ಭಜನೆಯಿಂದ ಸಂಕಷ್ಟ ಪರಿಹಾರ

ಕಿನ್ನಿಗೋಳಿ : ಭಜನಾ ಸಂಕೀರ್ತನೆಯಿಂದ ಮನಸ್ಸಿನ ಸಂಕಷ್ಟ ಪರಿಹಾರ ಕಾಣುತ್ತದೆ. ಮಕ್ಕಳಲ್ಲಿ ಭಜನಾ ಪರಂಪರೆಯನ್ನು ಬೆಳೆಸಬೇಕು. ಆಧುನಿಕ ಯುಗದ ಟಿವಿ ಮೊಬೈಲ್‌ನಿಂದ ಮಕ್ಕಳನ್ನು ದೂರವಿರಿಸಿರಿ ಎಂದು ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ತೋಕೂರು ಶ್ರೀ ಸುಬ್ರಮಣ್ಯ ಮಹಾಗಣಪತಿ ದೇವಳದ ಸ್ಕಂದ ಮಂಟಪದಲ್ಲಿ ತೋಕೂರು ದೇವಳದ ಷಷ್ಠಿ ಮಹೋತ್ಸವದ ಪ್ರಯುಕ್ತ ಸುವರ್ಣ ಮಹೋತ್ಸವ ಆಚರಿಸುತ್ತಿರುವ ತೋಕೂರು ಯುವಕ ಸಂಘ, ಮಹಿಳಾ ಮಂಡಲ ಹಾಗೂ ಹಳೆಯಂಗಡಿಯ ಪೂಜಾ ಫ್ರೆಂಡ್ಸ್‌ನ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್ ಸ್ಪರ್ಧೆಗೆ ಚಾಲನೆ ನೀಡಿ ದೇವರ ಆರಾಧನೆ ಏಕಾಗ್ರತೆಯ ಮನಸ್ಸಿನ ಪ್ರಕ್ರಿಯೆ ಹಾಗಾಗಿ ಶ್ರದ್ಧೆ ಮತ್ತು ಭಕ್ತಿ ಒಂದಾಗಬೇಕು, ಸಂಸ್ಕೃತಿ ಮತ್ತು ಸಂಸ್ಕಾರದ ಅನಾವರಣವೂ ಸಹ ಭಜನಾ ಸಂಕೀರ್ತನೆಯಿಂದ ಸಾಧ್ಯ ಎಂದರು.
ಹಳೆಯಂಗಡಿ ಪೂಜಾ ಫ್ರೆಂಡ್ಸ್‌ನ ಗೌರವಾಧ್ಯಕ್ಷ ಜೈಕೃಷ್ಣ ಕೋಟ್ಯಾನ್ ಉಪಸ್ಥಿತರಿದ್ದರು.

ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿದರು, ಮಹಿಳಾ ಮಂಡಳಿಯ ಅಧ್ಯಕ್ಷೆ ವಿನೋದಾ ಭಟ್ ವಂದಿಸಿದರು, ಸಂಘದ ಸಹ ಕಾರ್ಯದರ್ಶಿ ಹೇಮಂತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ಅವಿಭಜಿತ ಜಿಲ್ಲೆಯ 10 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
Kinnigoli-19111706 Kinnigoli-19111707

Comments

comments

Comments are closed.

Read previous post:
Kerekadu-19111701
ಕೆರೆಕಾಡು-ಬೆಳ್ಳಾಯರು ರಸ್ತೆ : ಕಾಂಕ್ರೀಟೀಕರಣಕ್ಕೆ ಚಾಲನೆ

ಕಿನ್ನಿಗೋಳಿ : ಸರಕಾರದ ಎಲ್ಲಾ ಅಭಿವೃದ್ಧಿ ಯೋಜನೆಗಳು ನಿಯಮಿತ ಕಾಲಮಿತಿಯಲ್ಲಿ ನಡೆಯಬೇಕು, ಕಳೆದ ನಾಲ್ಕು ವರ್ಷಗಳಿಂದ ಅತಿ ಹೆಚ್ಚು ಅನುದಾನಗಳು ಕ್ಷೇತ್ರದಲ್ಲಿ ವಿನಿಯೋಗಿಸಲಾಗಿದೆ. ಹಿಂದಿನ ಯಾವುದೇ ಸರಕಾರವೂ ಸಹ...

Close