ಕಠಿಣ ಪರಿಶ್ರಮದಿಂದ ಸಾಧನೆ

ಕಿನ್ನಿಗೋಳಿ : ಕ್ರೀಡಾಳುಗಳು ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸಿಕ್ಕ ಅವಕಾಶಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕು ಗ್ರಾಮೀಣ ಭಾಗದಲ್ಲಿ ಟಾರ್ಪೋಡೊಸ್ ಸಂಸ್ಥೆ ಕ್ರೀಡಾಳುಗಳಿಗೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದು ಕಬಡ್ಡಿ ಮತ್ತು ಪುಟ್‌ಬಾಲ್ ಪಂದ್ಯಾಟದ ರಾಷ್ಟ್ರೀಯ ಮಟ್ಟದ ಆಟಗಾರ ಹಾಗೂ ತೀರ್ಪುಗಾರ ವಿಜಯ ಸುವರ್ಣ ಹೇಳಿದರು.
ತೋಕೂರು ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಮಹಿಳೆಯರ ಹಾಗೂ ಪುರುಷರ ಶಟ್ಲ್ ಬಾಡ್ಮಿಂಟನ್ ಸ್ಪರ್ಧಾ ಕೂಟಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳೆಯರ ಡಬಲ್ಸ್ ಪಂದ್ಯಾಟದ ಜೊತೆಗೆ ಮಿಕ್ಸ್‌ಡ್ ಡಬಲ್ಸ್ ಪಂದ್ಯಾಟದಲ್ಲಿ ಅವಿಭಜಿತ ಜಿಲ್ಲೆಯಿಂದ ಒಟ್ಟು ೨೫ ತಂಡಗಳು ಭಾಗವಹಿಸಿದೆ.
ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಬಾಡ್ಮಿಂಟನ್ ಆಟಗಾರರಾದ ಸುನಿಲ್ ಪೈ ಬೆಂಗಳೂರು, ಪುಟ್ಟರಾಜು, ಸುದೇಶ್, ತರಬೇತುದಾರರಾದ ವಿವೇಕ್, ಸಂತೋಷ್, ಮಾಸ್ಟರ‍್ಸ್ ಬಾಡ್ಮಿಂಟನ್ ಸ್ಪರ್ಧಾ ಕೂಟದ ರಾಷ್ಟ್ರೀಯ ಮಟ್ಟದ ಆಟಗಾರರಾದ ಶಾಲಿನಿ ಶೆಟ್ಟಿ ಉಡುಪಿ, ಕನ್ಯಾಕುಮಾರಿ, ರಿಯಾಜ್ ಮತ್ತಿತರರು ಉಪಸ್ಥಿತರಿದ್ದರು.
ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-19111703

Comments

comments

Comments are closed.

Read previous post:
Kinnigoli-19111701
ಕಿನ್ನಿಗೋಳಿ ಬಸ್ಸು ಚಾಲಕರ-ನಿರ್ವಾಹಕರ ಸಂಘದ ವಾರ್ಷಿಕೋತ್ಸವ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದಲ್ಲಿ ಬಡವರ್ಗದವರಿಗೆ ಬಸ್ಸು ಪ್ರಮುಖ ಸಾರಿಗೆ ವಾಹನವಾಗಿದೆ ಬಸ್ಸು ಚಾಲಕ-ನಿವಾರ್ಹಕರು ಆ ಊರಿನ ರಾಯಬಾರಿಗಳು ಇದ್ದಂತೆ ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ...

Close