ನರೇಗಾ ಯೋಜನೆಯನ್ನು ಸದುಪಯೋಗಪಡಿಸಿ

ಕಿನ್ನಿಗೋಳಿ : (ನರೇಗಾ) ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಗತಿಯಾಗಿದ್ದು, ಕಚ್ಚಾ ರಸ್ತೆಗಳು ಕಾಂಕ್ರೀಟೀಕರಣಗೊಂಡಿವೆ. ಎಲ್ಲಾ ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯ ಸದುಪಯೋಗಪಡಿಸಬೇಕು ಎಂದು ದ.ಕ.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಳದ ಬಳಿ ಕಾಂಕ್ರೀಟೀಕರಣಗೊಂಡ ಮುಖ್ಯ ರಸ್ತೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನರೇಗಾ ಯೋಜನೆಯಲ್ಲಿ ೭.೫ ಲಕ್ಷ ರೂ. ಮತ್ತು ಪಂಚಾಯತ್‌ನ ೧೪ನೇ ಹಣಕಾಸು ಯೋಜನೆಯಿಂದ ೩.೫ ಲಕ್ಷ ರೂ.ಗಳನ್ನು ರಸ್ತೆಯ ಅಭಿವೃದ್ಧಿಯಲ್ಲಿ ಬಳಸಲಾಗಿದೆ ಎಂದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಜಿಲ್ಲಾ ಬಿಜೆಪಿ ಸದಸ್ಯ ಕೆ.ಭುವನಾಭಿರಾಮ ಉಡುಪ, ಮೂಲ್ಕಿ ಮೂಡಬಿದಿರೆ ಬಿಜೆಪಿ ಅಧ್ಯಕ್ಷ ಈಶ್ವರ ಕಟೀಲು, ಕಿನ್ನಿಗೋಳಿ ಶಕ್ತಿಕೇಂದ್ರದ ಅಧ್ಯಕ್ಷ ಸಂತೋಷ್ ಆರ್. ಶೆಟ್ಟಿ, ಪಡುಪಣಂಬೂರು ಗ್ರಾ.ಪಂ. ಸದಸ್ಯರಾದ ಲೀಲಾ ಬಂಜನ್, ಸಂತೋಷ್‌ಕುಮಾರ್, ಸಂಪಾವತಿ, ಹೇಮಂತ್ ಅಮೀನ್, ಪುಷ್ಪಾವತಿ, ದಿನೇಶ್ ಕುಲಾಲ್, ವನಜಾ, ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಪ್ರಶಾಂತ್‌ಕುಮಾರ್ ಬೇಕಲ್, ಪದ್ಮನಾಭ ಶೆಟ್ಟಿ, ತೋಕೂರು ಫೇಮಸ್ ಯೂತ್ ಕ್ಲಬ್‌ನ ಸುಽರ್ ಭಂಡಾರಿ, ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿಯ ರಾಜೇಶ್ ಎಸ್. ದಾಸ್, ಸಂತೋಷ್‌ಕುಮಾರ್, ಲೀಲಾ ಬಂಜನ್, ಹೇಮಂತ್ ಅಮೀನ್ ಉಪಸ್ಥಿತರಿದ್ದರು.

Kinnigoli-19111704

Comments

comments

Comments are closed.

Read previous post:
Kinnigoli-19111706
ಭಜನೆಯಿಂದ ಸಂಕಷ್ಟ ಪರಿಹಾರ

ಕಿನ್ನಿಗೋಳಿ : ಭಜನಾ ಸಂಕೀರ್ತನೆಯಿಂದ ಮನಸ್ಸಿನ ಸಂಕಷ್ಟ ಪರಿಹಾರ ಕಾಣುತ್ತದೆ. ಮಕ್ಕಳಲ್ಲಿ ಭಜನಾ ಪರಂಪರೆಯನ್ನು ಬೆಳೆಸಬೇಕು. ಆಧುನಿಕ ಯುಗದ ಟಿವಿ ಮೊಬೈಲ್‌ನಿಂದ ಮಕ್ಕಳನ್ನು ದೂರವಿರಿಸಿರಿ ಎಂದು ಕಿನ್ನಿಗೋಳಿ ಯುಗಪುರುಷ...

Close