ಭಜನೆ ಮಾಡೋಣ ಬನ್ನಿರೋ ಕಾರ್ಯಕ್ರಮ

ಕಿನ್ನಿಗೋಳಿ : ಯಾಗದ, ತಪಸ್ಸು ಮೂಲಕವಾಗಿ ಮೂಲಕವಾಗಿ ಭಗವಂತನನ್ನು ಒಲಿಸಿಕೊಳ್ಳವುದಕ್ಕಿಂತ ಸುಲಭವಾಗಿ ಭಕ್ತಿಯಿಂದ ಭಜನೆಯ ಮೂಲಕವಾಗಿ ಭಗವಂತನ್ನು ಮೆಚ್ಚಿಸಿ ನಮ್ಮ ಪೂರ್ವಿಕರು ಸಂತುಷ್ಟರಾಗಿದ್ದಾರೆ ಎಂದು ಕಟೀಲು ಪದವಿ ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಹೇಳಿದರು.
ಪಕ್ಷಿಕೆರೆ ಗಣೇಶ ಮಂಟಪದಲ್ಲಿ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ರಜತೋತ್ಸವ ಸಂಭ್ರಮ – 2018 ಅಂಗವಾಗಿ ಭಾನುವಾರ ನಡೆದ ದ್ವಾದಶ ಚಿಂತನೆ ಭಜನೆ ಮಾಡೋಣ ಬನ್ನಿರೋ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಈ ಸಂದರ್ಭ ಹಿರಿಯ ವೇದ ವಿದ್ವಾಂಸ ಅಂಗಡಿಮಾರು ಕೃಷ್ಣ ಭಟ್ ಅವರನ್ನು ಗೌರವಿಸಲಾಯಿತು.
ಅತ್ತೂರು ಬೈಲು ವೆಂಕಟರಾಜ ಉಡುಪ, ಸಮಿತಿಯ ಗೌರವಾಧ್ಯಕ್ಷ ಪಂಜದ ಗುತ್ತು ಶಾಂತಾರಾಮ ಶೆಟ್ಟಿ , ಪ್ರಧಾನ ಅರ್ಚಕ ಪಂಜ ವಾಸುದೇವ ಭಟ್, ಶ್ಯಾಮರಾಯ ಶೆಟ್ಟಿ ಗೋಳಿದಡಿ, ಕೆಮ್ರಾಲ್ ಗ್ರಾಮ ಪಂ. ಸದಸ್ಯ ಸುಧಾಕರ ಶೆಟ್ಟಿ , ಶ್ರೀನಿವಾಸ ಶೆಟ್ಟಿ , ಮಹಾಬಲ ಕುಲಾಲ್ , ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಪಿ. ಕೆ. ಶೆಟ್ಟಿ , ಜಯರಾಮ ಆಚಾರ್ಯ, ಸೇಸಪ್ಪ, ಜಗನ್ನಾಥ ಶೆಟ್ಟಿ ಮಮ್ಮೆಟ್ಟು ಉಪಸ್ಥಿತರಿದ್ದರು.
ರಜತ ವರ್ಷದ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಸ್ವಾಗಸಿದರು. ರಾಜೇಶ್ ದಾಸ್ ವಂದಿಸಿದರು. ಉಪಸನ್ಯಾಸಕ ಜಯಾನಂದ ಕಾರ್ಯಕ್ರಮ ನಿರೂಪಿಸಿದರು.

Kinnigoli-19111708

Comments

comments

Comments are closed.

Read previous post:
Kinnigoli-19111704
ನರೇಗಾ ಯೋಜನೆಯನ್ನು ಸದುಪಯೋಗಪಡಿಸಿ

ಕಿನ್ನಿಗೋಳಿ : (ನರೇಗಾ) ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಗತಿಯಾಗಿದ್ದು, ಕಚ್ಚಾ ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆ. ಎಲ್ಲಾ ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯ...

Close