೋತ್ಸವ ಸಮಿತಿ ರಾಜರತ್ನಪುರ, ಹಳೆವಿದ್ಯಾರ್ಥಿ ಸಂಘ ನಡುಗೋಡು, ಭ್ರಾಮರೀ ಮಹಿಳಾ ಸಮಾಜ ಮನ್ನಬೆಟ್ಟು, ಸಜ್ಜನ ಬಂಧುಗಳು ಕಿನ್ನಿಗೋಳಿ ಆಶ್ರಯದಲ್ಲಿ ಎಜೆ ಆಸ್ಪತ್ರೆ ಮಂಗಳೂರು ಸಹಯೋಗದಿಂದ ಕಿನ್ನಿಗೋಳಿ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಭಾನುವಾರ ನಡೆದ ರಕ್ತ ನೀಡುವ ಮೂಲಕ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಎಜೆ ಆಸ್ಪತ್ರೆಯ ರಕ್ತನಿಧಿ ಘಟಕದ ಮುಖ್ಯಾಧಿಕಾರಿ ಗೋಪಾಲಕೃಷ್ಣ , ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಆದರ್ಶಬಳಗದ ಅಧ್ಯಕ್ಷ ಸೂರಜ್ ಶೆಟ್ಟಿ , ಸೌತ್ ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ್ ಕೊಡ್ಮನ್, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ನಡುಗೋಡು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ಕಟೀಲು ಗ್ರಾ. ಪಂ. ಸದಸ್ಯ ತಿಲಕ್‌ರಾಜ್ ಶೆಟ್ಟಿ, ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ತರಬೇತುದಾರ ಕೇಶವಕರ್ಕೇರಾ, ಭ್ರಾಮರೀ ಮಹಿಳಾ ಸಮಾಜದ ರೇವತಿ ಪುರುಷೋತ್ತಮ್, ಅನುಷಾ ಕರ್ಕೇರಾ, ಸುಜಯ ಶೆಟ್ಟಿ , ಶ್ರೀ ಕಾಳಿಕಾಂಬಾ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ, ಅನಿತಾ ಪ್ರಥ್ವಿರಾಜ್ ಆಚಾರ್ಯ, ರಾಜರತ್ನಪುರ ಶ್ರೀ ಬಾಲಗಣೇಶೋತ್ಸವ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಸಜ್ಜನ ಬಂಧುಗಳು ಸಂಘಟನೆಯ ಮಿಥುನ್ ಕೊಡೆತ್ತೂರು, ಹರಿಪ್ರಸಾದ್ ಆಚಾರ್ಯ, ನಿಶಾಂತ್ ಕಿಲೆಂಜೂರು, ಶರತ್ ಕುಮಾರ್, ಕೆ. ಬಿ. ಸುರೇಶ್, ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-19111705

Comments

comments

Comments are closed.

Read previous post:
Kinnigoli-19111708
ಭಜನೆ ಮಾಡೋಣ ಬನ್ನಿರೋ ಕಾರ್ಯಕ್ರಮ

ಕಿನ್ನಿಗೋಳಿ : ಯಾಗದ, ತಪಸ್ಸು ಮೂಲಕವಾಗಿ ಮೂಲಕವಾಗಿ ಭಗವಂತನನ್ನು ಒಲಿಸಿಕೊಳ್ಳವುದಕ್ಕಿಂತ ಸುಲಭವಾಗಿ ಭಕ್ತಿಯಿಂದ ಭಜನೆಯ ಮೂಲಕವಾಗಿ ಭಗವಂತನ್ನು ಮೆಚ್ಚಿಸಿ ನಮ್ಮ ಪೂರ್ವಿಕರು ಸಂತುಷ್ಟರಾಗಿದ್ದಾರೆ ಎಂದು ಕಟೀಲು ಪದವಿ ಕಾಲೇಜು...

Close