ಕಿನ್ನಿಗೋಳಿ ಬಸ್ಸು ಚಾಲಕರ-ನಿರ್ವಾಹಕರ ಸಂಘದ ವಾರ್ಷಿಕೋತ್ಸವ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದಲ್ಲಿ ಬಡವರ್ಗದವರಿಗೆ ಬಸ್ಸು ಪ್ರಮುಖ ಸಾರಿಗೆ ವಾಹನವಾಗಿದೆ ಬಸ್ಸು ಚಾಲಕ-ನಿವಾರ್ಹಕರು ಆ ಊರಿನ ರಾಯಬಾರಿಗಳು ಇದ್ದಂತೆ ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿ ಶನಿವಾರ ನಡೆದ ಕಿನ್ನಿಗೋಳಿ ಬಸ್ಸು ಚಾಲಕರ ನಿರ್ವಾಹಕರ ಸಂಘದ ೪ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ. ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ ರಾಜ್ಯದ ಉಳಿದ ಜಿಲ್ಲೆಗಳಿಗಿಂತ ದಕ್ಷಿಣಕನ್ನಡ ಉಡುಪಿ ಜಿಲ್ಲೆಯ ಜನರು ಅದೃಷ್ಟವಂತರು ಖಾಸಗಿ ಬಸ್ಸು ಗಳ ಸೇವೆ ಕ್ಷಮತೆ ಅತ್ಯುತ್ತಮವಾಗಿದೆ ಎಂದು ಹೇಳಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಬಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು.
ಜಯರಾಮ ಶೆಟ್ಟಿ ಸಾಲೆತ್ತೂರು ಮತ್ತು ವೆಂಕಟರಮಣ ತೋಕೂರು ಹಾಗೂ ಹಿರಿಯ ಚಾಲಕ-ನಿರ್ವಾಹಕರಾದ ವಿಠಲ ಮೂಲ್ಯ , ಗುಲಾಂ ಹುಸೇನ್, ಸಿಲ್ವೆಸ್ಟರ್ ರೈಬೆಲ್ಲೋ, ಸೈಯದ್ ಇಸ್ಮಾಯಿಲ್ , ರವಿ ಜೋಗಿ, ಚಂದ್ರ ಕುಮಾರ್, ಸಂತೋಷ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಮೂಡಬಿದ್ರಿ, ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಕಿನ್ನಿಗೋಳಿ ಬಸ್ಸು ಚಾಲಕರ ನಿರ್ವಾಹಕರ ಸಂಘದ ಅಧ್ಯಕ್ಷ ರಾಜೇಶ್, ಗೌರವಾಧ್ಯಕ್ಷ ಭಾಸ್ಕರ ಪೂಜಾರಿ, ಕಾನೂನು ಸಲಹೆಗಾರ ಶಶಿಧರ ಅಡ್ಕತ್ತಾಯ ಉಪಸ್ಥಿತರಿದ್ದರು.
ಕಾರ್ಯದರ್ಶಿ ಕ್ಯಾನೆಟ್ ಕ್ಯಾಸ್ತಲಿನೋ ವರದಿ ವಾಚಿಸಿದರು. ಪ್ರಕಾಶ್ ಆಚಾರ್ ವಂದಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-19111701

Comments

comments

Comments are closed.

Read previous post:
Kinnigoli-19111702
ವನಿತಾ ಯುವತಿ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಹಿಳೆ ಕೀಳರಿಮೆಗಳನ್ನು ಬಿಟ್ಟು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಮುಂಬಯಿ ಉದ್ಯಮಿ ಸಮಾಜ ಸೇವಕಿ ರತ್ನಾ ಎಸ್. ಕೋಟ್ಯಾನ್ ಹೇಳಿದರು ಕಿನ್ನಿಗೋಳಿ...

Close